ಆಸ್ಕರ್ ಪ್ರಶಸ್ತಿಗೆ ಭಾರತದಿಂದ ‘ಜಲ್ಲಿಕಟ್ಟು’ ಚಿತ್ರ ಆಯ್ಕೆ
ನವದೆಹಲಿ : ಮಲಯಾಳಂನ ಜಲ್ಲಿಕಟ್ಟು ಚಲನಚಿತ್ರಕ್ಕೆ ಭಾರತದಿಂದ ಆಸ್ಕರ್ ಗೆ ಅಧಿಕೃತ ಪ್ರವೇಶ ಸಿಕ್ಕಿದೆ.
ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರಗಳ ವಿಭಾಗದಲ್ಲಿ ಜಲ್ಲಿಕಟ್ಟು ಚಲನಚಿತ್ರವನ್ನು ಆಸ್ಕರ್ ಅವಾರ್ಡ್ ನ 93ನೇ ಅಕಾಡೆಮಿ ಪ್ರಶಸ್ತಿ ವಿಭಾಗದಲ್ಲಿ ಭಾರತದಿಂದ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.
2019ರ ಅಕ್ಟೋಬರ್‍ನಲ್ಲಿ ಬಿಡುಗಡೆಯಾದ ಈ ಚಿತ್ರವನ್ನು ಲಿಜೊ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗಿರೀಶ್ ಗಂಗಾಧರನ್ ಅವರ ಛಾಯಾಗ್ರಹಣ ಇದೆ. ಟಾಪ್ ಲೆಸ್ ಫೋಟೋ ಶೂಟ್ ಮಾಡಿಸಿದ ಜಾಕ್ವೆಲಿನ್..!
ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ 14 ಸದಸ್ಯರ ಸಮಿತಿಯು ಮಲಯಾಳಂ ಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಿದೆ.
ಜಲ್ಲಿಕಟ್ಟು ಚಿತ್ರದಲ್ಲಿ ಆಂಟನಿ ವರ್ಗೀಸ್, ಚೆಂಬನ್ ವಿನೋದ್ ಮತ್ತು ಸಂತಿ ಬಾಲಚಂದ್ರನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ರಾಖಿ ಭಾಯ್’ ಫ್ಯಾನ್ಸ್ ಗೆ ಗುಡ್ ನ್ಯೂಸ್ : KGF 2 ನ ಅಪಡೇಟ್ಸ್ ..!
ಹರೀಶ್ ಅವರ ಮಾವೋವಾದಿ ಎಂಬ ಸಣ್ಣ ಕಥೆಯನ್ನು ಆಧರಿಸಿ ಸಿನಿಮಾ ಮೂಡಿಬಂದಿದೆ. ತಪ್ಪಿಸಿಕೊಂಡ ಎಮ್ಮೆ ಮತ್ತು ಪ್ರಾಣಿಗಳ ಮಾಂಸಕ್ಕಾಗಿ ಗ್ರಾಮಸ್ಥರ ಕಠಿಣ ಹೋರಾಟದ ಸುತ್ತ ಚಿತ್ರಕಥೆ ಸುತ್ತುತ್ತದೆ.
ಅಂದಹಾಗೆ ಲಿಜೋ ಜೋಸ್ ಪೆಲ್ಲಿಸ್ಸೆರಿ 2019ರಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಜಲ್ಲಿಕಟ್ಟು ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









