sudeep
ಹೈದರಾಬಾದ್ ನಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಕಿಚ್ಚ ಇದೀಗ ಕೇರಳಕ್ಕೆ ಪಯಣ..!
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾವಾದ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಲಾಕ್ ಡೌನ್ ಬಳಿಕ ಹೌದ್ರಾಬಾದ್ ನಲ್ಲಿ ಬೀಡುಬಿಟ್ಟಿದ್ದ ಚಿತ್ರತಂಡ ಹೈದ್ರಾಬಾದ್ ಶೂಟಿಂಗ್ ಶೆಡ್ಯೂಲ್ ಕಂಪ್ಲೀಟ್ ಮಾಡಿದೆ. ಇದೀಗ ಹೈದ್ರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿಕೊಂಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಿತ್ರತಂಡ ಮುಂದಿನ ಭಾಗದ ಚಿತ್ರೀಕರಣಕ್ಕಾಗಿ ಕೇರಳಗೆ ಪಯಣ ಬೆಳಸಿದೆ.
ಬಿಗ್ ಬಾಸ್ ಸೀಸನ್ 8ಕ್ಕೆ ತಯಾರಾಗ್ತಿದ್ದಾರಂತೆ ಕಿಚ್ಚ ಸುದೀಪ್..!
ಸುಮಾರು 3 ತಿಂಗಳಿಂದ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಫ್ಯಾಂಟಮ್ ತಂಡ ಇತ್ತೀಚಿಗಷ್ಟೆ ಹೈದರಾಬಾದ್ ಚಿತ್ರೀಕರಣಕ್ಕೆ ಬಾಯ್ ಹೇಳಿ ಕರ್ನಾಟಕಕ್ಕೆ ವಾಪಸ್ ಆಗಿದೆ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಿ ಶೂಟಿಂಗ್ ಮುಗಿಸಿಕೊಂಡಿರುವ ಚಿತ್ರತಂಡ ಇದೀಗ ಕೇರಳ ಕಡೆ ಹೊರಟಿದೆ. ಮುಂದಿನ ಹಂತದ ಚಿತ್ರೀಕರಣವನ್ನು ಕೇರಳದಲ್ಲಿ ಚಿತ್ರೀಕರಿಸಲು ಸಿನಿಮಾತಂಡ ನಿರ್ಧರಿಸಿದೆ. ಡಿಸೆಂಬರ್ ಮೊದಲ ವಾರದಿಂದ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಕೇರಳದಲ್ಲಿ ಪ್ರಾರಂಭವಾಗಲಿದೆ.
‘ಚಾರ್ಲಿ’ ಜೊತೆ ಕಾಶ್ಮೀರಕ್ಕೆ ಹೊರಟ ಸಿಂಪಲ್ ಸ್ಟಾರ್..!
ಇದಾದ ಬಳಿಕ ಕೇರಳದಿಂದ ಕರ್ನಾಟಕಕ್ಕೆ ವಾಪಸ್ ಆಗಲಿರುವ ಚಿತ್ರತಂಡ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ಮಾಡುವ ಪ್ಲಾನ್ ಮಾಡಿದೆ. ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಿ ಚಿತ್ರದ ಹೈವೋಲ್ಟೇಜ್ ಹಾಡನ್ನು ಸೆರೆಹಿಡಿಯಲಿದೆ ಎಂದು ಹೇಳಲಾಗ್ತಿದೆ.
ಇತ್ತ ಸುದೀಪ್ ಅವರು ಫ್ಯಾಂಟಮ್ ಹೊರತಾಗಿ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೇ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರ ತಯಾರಿ ಆರಂಭಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಅವರ ಅಭಿನಯದ ಬಹುನಿರೀಕ್ಷೆಯ ಸಿನಿಮಾವಾದ ಕೋಟಿಗೊಬ್ಬ 2 ಚಿತ್ರವೂ ಸಹ ಈಗಾಗಲೇ ಚಿತ್ರೀಕರಣ ಮುಗಿದು ರಿಲೀಸ್ ಗೆ ರೆಡಿಯಾಗಿದೆ. ಆದ್ರೆ ಸಿನಿಮಾ ರಿಲೀಸ್ ಡೇಟ್ ಮಾತ್ರ ಈವರೆಗೂ ರಿವೀಲ್ ಆಗಿಲ್ಲ.
ಯೂಟ್ಯೂಬ್ ನಲ್ಲಿ ಎಲ್ಲಾ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿದ “ಬುಟ್ಟ ಬೊಮ್ಮ” ಸಾಂಗ್ ..!
sudeep
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








