abhishekh ambareesh
ಅಂಬರೀಶ್ ಮಗನಾಗಿ ಹುಟ್ಟಲು ಪುಣ್ಯ ಮಾಡಿದ್ದೆ: ಅಭಿಷೇಕ್
ಬೆಂಗಳೂರು : ಮಂಡ್ಯದ ಗಂಡು ರೆಬಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಎರಡು ವರ್ಷಗಳು ಕಳೆದಿದೆ. ಇಂದು ಅಂಬಿ ಅವರ 2ನೇ ವರ್ಷದ ಪುಣ್ಯ ತಿಥಿ. ಹೀಗಾಗಿ ಇಂದು ಚಂದನವನದ ದಿಗ್ಗಜನನ್ನ ಅಭಿಮಾನಿಗಳು , ಚಿತ್ರರಂಗದವರು ಸ್ಮರಿಸುತ್ತಿದ್ದಾರೆ. ನವೆಂಬರ್ 24, 2018ರಲ್ಲಿ ಅಂಬರೀಶ್ ಅವರು ನಮ್ಮನ್ನೆಲ್ಲ ಅಗಲಿದ್ದರು. ಅಂಬಿ ಅಗಲಿಕೆಯಿಂದ ಸ್ಯಾಮಡಲ್ ವುಡ್ ಗೆ ತುಂಬಲಾರದ ನಷ್ಟ ಉಂಟಾಗಿತ್ತು. ಇಂದು ಅವರ ಪುಣ್ಯಸ್ಮರಣೆ. ಈ ಹಿನ್ನೆಲೆ ಕುಟುಂಬದವರು ಮತ್ತು ತೀರ ಆಪ್ತರು ಅಂಬರೀಶ್ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿ ಅಂಬರೀಷ್ ಅವರನ್ನ ಸ್ಮರಿಸಿದ್ದಾರೆ. ಪತ್ನಿ ಸುಮಲತಾ, ಪುತ್ರ ಅಭಿಷೇಕ್, ದರ್ಶನ್ ಹಾಗೂ ಇತರ ಗಣ್ಯರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.
ಪ್ರೀತಿ ಒಂದೇ ಅಂಬರೀಶ್ ಸಂಪಾದಿಸಿರುವ ಆಸ್ತಿ : ಸುಮಲತಾ ಅಂಬರೀಶ್..!
ಬಳಿಕ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬಿ ಪುತ್ರ ಅಭಿಷೇಕ್, ಅಪ್ಪ ನನಗೆ ಪ್ರತಿದಿನ ನೆನಪಾಗ್ತಾರೆ. ಅದರಲ್ಲೂ ಪುಣ್ಯತಿಥಿ ಹತ್ತಿರ ಆಗ್ತಿದ್ದಂತೆ ಅವರ ಬಗ್ಗೆಯೇ ಚರ್ಚೆ ಶುರುವಾಗುತ್ತೆ. ಇಂದು ಅವರ ಹೆಸರಲ್ಲಿ ಒಳ್ಳೊಳ್ಳೆಯ ಕಾರ್ಯಗಳು ನಡೆಯುತ್ತವೆ. ಅದರಲ್ಲಿ ನಾವು ಸುಖ- ಸಂತೋಷವನ್ನು ಹುಡುಕಬೇಕು. ಅಪ್ಪನ ಸಾಧನೆಗಳ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು. ಅವರು ಮತ್ತು ಅವರ ಅಭಿಮಾನಿಗಳ ಬಗ್ಗೆ ಮಾತನಾಡಲು ನನಗೆ ಅಧಿಕಾರ ಇಲ್ಲ. ಅವರ ಮಧ್ಯದಲ್ಲಿ ಸಂಬಂಧ ಅಷ್ಟೊಂದು ಗಟ್ಟಿಯಾಗಿತ್ತು. ಇಂದಿಗೂ ಅದೇ ರೀತಿ ಇದೆ. ನಮಗೂ ಇಂದು ನಮಗೂ ಅಷ್ಟೇ ಪ್ರೀತಿ ತೋರಿಸುತ್ತಿದೆ. ‘ಅವರ ಮಗನಾಗಿ ಹುಟ್ಟಲು ನಾನು ಪುಣ್ಯ ಮಾಡಿದ್ದೀನಿ’ ಎಂದು ಹೇಳಿದರು.
abhishekh ambareesh
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel