ADVERTISEMENT
Tuesday, June 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಅಮೇರಿಕನ್ ಯಾತ್ರೆ; ನ್ಯೂಯಾರ್ಕ್ ರಾಜ್ಯದ  ಪ್ರವಾಸೋದ್ಯಮದ ಆಕರ್ಷಣೆ ಸ್ಟ್ಯಾಚು ಆಫ್ ಲಿಬರ್ಟಿ, ನಯಾಗಾರ ಮಾತ್ರವಲ್ಲ ಚಾಂಪ್ಲೈನ್ ಸರೋವರೂ ಹೌದು:

Shwetha by Shwetha
November 21, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Saakshatv yatrika episode 10
Share on FacebookShare on TwitterShare on WhatsappShare on Telegram

ಅಮೇರಿಕನ್ ಯಾತ್ರೆ; ನ್ಯೂಯಾರ್ಕ್ ರಾಜ್ಯದ  ಪ್ರವಾಸೋದ್ಯಮದ ಆಕರ್ಷಣೆ ಸ್ಟ್ಯಾಚು ಆಫ್ ಲಿಬರ್ಟಿ, ನಯಾಗಾರ ಮಾತ್ರವಲ್ಲ ಚಾಂಪ್ಲೈನ್ ಸರೋವರೂ ಹೌದು: Saakshatv yatrika episode 10

ನಾನು ನನ್ನ ಮೂರು ವರ್ಷಗಳ ಅಮೆರಿಕಾ ಜೀವನದಲ್ಲಿ ವಾಸವಾಗಿದ್ದುದು 3 ರಾಜ್ಯಗಳಲ್ಲಿ. ಉಳಿದೆಲ್ಲಾ ರಾಜ್ಯಗಳ ಸುತ್ತಿದ್ದು ಒಬ್ಬ ಪ್ರವಾಸಿಯಾಗಿ. ಅದಕ್ಕೇ ಒಬ್ಬ ಪ್ರವಾಸಿಯ ಕಣ್ಣಿಂದ ಮಾತ್ರ ಉಳಿದ ರಾಜ್ಯಗಳ ಬಗ್ಗೆ ಹೇಳಬಹದು. ನಾನು ವಾಸವಾಗಿದ್ದ ರಾಜ್ಯಗಳ ಬಗ್ಗೆ ಮಾತ್ರ ಅಲ್ಲಿನ ಜನಜೀವನ ಕಷ್ಟ ಸುಖಗಳ‌ ಬಗ್ಗೆ ಸ್ವಲ್ಪ ಗಟ್ಟಿಯಾಗಿ ಹೇಳಬಹುದು. ಈಗ ಹೇಳ್ತಾ ಇರೋ ನ್ಯೂಯಾರ್ಕ್ ರಾಜ್ಯವಾಗಲೀ ಉಳಿದ ರಾಜ್ಯಗಳೇ ಆಗಲಿ ಹೆಚ್ಚಾಗಿ ಒಬ್ಬ ಪ್ರವಾಸಿಯ ಕಣ್ಣಿಗೆ ಕಂಡಿದ್ದು ಮಾತ್ರ. ಒಂದು ವಿಷಯ ಹೇಳಿದಾಗ ಅಲ್ಲಿ ಎಲ್ಲವೂ ಚನ್ನಾಗಿದೆ ಅಥವಾ ಬರೀ ಬಡರಾಜ್ಯ ಅಂತಲ್ಲ. ನನ್ನ ಬಹಳ ಸೀಮಿತವಾದ ಓದು ಮತ್ತು ತಿರುಗಾಟದ ಅನುಭವಗಳಷ್ಟೇ. Saakshatv yatrika episode 10

Related posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

June 30, 2026
ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

June 30, 2026

Saakshatv yatrika episode 10

ಕರ್ನಾಟಕದ ಮುಕ್ಕಾಲರಷ್ಟಿರುವ ನ್ಯೂಯಾರ್ಕ್ ರಾಜ್ಯ ಅಮೆರಿಕಾದ ಶಕ್ತಿಶಾಲಿ ರಾಜ್ಯಗಳಲ್ಲಿ ಒಂದು. ಈ ರಾಜ್ಯ ಅಂದ ಕೂಡಲೆ ಕಣ್ಣಮುಂದೆ ಬರುವುದು ಎರಡು ವಿಷಯಗಳು. ಒಂದು ನ್ಯೂಯಾರ್ಕ್ ನಗರ ಅದರಲ್ಲೂ ಸ್ವಾತಂತ್ರ್ಯದೇವಿಯ (ಸ್ಟ್ಯಾಚು ಆಫ್ ಲಿಬರ್ಟಿ)  ಪ್ರತಿಮೆ. ಎರಡನೆಯದು ನಯಾಗರಾ ಜಲಪಾತ. ಇವೆರಡೂ ನ್ಯೂಯಾರ್ಕ್ ರಾಜ್ಯದ ಹೆಗ್ಗಳಿಕೆಗಳು. ಈ ರಾಜ್ಯದ ಒಂದು ವಿಶೇಷವೇನೆಂದರೆ ಮಹಾಸರೋವರ ಮತ್ತು ಮಹಾಸಾಗರ ಎರಡನ್ನೂ ಪಡೆದಿರುವ ಏಕೈಕ ರಾಜ್ಯ. ದಕ್ಷಿಣದಲ್ಲಿ ಅಟ್ಲಾಂಟಿಕ್ ಮಹಾಸಾಗರವಿದ್ದರೆ ವಾಯುವ್ಯ ದಿಕ್ಕಿನಲ್ಲಿ ಈರಿ ಮತ್ತು ಓಂಟಾರಿಯೋ ಮಹಾ ಸರೋವರಗಳಿವೆ.

