ಕೊರೊನಾ 2ನೇ ಅಲೆ : ಮತ್ತೆ ಲಾಕ್ ಡೌನ್ ಬೇಕಾ..?
ನವದೆಹಲಿ : ಅಧ್ಯಕ್ಷ ಚುನಾವಣೆ ಬಳಿಕ ಅಮೆರಿಕಾದಲ್ಲಿ.. ಅದಕ್ಕೂ ಮುನ್ನ ಯೂರೋಪ್ ರಾಷ್ಟ್ರಗಳಲ್ಲಿ.. ದಸರಾ ದೀಪಾವಳಿ ಹಬ್ಬದ ನಂತ್ರ ಭಾರತದಲ್ಲಿ ಕೊರೊನಾ ಕೇಸ್ ಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿರೋದು ವಾಸ್ತವ.
ಡಿಲ್ಲಿಯಲ್ಲಿ ಕಳೆದ 15 ದಿನಗಳಿಂದ ಕೊರೊನಾ ಕೇಸ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಇರೋದು, ದೇಶದ ಪ್ರಮುಖ ರಾಜ್ಯಗಳಾದ ಹರಿಯಾಣ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಮತ್ತೆ ಕೊರೊನಾ ನಿರ್ಬಂಧನೆಗಳು ಜಾರಿ ಆಗುತ್ತಿರೋದನ್ನ ನೋಡಿದ್ರೆ ದೇಶದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗಿರುವುದು ಸ್ಪಷ್ಟವಾಗುತ್ತಿದೆ.
ಅದಲ್ಲೂ ದೇಶದ ಒಟ್ಟಾರೆ ಅಂಕಿಅಂಶಗಳನ್ನು ಗಮನಿಸಿದ್ರೆ ಪ್ರತಿದಿನ 50 ಸಾವಿರದ ಆಸುಪಾಸು ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿವೆ.
ಮತ್ತೆ ಲಾಕ್ ಡೌನ್ ಬೇಕಾ..?
ಯೂರೋಪ್ ರಾಷ್ಟ್ರಗಳಲ್ಲಿ ಈಗಾಗಲೇ ಎರಡನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಭಾರತದಲ್ಲಿ ಕೊರೊನಾ ಕೇಸ್ ಗಳ ಏರಿಕೆ ಪ್ರಮಾಣ ಹೆಚ್ಚಾಗುತ್ತಲೇ ಇದೆ.
ಅಸ್ಸಾಂನ ಪಂಜಾಬ್ ನ್ಯಾಷನಲ್ ಬ್ಯಾಂಕ್ ದರೋಡೆ – 60 ಲಕ್ಷ ರೂ ದೋಚಿದ ಶಸ್ತ್ರಸಜ್ಜಿತ ದರೋಡೆಕೋರರು
ಹೀಗಾಗಿ ಕೊರೊನಾಗೆ ಬ್ರೇಕ್ ಹಾಕಲು ದೇಶದಲ್ಲಿ ಮತ್ತೊಮ್ಮೆ ಲಾಕ್ ಡೌನ್ ವಿಧಿಸಬೇಕಾ ಅನ್ನೊ ಪ್ರಶ್ನಿ ಇದೀಗ ತಲೆತ್ತುತ್ತಿದೆ.
ಆದ್ರೆ ಕೊರೊನಾ ನಿಯಂತ್ರಣಕ್ಕಾಗಿ ಹೊಸ ನಿಯಮಗಳನ್ನು ಜಾರಿ ಮಾಡಿಕೊಂಡಿರುವ ಕೆಲ ರಾಜ್ಯಗಳು ಲಾಕ್ ಡೌನ್ ಮಾಡೋದಿಲ್ಲ ಎಂದು ಸ್ಪಷ್ಟಪಡಿಸಿವೆ. ಸಾಂಕ್ರಾಮಿಕ ರೋಗಗಳ ತಜ್ಞರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಧಿಸುವುದಕ್ಕಿಂತ ಮಾಸ್ಕ್ ಧರಿಸುವುದು. ಕ್ರಮೇಣವಾಗಿ ಕೈ ತೊಳೆದುಕೊಳ್ಳುತ್ತಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊವಿಡ್ ಗೆ ಬ್ರೇಕ್ ಹಾಕಬಹುದು ಎಂದು ಸೂಚಿಸಿದ್ದಾರೆ.
ಬಾಲಕೋಟ್ ಭಯೋತ್ಪಾದಕ ತರಬೇತಿ ಕೇಂದ್ರ ಜೈಶ್-ಎ-ಮೊಹಮ್ಮದ್ ಗೆ ಹಸ್ತಾಂತರಿಸಲು ಪಾಕ್ ಏಜೆನ್ಸಿಗಳ ನಿರ್ಧಾರ
ದೇಶದಲ್ಲಿ ಯುವ ಜನಾಂಗ ಹೆಚ್ಚಾಗಿರುವುದರಿಂದ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲಸಿಕ ಪರಿಸ್ಥಿತಿ ಏನು..?
ಕೊರೊನಾವನ್ನು ಸಂಪೂರ್ಣವಾಗಿ ಅತೋಟಿಯಲ್ಲಿ ತರಲು ಇರುವ ಏಕೈಕ ಮಾರ್ಗ ಲಸಿಕೆ. ಈಗಾಗಲೇ ಲಸಿಕೆ ಕಂಡುಹಿಡಿಯಲು ಕಂಪನಿಗಳು ನಾನಾ ಪ್ರಯೋಗಗಳನ್ನು ಮಾಡುತ್ತಿವೆ.
ಅವು ಅಂತಿಮ ಹಂತದಲ್ಲಿದ್ದು, ಎರಡು ಮೂರು ತಿಂಗಳುಗಳಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂತ್ರಿ ಡಾ ಹರ್ಷವರ್ಧನ್ ಪ್ರಕಟಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










