supreme court
ಕೊರೊನಾ ಪರೀಕ್ಷೆಗೆ 400 ರೂ. ದರ ನಿಗದಿಗೆ ‘ ಸುಪ್ರೀಂ’ ಸೂಚನೆ
ನವದೆಹಲಿ: ದೇಶಾದ್ಯಂತ ಕೊರೊನಾ ಪರೀಕ್ಷೆಗಾಗಿ ಕೇವಲ 400 ರೂ. ದರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನ ಇಂದು ಸುಪ್ರೀಂ ಕೋರ್ಟ್ ನಡೆಸಿದೆ. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಅಂಗೀಕರಿಸಿರುವ ಸುಪ್ರೀಂಕೋರ್ಟ್ , ಕೇಂದ್ರ ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಹ್ಮಣ್ಯ ಅವರನ್ನ ಒಳಗೊಂಡ ಪೀಠದಿಂದ ವಿಚಾರಣೆ ನಡೆದಿದೆ. ಇದೇ ವೇಳೆ ಕೊರೊನಾ ಚಿಕಿತ್ಸಾ ವೆಚ್ಚ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಜೊತೆಗೆ ಕಡಿಮೆ ಪರೀಕ್ಷಾ ವೆಚ್ಚದ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ನ್ಯಾಯಾಲಯವು ತಿಳಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ಬೇರೆ ಬೇರೆ ದರಗಳಿವೆ. 900 ರೂ.ನಿಂದ 2800 ರೂ.ವರೆಗೂ ದರ ನಿಗದಿಯಾಗಿದೆ. ವಾಸ್ತವವಾಗಿ ಆರ್ಟಿಪಿಸಿಆರ್ ಪರೀಕ್ಷೆಯ ಕಿಟ್ ಭಾರತೀಯ ಮಾರುಕಟ್ಟೆಯಲ್ಲಿ 200 ರೂ.ಗೆ ಸಿಗುತ್ತಿದೆ. ಈ ಪರೀಕ್ಷೆಗೆ ಬೇರೆ ಯಾವುದೇ ಪ್ರಕ್ರಿಯೆಗಳಿಲ್ಲ. ಯಂತ್ರೋಪಕರಣಗಳನ್ನು ಬಳಸುತ್ತಿಲ್ಲ. 200 ರೂ.ಗಳ ಕಿಟ್ನಿಂದಲೇ ಪರೀಕ್ಷಾ ಫಲಿತಾಂಶ ತಿಳಿದುಬರುತ್ತಿದೆ. ಆದ್ರೆ ಕೆಲ ಕೆಲವು ರಾಜ್ಯಗಳು ದುಬಾರಿ ಶುಲ್ಕವನ್ನು ನಿಗದಿಮಾಡಿವೆ. ಹೀಗಾಗಿಯೇ ದೇಶಾದ್ಯಂತ ಕೊರೊನಾ ಪರೀಕ್ಷೆಗಾಗಿ ಕೇವಲ 400 ರೂ. ದರ ನಿಗದಿ ಮಾಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸಲ್ಲಿಸಲಾಗಿದ್ದು, ಇದೀಗ ನ್ಯಾಯಾಲಯದಲ್ಲಿ ಅಂಗೀಕಾರವಾಗಿದೆ. ದೆಹಲಿಯಲ್ಲಿ 1200, ಆಂದ್ರಪ್ರದೇಶದಲ್ಲಿ 1400 ಹೀಗೆ ದುಬಾರಿ ಬೆಲೆಯಿಂದಾಗಿ ದೇಶದ ಜನರು ತತ್ತರಿಸುವಂತಾಗಿದೆ ಎಂದು ಆರೋಪಗಳು ಕೇಳಿಬಂದಿದ್ವು.
ಠಾಕ್ರೆ ಸರ್ಕಾರ ಶೀಘ್ರದಲ್ಲೇ ಪತನ ಎಂದ ಬಿಜೆಪಿ: ಇದು ‘ಕನಸಷ್ಟೇ’ ಎಂದ ಶಿವಸೇನಾ..!
ಅಂದ್ಹಾಗೆ ವಕೀಲ ಅಜಯ್ ಅಗರ್ವಾಲ್ಎಂಬುವರು ಸುಪ್ರೀಂಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ದೇಶಾದ್ಯಂತ ಕೊರೊನಾ ಪರೀಕ್ಷೆಗಾಗಿ ಏಕರೂಪದ ಕನಿಷ್ಟ ದರವನ್ನು ನಿಗದಿಮಾಡಬೇಕೆಂದು ಮನವಿ ಮಾಡಿದ್ದಾರೆ. ಸದ್ಯ ಅವರ ಅರ್ಜಿ ಸುಪ್ರೀಂಕೋರ್ಟ್ ನಲ್ಲಿ ಅಂಗೀಕಾರವಾಗಿದೆ.
supreme court
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