ಕೈಗಾರಿಕೆ ,ಕೃಷಿ, ಹಣಕಾಸು ಸೇವೆಗಳು ಮುಂತಾದವುಗಳಿಂದ ಅತ್ಯಂತ ಸುಭಿಕ್ಷವಾದ ಈ ರಾಜ್ಯಕ್ಕೆ ಎಂಪೈರ್ ಸ್ಟೇಟ್ ಅಥವಾ ಸಾಮ್ರಾಜ್ಯ ರಾಜ್ಯ ಅನ್ನುತ್ತಾರೆ. ಹಾಗೇ ನ್ಯೂಯಾರ್ಕ್ ನಗರದಲ್ಲಿ ಎಂಫೈರ್ ಸ್ಟೇಟ್ ಬಿಲ್ಡಿಂಗ್ ಎಂಬ ಬೃಹತ್ ಕಟ್ಟಡವಿರುವುದನ್ನ ಗಮನಿಸಿ. ಈಗಾಗಲೇ ಹೇಳಿದಂತೆ ಅಮೇರಿಕಾದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಈ ರಾಜ್ಯ ಒಂದು. ಈ ರಾಜ್ಯದ ಜಿಡಿಪಿ ಅನೇಕ ದೊಡ್ಡ ದೇಶಗಳ ಜಿಡಿಪಿಗಿಂತ ಜಾಸ್ತಿ. ಹೆಚ್ಚಿನ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಈ ರಾಜ್ಯ ಮೇಲಿನ ಸ್ಥಾನಗಳಲ್ಲಿ ಬರುತ್ತವೆ. ಆದರೆ ಬಡವ ಶ್ರೀಮಂತರ ನಡುವಿನ ಅತ್ಯಂತ ಅಂತರವಿರುವುದು ಕೂಡಾ ಈ ರಾಜ್ಯದಲ್ಲೇ.

Saakshatv yatrika episode 10

ಈ ರಾಜ್ಯದ ಇನ್ನೊಂದು ವಿಶಿಷ್ಟವಾದ ಭೌಗೋಳಿಕ ರಚನೆ ನ್ಯೂಯಾರ್ಕಿನ ದಕ್ಷಿಣ ಭಾಗದಲ್ಲಿರುವ ಲಾಂಗ್ ದ್ವೀಪ. ಹೆಸರಿಗೆ ತಕ್ಕಂತೆ ಉದ್ದಕ್ಕಿರುವ ಈ ದ್ವೀಪ ಪ್ರಪಂಚದ ಅತ್ಯಂತ ಜನನಿಬಿಡ ದ್ವೀಪಗಳಲ್ಲಿ ಒಂದು. ಅದರಲ್ಲೂ ಪಶ್ಚಿಮಭಾಗ ನ್ಯೂಯಾರ್ಕ್ ನಗರ ಪರಿಧಿಯಲ್ಲಿ ಬರುವುದರಿಂದ ಅಲ್ಲಿ ಜನಸಂಖ್ಯೆ ಇನ್ನೂ ಜಾಸ್ತಿ. ನಾನು ಬಾಲ್ಟಿಮೋರಿಂದ ಹಾರ್ಟ್‌ಫರ್ಡಿಗೆ ಬರಬೇಕಾದರೆ ಈ ದ್ವೀಪದ ಅತ್ಯಂತ ಸುಂದರವಾದ ದೃಷ್ಯಗಳು ಕಂಡಿದ್ದವು.

