Sona mohapatra
ಇದು ನನ್ನ ದೇಹ ನನ್ನಿಷ್ಟ ಬಂದಹಾಗೆ ಇರುತ್ತೇನೆ: ಅದನ್ನೆಲ್ಲಾ ಕೇಳೋಕೆ ನೀನ್ಯಾರು ಎಂದ ಗಾಯಕಿ..!
ಮುಂಬೈ: ಬಾಲಿವುಡ್ ಗಾಯಕಿ ಸೋನಾ ಮೋಹಪತ್ರಾ ಅವರು ಹಾಟ್ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುತ್ತಾರೆ. ಅವರ ಈ ಪೋಸ್ಟ್ ಗಳಿಗೆ ನೆಟ್ಟಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತೆ.
ಅದರಂತೆ ಇತ್ತೀಚೆಗೆ ಅವರ ಉಡುಪಿನ ಬಗ್ಗೆ ಮಾತನಾಡಿದ್ದ ನೆಟ್ಟಿಗನನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದ್ಹಾಗೆ ಸೋನಾ ‘ಐ ನೆವರ್ ಆಸ್ಕ್ ಫಾರ್ ಇಟ್’ ಎಂಬ ಟ್ವಿಟ್ಟರ್ ಅಭಿಯಾನವೊಂದಕ್ಕೆ ಕೈ ಜೋಡಿಸಿದ್ದಾರೆ. ಅಭಿಯಾನದಂತೆ ತಮ್ಮ ಕಾಲೇಜು ದಿನಗಳಲ್ಲಿ ಚುಡಾಯಿಸುವ ಹಾಗೂ ಲೈಂಗಿಕ ಕಿರುಕುಳ ಎದುರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹೌದು ನಾನು ಬಿಟೆಕ್ ಎಂಜಿನಿಯರಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ಬಾರಿ ಮೈಕ್ರೊಪ್ರೊಸೆಸ್ಸರ್ ಲ್ಯಾಬ್ ಕಡೆ ಹೋಗುತ್ತಿದ್ದೆ. ಆ ದಿನ ನಾನು ತುಂಬಾನೇ ಸಡಿಲವಾದ ಹಸಿರು ಬಣ್ಣದ ಖಾದಿ ಕುರ್ತಾ ಧರಿಸಿದ್ದೆ. ನನ್ನ ನೋಡಿದ ಸೀನಿಯರ್ ಗಳು ಶಿಳ್ಳೆ ಹೊಡೆದು ನನ್ನ ಒಳಬಟ್ಟೆಯ ಸೈಜ್ ಬಗ್ಗೆ ಜೋರಾಗಿ ಮಾತನಾಡುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ನನ್ನ ಹಿತೈಷಿಯೊಬ್ಬರು, ನಾನು ದೇಹದ ಎಲ್ಲಾ ಭಾಗ ಮುಚ್ಚುವಂತೆ ದುಪ್ಪಟ್ಟ ಧರಿಸಿಲ್ವಾ ಎಂದು ಪ್ರಶ್ನಿದ್ದರು ಎಂದು ತಮ್ಮ ಕಾಲೇಜು ದಿನಗಳ ಅನುಭವವನ್ನ ಹಂಚಿಕೊಂಡಿದ್ದರು. 
ಹೈದರಾಬಾದ್ ನಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಕಿಚ್ಚ ಇದೀಗ ಕೇರಳಕ್ಕೆ ಪಯಣ..!
ಹೀಗೆ ಇನ್ನೊಂದು ಟ್ವೀಟ್ ಮಾಡಿ ‘ನಿಮ್ಮ ಅನುಭವವನ್ನು ಹಂಚಿಕೊಳ್ಳಿ’ ಎಂದು ನಟಿ ಸೋನಮ್ ಕಪೂರ್ ಸೇರಿದಂತೆ ಅನೇಕರನ್ನು ಟ್ಯಾಗ್ ಮಾಡಿದ್ದರು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನೆಟ್ಟಿರು ಸೋನಾರನ್ನ ಸಖತ್ ಟ್ರೋಲ್ ಮಾಡಿದ್ದಾರೆ.

ಸೋನಾರನ್ನ ಸಪೋರ್ಟ್ ಮಾಡುವುದಕ್ಕಿಂತ ಆಕೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿರೋದೆ ಹೆಚ್ಚು. ಅದ್ರಲ್ಲೂ ನೆಟ್ಟಿಗನೊಬ್ಬ ‘ ನೀವು ಇಷ್ಟೆಲ್ಲಾ ಯೋಚನೆ ಮಾಡುವುದಾದರೆ ಎಕ್ಸ್ ಪೋಸ್ ಮಾಡುವಂತಹ ಬಟ್ಟೆ ಯಾಕೆ ಧರಿಸಿ ಫೋಟೋಶೂಟ್ ಮಾಡಿಸ್ತೀರಿ?. ನಿಮ್ಮ ಫೋಟೋಗಳಲ್ಲೇ ನೀವು ಎಲ್ಲವನ್ನೂ ಎಕ್ಸ್ ಪೋಸ್ ಮಾಡುತ್ತೀರಿ ಅಂದ ಮೇಲೆ ಯಾಕೆ ನಾಟಕ ಮಾಡೋದು. ಈ ಡ್ರಾಮಾ ಯಾಕೆ, ಈ ರೀತಿ ಡ್ರಾಮಾ ಮಾಡೋದು ಸಿಂಪತಿ ಗಿಟ್ಟಿಸಿಕೊಳ್ಳೋ ಪ್ರಯತ್ನದ ಬದಲು ಗಾಯನದ ಕಡೆ ಗಮನಹರಿಸಿದ್ದರೆ ಒಳ್ಳೆ ಗಾಯಕಿಯಾಗ್ತಾಯಿದ್ರಿ’ ಎಂದು ಕಮೆಂಟ್ ಮಾಡಿದ್ದಾನೆ.
‘ಮದಗಜ’ ಮೂರನೇ ಹಂತದ ಶೂಟಿಂಗ್ ಶೀಘ್ರವೇ ಆರಂಭ..! ಎಲ್ಲಿ, ಯಾವಾಗ ಗೊತ್ತಾ..!
ಆತನ ಕಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ಸೋನಾ ‘ನನ್ನ ದೇಹ ನನ್ನಿಷ್ಟ ಮಿಸ್ಟರ್ ಜೇ. ಅದನ್ನು ಕೇಳೋಕೆ ನೀನ್ಯಾರು?, ನನಗೇನು ಇಷ್ಟವೋ ಅದನ್ನೇ ನಾನು ಮಾಡೋದು’ ಎಂದು ನೆಟ್ಟಿಗನ ವಿರುದ್ಧ ಕಿಡಿಕಾರಿದ್ದಾರೆ. ಸದ್ಯ ಟ್ವೀಟ್ ಹಾಗೂ ಪ್ರತಿಕ್ರಿಯೆ ನೀಡಿರುವ ಸೋನಾ ನಡೆ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸ್ತುತ ಸೋನಾ ಟ್ರೋಲಿಗರಿಗೆ ಆಹಾರವಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









