ಬೆಂಗಳೂರು: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಚಳಿಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಅದರಂತೆ ರಾಜ್ಯದಲ್ಲಿಯೂ ಕೊರೊನಾ ಕೇಸ್‍ಗಳು ಹೆಚ್ಚಾಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಯಾರೋ ಕಿಡಗೇಡಿಗಳು ಬೆಂಗಳೂರು ಸೇರಿ ಕರ್ನಾಟಕದಲ್ಲಿ ಮತ್ತೆ ಲಾಕ್‍ಡೌನ್ ಮಾಡುತ್ತಾರೆಂಬ ವದಂತಿ ಹಬ್ಬಿಸಿದ್ದಾರೆ. ವದಂತಿಯನ್ನು ನಂಬಿದ ಹೊರ ರಾಜ್ಯಗಳ ವಲಸೆ ಕಾರ್ಮಿಕರು ಹುಟ್ಟೂರಿನತ್ತ ಹೊರಟಿದ್ದಾರಾ ಎಂಬ ಅನುಮಾನ ಶುರುವಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಗಂಟುಮೂಟೆ ಕಟ್ಟಿಕೊಂಡು ಊರಿಗೆ ತೆರಳಲು ವಲಸಿಗರು ಸಾಲು ಸಾಲಾಗಿ ಕ್ಯೂ ಯಲ್ಲಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ.
ಮತ್ತೆ ಎಲ್ಲಿ ಬೆಂಗಳೂರಿನಲ್ಲಿ ಲಾಕ್‍ಡೌನ್ ಆಗುತ್ತದೆ ಎಂದು ಟೆನ್ಸನ್‍ನಲ್ಲಿ ವಲಸಿಗರು ತವರಿನತ್ತ ಬ್ಯಾಗ್ ಸಮೇತ ಟೆನ್ಸನ್ ನಲ್ಲಿ ಹೋಗುತ್ತಿದ್ದಾರೆ. ಮೆಜೆಸ್ಟಿಕ್ ನ ರೈಲ್ವೆ ನಿಲ್ದಾಣ ಬಳಿ ಕೋವಿಡ್ ಟೆಸ್ಟ್ ಮಾಡುವಾಗ ಕಂಡು ಬಂದಿರುವ ದೃಶ್ಯಗಳು ಈ ವದಂತಿಗೆ ಪುಷ್ಠಿ ನೀಡುತ್ತಿವೆ ಎನ್ನಲಾಗಿದೆ.

ರಾಜ್ಯ ಸರ್ಕಾರವಾಗಲಿ, ಬಿಬಿಎಂಪಿಯಾಗಲಿ, ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಎರಡು ತಿಂಗಳ ಹಿಂದೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ಮುಂದೆ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಲಾಕ್‍ಡೌನ್ ಬಳಿ ನಿರ್ಭಂಧಿಸಲಾಗಿದ್ದ ವ್ಯಾಪಾರ-ವಹಿವಾಟು, ಉದ್ಯಮ, ಸಾರಿಗೆ ಸಂಚಾರ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ಚಾಲನೆ ಸಿಕ್ಕಿದೆ.

ಆದರೆ, ಮುಂಬೈ, ದೆಹಲಿ, ಹರಿಯಾಣ, ಗುಜರಾತ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ರಾತ್ರಿ ಕಫ್ರ್ಯೂನಂತಹ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದನ್ನೇ ಕರ್ನಾಟಕದಲ್ಲಿ, ಅದರಲ್ಲಿ ಬೆಂಗಳೂರಿನಲ್ಲಿ ಮಾಡುತ್ತಾರಾ..? ನಮ್ಮ ಬದುಕಿನ ಗತಿಯೇನು ಎಂಬ ಭೀತಿಯಿಂದ ಉತ್ತರ ಭಾರತದ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದ ವಲಸೆ ಕಾರ್ಮಿಕರು ಗುಳೆ ಹೊರಟಿದ್ದಾರಾ ಎಂಬ ಪ್ರಶ್ನೆ ಶುರುವಾಗಿದೆ. ಈ ಬಗ್ಗೆ ಯಾರೋಬ್ಬರಿಂದಲೂ ಸ್ಪಷ್ಟ ಮಾಹಿತಿ ಇಲ್ಲ.
ಇವರು ವದಂತಿಗಳನ್ನು ಹುಟ್ಟೂರಿನತ್ತಾ ಹೊರಟಿದ್ದಾರಾ ? ಅಥವಾ ಮಾಮೂಲಿಯಂತೆ ಊರಿಗೆ ಹೋಗಿ ಬರಲು ಹೊರಟವರಾ ಎಂಬುದು ಇನ್ನಷ್ಟೇ ಖಚಿತವಾಗಬೇಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