ಅದಿರಲಿ, ಈಗ ಅವೆಲ್ಲಾ ಬಿಟ್ಟು ಸ್ವಲ್ಪ ಸ್ವಲ್ಪ ಉತ್ತರಕ್ಕೆ ಬರೋಣ. ಇಲ್ಲೊಂದು ದೊಡ್ಡ ಸರೋವರವಿದೆ, ಚಾಂಪ್ಲೈನ್ ಎಂದು ಹೆಸರು. 170+ ಕಿಲೋಮೀಟರ್ ಉದ್ದದ ಮತ್ತು ಅತೀ ಅಗಲವಾದೆಡೆ 23 ಕಿಲೋಮೀಟರ್ ಇರುವ ಸರೋವರ. ನ್ಯೂಯಾರ್ಕ್ ಮತ್ತು ವರ್ಮೌಂಟ್ ರಾಜ್ಯದ ಗಡಿಯಲ್ಲಿ ಬರುತ್ತದೆ. ಸುತ್ತಮುತ್ತ ಗುಡ್ಡ ಬೆಟ್ಟಗಳಿಂದ, ಮಧ್ಯೆ ಮಧ್ಯೆ ದ್ವೀಪಗಳಿಂದ ಕೂಡಿದ ಕೂಡಿದ ಬೃಹತ್ ಸರೋವರ. ಇಲ್ಲಿ ಹೋಗಿದ್ದು ಸ್ವಲ್ಪ ಅನಿರೀಕ್ಷಿತವಾಗಿಯೇ. ನಾವು ವರ್ಮೌಂಟ್ ಮತ್ತು ನ್ಯೂಹ್ಯಾಂಪ್‌ಶೈರ್ ತಿರುಗಲು ಹೋದಾಗ ನ್ಯೂಯಾರ್ಕಿನ ಬಾರ್ಟ್‌ಲೆಟ್ ಎಂಬಲ್ಲಿ ಕಮ್ಮಿಗೆ ಹೋಟೆಲು ಸಿಕ್ಕಿತ್ತು. ಆಗ ನಾವು ಈ ಸರೋವರ ನೋಡಿದ್ದು, ಇಲ್ಲವಾದರೆ ನಾವು ನೋಡುವ ಸ್ಥಳಗಳ ಪಟ್ಟಿಯಲ್ಲಿ ಈ ಜಾಗ ಇರಲಿಲ್ಲ.

ನಮ್ಮ ಹೋಟೆಲಿದ್ದ ಬಾರ್ಟ್‌ಲೆಟ್ಟಿಗೆ ಬರ್ತಾ ಇರಬೇಕಾದರೆ ಗೂಗಲ್ ಮ್ಯಾಪಿನಲ್ಲಿ ದೂರ ಕೇವಲ 10-20 ಮೈಲಿ ಇದ್ದರೂ ತಲುಪಬೇಕಾದ ಸಮಯವನ್ನ ಸಮಯ ಸರಿಸುಮಾರು ಮುಕ್ಕಾಲು ಗಂಟೆ ತೋರಿಸ್ತಿತ್ತು. ಯಾಕೇ ಅಂತ ತಲೆಕೆರೆದು ಕೊಳ್ತಾ ಇರಬೇಕಾದರೆ ಚಾಂಪ್ಲೈನ್ ಸರೋವರದ ಅರ್ಧ ಭಾಗ ಸೇತುವೆ ಮೂಲಕ ದಾಟಿ ಮಧ್ಯದ ಗ್ರಾಂಡ್ ಐಲ್ ಅನ್ನುವ ದ್ವೀಪವೊಂದಕ್ಕೆ ಬಂದಿದ್ದೆವು. ಅಲ್ಲಿಂದ ಮುಂದೆ ಸೇತುವೆಯಿಲ್ಲ. ಫೆರಿಯಲ್ಲಿ ಸಾಗಬೇಕು. ನಮ್ಮ ಸಿಗಂಧೂರಿನದ್ದಕ್ಕಿಂತ ಸ್ವಲ್ಪ ದೊಡ್ಡದಾದ ಫೆರಿ ಅದು. ಅದನ್ನ ದಾಟಿದ ನಂತರ ಕೇವಲ 5 ನಿಮಿಷಕ್ಕೆ ಹೋಟೆಲ್ ಬಂತು. ಆದರೆ ನಾವು ದಾಟಿದ ಸಮಯ ರಾತ್ರಿಯಾಗಿದ್ದರಿಂದ ಅಲ್ಲಿನ ಸುಂದರ ದೃಶ್ಯಗಳು ಕಾಣಸಿಗಲಿಲ್ಲ.

