ಮಡಿಕೇರಿ: ಕಟ್ಟಿಗೆ ಸಮಸ್ಯೆ, ಪ್ರತಿಕೂಲ ವಾತಾವರಣದಿಂದ ನಶಿಸುತ್ತಿರುವ ಸಾಂಬಾರು ಪದಾರ್ಥಗಳ ರಾಣಿ ಎಂದು ಖ್ಯಾತಿ ಪಡೆದಿರುವ ಏಲಕ್ಕಿಯನ್ನು ಒಣಗಿಸುವ ನೂತನ ಯಂತ್ರ ಸಿದ್ದಗೊಂಡಿದೆ. ಅಂದಹಾಗೆ ಇದನ್ನು ಸಿದ್ದಗೊಳಿಸಿದ್ದು ಒಬ್ಬ ಹಳ್ಳಿ ಹೈದ.

ಶನಿವಾರಸಂತೆಯಲ್ಲಿ ಪುಟ್ಟದೊಂದು ವರ್ಕ್ಶಾಪ್ ಇಟ್ಟುಕೊಂಡಿರುವ ಮೋಹನ್ ಕುಮಾರ್ ಎಂಬುವವರು ಬಿ.ಕಾಂ ಪದವೀಧರ. ಕೊರೊನಾ ಸಂದರ್ಭ ಇರುವ ವಸ್ತುಗಳನ್ನು ಬಳಸಿ ಕಾಫಿ ಗಿಡಗಳ ಬಡ್ಡೆ ಕೀಳುವ ಯಂತ್ರ, ಬೈಕ್ ಮೋಟಾರಿನಿಂದ ಪಂಪ್ ಸೆಟ್, ಕಾಫಿ ಒಣಗಿಸುವ ಯಂತ್ರಗಳನ್ನು ಪ್ರಾಯೋಗಿಕವಾಗಿ ತಯಾರಿಸಿರುವ ಮೋಹನ್ ಕುಮಾರ್, ಕಾಫಿ ಮಂಡಳಿ, ತೋಟಗಾರಿಕೆ ಇಲಾಖೆಯ ತಜ್ಞರ ಗಮನ ಸೆಳೆದಿದ್ದಾರೆ. ಇದೀಗ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಗಳಿಸಬಹುದಾದ ಯಂತ್ರ ಸಿದ್ಧಪಡಿಸಿದ್ದಾರೆ.

ಒಂದು ಬಾರಿಗೆ ಒಂದು ಕ್ವಿಂಟಾಲ್ ನಷ್ಟು ಹಸಿ ಏಲಕ್ಕಿ ಒಣಗಿಸುವ ಸಾಮಥ್ರ್ಯ ಹೊಂದಿರುವ ಯಂತ್ರ ಅನಿಲ ಮೂಲಕ ಚಲಾಯಿಸಲ್ಪಡುತ್ತದೆ. ಸಾಮಾನ್ಯವಾಗಿ ಬಳಸುವ ಅಡುಗೆ ಸಿಲಿಂಡರ್ ಇದ್ದರೆ ಅದೇ ಸಾಕು. 15 ಗಂಟೆಯೊಳಗೆ ಹಸಿಯಾದ ಹಸಿರು ಏಲಕ್ಕಿ ಒಣಗಿ ಮಾರಾಟ ಮಾಡಲು ಸಿದ್ದವಾಗುತ್ತದೆ.
ಅದಲ್ಲದೆ ಹಿಂದಿನ ಪದ್ದತಿಯಂತೆ ಕಟ್ಟಿಗೆ ಮೂಲಕ ಗೂಡಿನಲ್ಲಿ ಒಣಗಿಸಲಾಗುವ ಏಲಕ್ಕಿಗಿಂತಲೂ ಕೆಜಿಗೆ 150 ರಿಂದ 200ರೂ. ಹೆಚ್ಚಿಗೆ ಸಿಗುತ್ತಿದೆ. ಕಡಿಮೆ ವೆಚ್ಚ ಮತ್ತು ಕಡಿಮೆ ಸಮಯದಲ್ಲಿ ಕೆಲಸ ಮುಗಿಯುತ್ತದೆ ಎಂದು ಏಲಕ್ಕಿ ಬೆಳೆಗಾರರು ಅಭಿಪ್ರಾಯ ಪಡುತ್ತಾರೆ.

ಇನ್ನು ಕೊಡಗು, ಚಿಕ್ಕಮಗಳೂರು ವಿಭಾಗಗಳ ಏಲಕ್ಕಿ ಸಂಶೋಧನ ಇಲಾಖೆ ಸಹ ಸಣ್ಣ ಏಲಕ್ಕಿ ಬೆಳೆಗಾರರಿಗೆ ಇದು ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಅಂದಾಜು 1.50 ಲಕ್ಷ ವೆಚ್ಚ ತಗಲುವ ಯಂತ್ರದ ಮೂಲಕ ಏಲಕ್ಕಿ ಮಾತ್ರವಲ್ಲದೆ, ಕಾಫಿ, ಕಾಳು ಮೆಣಸು ಒಣಗಿಸಬಹುದಾಗಿದೆ.
ವಿಶೇಷ ವರದಿ:ಗಿರಿಧರ್ ಕೊಂಪುಳೀರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








