ಬೆಂಗಳೂರು: ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಕಿಂಗ್ಪಿನ್, ಮಾಜಿ ಮೇಯರ್ ಸಂಪತ್ ರಾಜ್ ಬಂಧನ ನಂತರ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಡಿ.ಜೆ ಹಳ್ಳಿ ಗಲಭೆ ಹಾಗೂ ಕಾವಲ್ ಬೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿಸಿದ್ದೇ ಮಾಜಿ ಮೇಯರ್ ಸಂಪತ್ ರಾಜ್. ಅಖಂಡ ಶ್ರೀನಿವಾಸಮೂರ್ತಿ ಅವರನ್ನು ರಾಜಕೀಯವಾಗಿ ಮುಗಿಸಲು ಅವರ ಮನೆಗೆ ಬೆಂಕಿ ಹಾಕಿ ಸಜೀವ ದಹನಕ್ಕೆ ಸಂಪತ್ ರಾಜ್ ಪ್ಲಾನ್ ಮಾಡಿದ್ದರು. ಆದರೆ, ಗಲಭೆ ನಡೆದ ದಿನ ಅಖಂಡ ಶ್ರೀನಿವಾಸ್ ಮನೆಯಲ್ಲಿ ಇರದೇ ಇದ್ದುದರಿಂದ ಬಜಾವ್ ಆದರು ಎಂದು ಸಿಸಿಬಿ ಪೊಲೀಸರು ಕೋರ್ಟ್ಗೆ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಹೀಗಾಗಿ ಸಂಪತ್ರಾಜ್ನನ್ನು ಕಳೆದ ವಾರ ಸಿಸಿಬಿ ಪೊಲೀಸರು ಬಂಧಿಸಿದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡುವುದಾಗಿ ಅಖಂಡ ಶ್ರೀನಿವಾಸ್ ಹೇಳಿದ್ದರು. ಡಿ.ಕೆ ಶಿವಕುಮಾರ್-ಹಾಗೂ ಅಖಂಡ ಭೇಟಿ ಕಳೆದ ಬುಧವಾರವೇ ನಿಗಧಿಯಾಗಿತ್ತು. ಆದರೆ, ಡಿಕೆಶಿ ಮಗಳ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಭೇಟಿ ಇಂದಿಗೆ ಮುಂದೂಡಲಾಗಿತ್ತು. ಇಂದು ಬೆಳಗ್ಗೆ ಡಿಕೆಶಿ ಭೇಟಿಯಾದ ಅಖಂಡ ಶ್ರೀನಿವಾಸ ಮೂರ್ತಿ, ಮಾಜಿ ಮೇಯರ್ ಸಂಪರ್ ರಾಜ್ ವಿರುದ್ಧ ಕಾಂಗ್ರೆಸ್ ಪಕ್ಷ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಖಂಡ ಭೇಟಿ ನಂತರ ಸುದ್ದಿಗಾಗರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಸಿಬಿ ಪೊಲೀಸರು ಬಿಜೆಪಿ ಹಾಗೂ ರಾಜ್ಯ ಸರ್ಕಾರದ ಒತ್ತಡದಿಂದ ಸಂಪತ್ ರಾಜ್ ವಿರುದ್ಧ ಚಾರ್ಜ್ಶೀಟ್ ಹಾಕಿದ್ದಾರೆ. ಏಕಾಏಕಿ ಯಾವುದೇ ತೀಮಾನ ಇಲ್ಲ, ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಡಿ.ಜೆ ಹಳ್ಳಿ ಗಲಭೆಗೆ ಸಂಪತ್ ರಾಜ್ ಕುಮ್ಮಕ್ಕು ನೀಡಿರುವುದರಿಂದ ಕಾಂಗ್ರೆಸ್ಗೆ ಡ್ಯಾಮೇಜ್ ಆಗಿಲ್ವಾ ಎಂಬ ಪ್ರಶ್ನೆಗೆ, ಮಾಧ್ಯಮಗಳೇ ಕಾಂಗ್ರೆಸ್ಗೆ ಡ್ಯಾಮೇಜ್ ಮಾಡುತ್ತಿವೆ ಎಂದು ಡಿಕೆಶಿ ಮಾಧ್ಯಮಗಳನ್ನೇ ದೂರಿದ್ದಾರೆ.

ಈ ನಡುವೆ, ಡಿಕೆಶಿ ಭೇಟಿ ನಂತರ ಮಾತನಾಡಿದ ಕಾಂಗ್ರೆಸ್ ಶಾಸಕರೂ ಆಗಿರುವ ಅಖಂಡ ಶ್ರೀನಿವಾಸ ಮೂರ್ತಿ, ಸಂಪತ್ ರಾಜ್ ವಿರುದ್ಧ ಪಕ್ಷದಿಂದ ಇನ್ನೂ ಯಾವುದೇ ಕ್ರಮ ಆಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿಗೆ ಹೇಳಬೇಕಾದ ಎಲ್ಲಾ ವಿಚಾರಗಳನ್ನೂ ಎಲ್ಲವನ್ನು ಹೇಳಿದ್ದೇನೆ. ಅವರೇ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








