love jihad
‘ಲವ್ ಜಿಹಾದ್’ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಬಿಜೆಪಿ ಆಡಳಿತ ರಾಜ್ಯಗಳು ಸಜ್ಜು..!
ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗ್ತಾಯಿರುವ ಬೆನ್ನಲ್ಲೇ ಲವ್ ಜಿಹಾದ್ ಗೆ ಕಡಿವಾಣ ಹಾಕಲು ಬಿಜೆಪಿ ಆಡಳಿತ ವಿರುವ ರಾಜ್ಯಗಳ ಸರ್ಕಾರಗಳು ಮುಂದಾಗಿವೆ. ಕರ್ನಾಟಕ , ಮಧ್ಯಪ್ರದೇಶ, ಉತ್ತರ ಪ್ರದೇಶ ಹರಿಯಾಣ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳು ‘ಲವ್ ಜಿಹಾದ್’ ಗೆ ಬ್ರೇಕ್ ಹಾಕಲು ಕಠಿಣ ಕಾನೂನು ಕ್ರಮ ತರಲು ಹೊರಟಿವೆ.
ಲವ್ ಜಿಹಾದ್
ಲವ್ ಜಿಹಾದ್ ಅಂದರೆ ಮುಸ್ಲಿಂ ಯುವಕ ಹಿಂದೂ ಯುವತಿಯನ್ನ ಮದುವೆಯಾಗಿ, ಬಳಿಕ ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಹೆಸರನ್ನೂ ಬದಲಾಯಿಸಿಕೊಳ್ಳುವುದು ಎಂಬುದು ಹಲವರ ಅಭಿಪ್ರಾಯ. ಆದರೆ ಹಿಂದೂ ಕಾರ್ಯಕರ್ತರು, ಇದು ಹಿಂದೂ ಮಹಿಳೆಯರನ್ನ ಮೋಸ ಮಾಡಿ ಕೆಲವೊಮ್ಮೆ ಬಲವಂತವಾಗಿ, ಯುವತಿಯರನ್ನ ಮೋಸದಿಂದ ಮದುವೆ ಮಾಡಿಕೊಳ್ಳಲು ಮುಸ್ಲಿಂ ಪುರುಷರ ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವೊಮ್ಮೆ ಬಲವಂತವಾಗಿ ಹಿಂದೂ ಯುವತಿಯರನ್ನ ಮುಸ್ಲಿಂ ಯುವಕರು ಮದುವೆಯಾಗಿ ಮತಾಂತರಗೊಳಿಸಿರುವ ಪ್ರಕರಣಗಳು ನಡೆದಿವೆ.
ಆದ್ರೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ವಯಸ್ಕ ಪುರುಷರು ಮತ್ತು ಮಹಿಳೆಯರು ಮತಾಂತರಗೊಳ್ಳಲು ಸ್ವತಂತ್ರರಾಗಿದ್ದಾರೆ ಎನ್ನಲಾಗಿದೆ.
ಯತ್ನಾಳ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ : ಸಾ.ರಾ.ಗೋವಿಂದು
ಮಧ್ಯಪ್ರದೇಶ , ಹರಿಯಾಣ, ಕರ್ನಾಟಕ, ಉತ್ತರಪ್ರದೇಶದಲ್ಲೂ ಲವ್ ಜಿಹಾದ್ ಅಂತ್ಯಗೊಳಿಸಲು ಕಾನೂನು ತರಲು ಸರ್ಕಾರಗಳು ಮುಂದಾಗಿವೆ. ಆದ್ರೆ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಸರ್ಕಾರಗಳು ಈ ಮಸೂದೆಯನ್ನ ತೀವ್ರವಾಗಿ ವಿರೋಧಿಸಿವೆ.
ಕರ್ನಾಟಕ: ಇನ್ನೂ ಕರ್ನಾಟಕದಲ್ಲಿ ಲವ್ ಜಿಹಾದ್ ಮತ್ತು ಗೋಹತ್ಯೆ ನಿಷೇಧಕ್ಕೆ ಶೀಘ್ರವೇ ಕಾನೂನು ಕ್ರಮ ಜಾರಿಯಾಗಲಿದೆ ಎಂದು ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದ್ದರು.
ಹರಿಯಾಣ: ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲು ಅಧ್ಯಯನ ಮತ್ತು ಕರಡು ಸಿದ್ಧಪಡಿಸಲು ಅಧಿಕಾರಿಗಳ ಸಮಿತಿ ಯೊಂದನ್ನು ರಚಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ. ಈ ಬಗ್ಗೆ ಮೊದಲು ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ವಿಜ್ ತಿಳಿಸಿದ್ದಾರೆ. ಅಡ್ವೊಕೇಟ್ ಜನರಲ್ ಕಚೇರಿಯ ಪ್ರತಿನಿಧಿಯೂ ಈ ಸಮಿತಿಯ ಭಾಗವಾಗಲಿದ್ದಾರೆ ಎಂದು ವಿಜ್ ತಿಳಿಸಿದರು. ಈ ಸಮಿತಿಯು ಇತರ ರಾಜ್ಯಗಳು ಜಾರಿಗೆ ಬಂದಂತಹ ಕಾನೂನುಗಳ ಬಗ್ಗೆ ಅಧ್ಯಯನ ಮಾಡಲಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಂದ ವ್ಯಾಕ್ಸಿನೇಷನ್ ಕಾರ್ಯತಂತ್ರದ ಪರಿಶೀಲನೆ
ಉತ್ತರ ಪ್ರದೇಶ: ಇನ್ನೂ ಉತ್ತರಪ್ರದೇಶದಲ್ಲೂ ಲವ್ ಜಿಹಾದ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಮದುವೆ ಹೆಸರಿನಲ್ಲಿ ಮಹಿಳೆಯರ ಮತಾಂತರಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ಜಾರಿಗೆ ತರಲು ಯುಪಿ ಗೃಹ ಇಲಾಖೆ ರಾಜ್ಯ ಕಾನೂನು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದೆ.
ಮಧ್ಯಪ್ರದೇಶ: ಧಾರ್ಮಿಕ ಸ್ವಾತಂತ್ರ್ಯ ಮಸೂದೆ 2020 ಅನ್ನು ಮುಂದಿನ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಲವಂತದ ಮತಾಂತರಕ್ಕೆ ಐದು ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಅನಿವಾರ್ಯ ಎಂದು ಮಿಶ್ರಾ ಹೇಳಿದ್ದಾರೆ.
love jihad
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








