ಸಿದ್ದರಾಮಯ್ಯನವರೇ ದೂರುವುದನ್ನು ಬಿಟ್ಟು ಅವಲೋಕನ ಮಾಡಿ : ಬಿಜೆಪಿ
ಬೆಂಗಳೂರು : ಶಿರಾ ಸೋಲಿಗೆ ಡಿಕೆಶಿ ಮತ್ತು ನಿಮ್ಮೊಳಗಿರುವ ವೈಮನಸ್ಸೇ ಕಾರಣ ಹೊರತು ಮತದಾರರಲ್ಲ. ಕೈಲಾಗದವನು ಮೈಪರಚಿಕೊಂಡಂತೆ ಆಗಿದೆ ನಿಮ್ಮ ಸದ್ಯದ ಪರಿಸ್ಥಿತಿ.
ದೂರುವುದನ್ನು ಬಿಟ್ಟು ಅವಲೋಕನ ಮಾಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಟಾಂಗ್ ನೀಡಿದೆ.
ಮತಗಳನ್ನು ಖರೀದಿ ಮಾಡಿಯೇ ಶಿರಾ ಉಪಚುನಾವಣೆಯನ್ನು ಗೆದ್ದ ಬಿಜೆಪಿ ಮಸ್ಕಿ ಚುನಾವಣೆಯಲ್ಲೂ ಹಣ ಹಂಚಲು ತಂಡವನ್ನೇ ಕಟ್ಟಿಕೊಂಡು ಬರುತ್ತಾರೆ.
ಬಿಜೆಪಿಯವರ ಆಸೆ, ಆಮಿಷಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಲಿಯಾಗಬಾರದು. ಮಾರುಕಟ್ಟೆಯಲ್ಲಿ ಕುರಿ, ಕೋಣಗಳಂತೆ ತನ್ನನ್ನೇ ಮಾರಾಟ ಮಾಡಿಕೊಂಡವರನ್ನು ಮಸ್ಕಿ ಕ್ಷೇತ್ರದ ಜನರು ನಂಬಬೇಡಿ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು
ಇದನ್ನು ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.
ಸತೀಶ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಅಭ್ಯರ್ಥಿ : ಸಿದ್ದರಾಮಯ್ಯ ಹೇಳಿದ್ದೇನು..?
ಕಾಂಗ್ರೆಸ್ ನ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಅವರ ಕಾಲೆಳೆದಿದೆ.
ಬಿಜೆಪಿ ಟ್ವೀಟ್ ನಲ್ಲಿ
“ಶಿರಾ ಸೋಲಿಗೆ ಡಿಕೆಶಿ ಮತ್ತು ನಿಮ್ಮೊಳಗಿರುವ ವೈಮನಸ್ಸೇ ಕಾರಣ ಹೊರತು ಮತದಾರರಲ್ಲ. ಕೈಲಾಗದವನು ಮೈಪರಚಿಕೊಂಡಂತೆ ಆಗಿದೆ ನಿಮ್ಮ ಸದ್ಯದ ಪರಿಸ್ಥಿತಿ. ದೂರುವುದನ್ನು ಬಿಟ್ಟು ಅವಲೋಕನ ಮಾಡಿ.
ಸೋತವರಿಂದ ಪಕ್ಷ ಅಧಿಕಾರಕ್ಕೆ ಬಂದಿಲ್ಲ : ಸ್ವಪಕ್ಷದವರ ವಿರುದ್ಧ ರೇಣುಕಾಚಾರ್ಯ ಗುಡುಗು
ನಿಮ್ಮ ವೈಫಲ್ಯವನ್ನು ಬೇರೆಯವರ ಹೆಗಲ ಮೇಲೆ ಹಾಕಿ ನುಣುಚಿಕೊಳ್ಳುವ ನಿಮ್ಮ ಪ್ರವೃತ್ತಿಯನ್ನು ಎಂದು ಕೊನೆಗಾಣಿಸುತ್ತೀರಿ ಮಾನ್ಯ ಸಿದ್ದರಾಮಯ್ಯ ಅವರೇ?
“ಮಾನ್ಯ ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ನೀವು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರೂ ಬುದ್ಧಿ ಕಲಿತಿಲ್ಲ. ಮತದಾರರನ್ನು ನಿಂದಿಸುವ ಮಟ್ಟಕ್ಕೆ ನೀವು ಇಳಿದಿರುವುದು ನಿಜಕ್ಕೂ ನಾಚಿಕೆಗೇಡು.
ನಿಮ್ಮದೇ ಕಾರ್ಯಕರ್ತರನ್ನು ದೂರಲು ಮನಸ್ಸು ಹೇಗೆ ಬಂತು? ಕಾಂಗ್ರೆಸ್ ಕಾರ್ಯಕರ್ತರು ಆಮಿಷಕ್ಕೆ ಬಲಿಯಾಗಿದ್ದಾರೆ ಎಂದರೆ ಏನರ್ಥ ಎಂದು ಬಿಜೆಪಿ ಪ್ರಶ್ನಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