Saakshatv yatrika episode 10

ಆದರೆ ಆ ನಿರಾಸೆ ತುಂಬಾ ಸಮಯ ಉಳಿಯಲಿಲ್ಲ. ಮರುದಿನ ಈ ಸರೋವರದ ಅನೇಕ ಸುಂದರ ದೃಶ್ಯಗಳು ಸಿಕ್ಕವು. ಅದರಲ್ಲೂ ವಿಶೇಷವಾಗಿ ನ್ಯೂಯಾರ್ಕ್ ಮತ್ತು ವರ್ಮೌಂಟ್ ರಾಜ್ಯಗಳ ಗಡಿಯಲ್ಲಿ (ಚಾಂಪ್ಲೈನ್ ಸರೋವರದ ಪಶ್ಚಿಮ ತೀರಗಳು‌ ನ್ಯೂಯಾರ್ಕ್ ರಾಜ್ಯದಲ್ಲಿಧದರೆ ಪೂರ್ವ ತೀರ ವರ್ಮೌಂಟ್ ರಾಜ್ಯದಲ್ಲಿದೆ) ಹಳೆಯ ವಸಾಹತೊಂದರ ಅವಶೇಷಗಳುಳ್ಳ ಸ್ಥಳವೊಂದು ಕಂಡಿತು. ಸರೋವರದ ಹಿನ್ನೀರಿನಲ್ಲಿರುವ ಬಹಳ ಚಂದದ ಸ್ಥಳ. ಅಲ್ಲಿ ಕೆಲವೆಡೆ ನಿಧಿಯನ್ನ ಹೂತಿಡಲಾಗಿದೆ ಎಂದು ನಂಬಿದ್ದಾರೆ. ಅದಕ್ಕೆ ಕೆಲ ನಿರ್ಬಂಧಿತ ವಲಯಗಳಿವೆ. ಹಾಗೂ ನಿಧಿ ಶೋಧನೆ ಮಾಡಬಾರದೆಂಬ ಎಚ್ಚರಿಕೆಯಿರುವ ಫಲಕಗಳಿವೆ. ನನಗೆ ತೇಜಸ್ವಿಯವರು ಅಲೆಮಾರಿಯ ಅಂಡಮಾನಿನಲ್ಲಿ ಬರೆದ ರಾಸ್ ದ್ವೀಪದ ನೆನಪಾಯಿತು.‌

ಕುತೂಹಲಿಗಳಿಗೆ ಇನ್ನೊಂದು ವಿಷಯ. ಬಹಳ ಹಿಂದೆ ಚಾಂಪ್ಲೈನ್ ಸರೋವರದಲ್ಲಿರಬಹುದಾದ ಭೂತವೋ ಇನ್ನೇನೋ ವಿಚಿತ್ರ ಪ್ರಾಣಿಯ ಬಗ್ಗೆ ಗುಲ್ಲೆದ್ದಿತ್ತು. ಸ್ವಲ್ಪ ಹುಡುಕಿ ನೋಡಿ ಆಸಕ್ತಿಕರವಾದ ವಿಷಯಗಳು ಸಿಗತ್ವೆ.  ಚಾಂಪ್ಲೈನ್ ಸರೋವರದ ಒಂದು ದೃಷ್ಯ. ಎದುರಿಗೆ ಕಾಣುವ ಪ್ರದೇಶಗಳೆಲ್ಲಾ ವರ್ಮೌಂಟ್ ರಾಜ್ಯಕ್ಕೆ ಸೇರಿವೆ. ಮುಂದಿನ‌ ಭಾಗದಲ್ಲಿ ನಯಾಗರಾ ಬಗ್ಗೆ ಹೇಳಿ ಮುಗಿಸ್ತೀನಿ.

Saakshatv yatrika episode 10

ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ

-ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ

ಅಮೇರಿಕನ್ ಯಾತ್ರೆ; ನಾನು ಕಂಡ ನ್ಯೂಯಾರ್ಕ್ ಮತ್ತದರ ಸೂಕ್ಷ್ಮ ಪಕ್ಷಿ ನೋಟ:

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv/status/1329830459920957440?s=19

https://twitter.com/SaakshaTv/status/1329830879460352001?s=19

 

Tags: Saakshatv yatrika episode 10yatrika
ShareTweetSendShare
Join us on:

Related Posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

by Shwetha
June 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

by Shwetha
June 30, 2026
0

ನಿಮ್ಮ ಮತ ನಿಮ್ಮ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಅನಿವಾರ್ಯ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಇಂದಿನಿಂದ ರಾಜ್ಯಾದ್ಯಂತ...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮಾಸ್ ಲೀಡರ್ ಗೆ ಸ್ವಪಕ್ಷೀಯರಿಂದಲೇ ಸಂಚು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿರುವುದರ ಹಿಂದಿದೆ ಭಾರಿ ಲೆಕ್ಕಾಚಾರ :ಕಿಂಗ್ ಮೇಕರ್ ಪಟ್ಟಕ್ಕಾಗಿ ನಡೆಯುತ್ತಿದೆ ಒಳಗೊಳಗೆ ರಾಜಕೀಯ ಯುದ್ಧ

by Shwetha
June 30, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅತಿ ದೊಡ್ಡ ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಈಗ ಕಾಂಗ್ರೆಸ್ ಒಳಾಂಗಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ...

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

by Shwetha
June 30, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ...

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram