ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದೆ. ಮೂಲ ಬಿಜೆಪಿಗರು.. ವಲಸೆ ಬಿಜೆಪಿಗರು ಎಂಬ ಗುದ್ದಾಟ ಶುರುವಾಗಿದೆ. ಸಂಪುಟ ಸರ್ಕಸ್ ರಾಜ್ಯ ಬಿಜೆಪಿಯನ್ನು ಎರಡು ಭಾಗ ಮಾಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಹೌದು..! ಸಂಪುಟ ಸರ್ಕಸ್ ಆರಂಭವಾದಾಗಿನಿಂದಲೂ ಮಂತ್ರಿಗಿರಿಗಾಗಿ ಸಚಿವಸ್ಥಾನಾಂಕ್ಷಿಗಳು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಪಕ್ಷದ ಬಿಗ್ ಬಾಸ್ ಗಳಿಗೆ ಹತ್ತಿರವಾಗಿರುವ ನಾಯಕರ ಜೊತೆ ಗುಪ್ತ್ ಗುಪ್ತ್ ಸಭೆ ನಡೆಸುತ್ತಿದ್ದಾರೆ. ಮೂಲ ಬಿಜೆಪಿ ನಾಯಕರು ತಮ್ಮ ನಾಯಕರ ಮುಂದೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದರೇ ಇತ್ತ ವಲಸೆ ಬಿಜೆಪಿ ನಾಯಕರು ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಒತ್ತಡ ಹೇರುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಲು ಕಾರಣರಾದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕೆಂದು ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ದೆಹಲಿ ದಂಡಯಾತ್ರೆ ಮುಂದುವರೆಸಿದ್ದಾರೆ. ಇತ್ತ ರೇಣುಕಾಚಾರ್ಯ ಸೇರಿದಂತೆ ಕೆಲ ಮೂಲ ಬಿಜೆಪಿಗರು ಚುನಾವಣೆಯಲ್ಲಿ ಸೋತಿರುವವರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬಾರದೆಂದು ಪಟ್ಟು ಹಿಡಿದ್ದಾರೆ.

ಇಂದು ವಿಧಾನಸೌಧದ ಬಳಿ ಮಾತನಾಡಿದ ರೇಣುಕಾಚಾರ್ಯ, ಕಾಂಗ್ರೆಸ್ – ಜೆಡಿಎಸ್ ಪಕ್ಷ ತೊರೆದು ಬಂದ 17 ಶಾಸಕರಿಂದ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂಬುದು ಶುದ್ಧ ಸುಳ್ಳು. ಪಕ್ಷದ ಕಾರ್ಯಕರ್ತರ ಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಯಾರೋ ಒಬ್ಬರಿಂದ ಸರ್ಕಾರ ಬಂದಿದೆ ಎಂದು ಹೇಳಲಾಗದು. ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೊದಲು 105 ಜನ ಆಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬೇಸತ್ತು 17 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನನ್ನಿಂದಲೇ ಸರ್ಕಾರ ಬಂದಿದೆ ಅಂತಾ ಯಾರು ಹೇಳುತ್ತಾರೋ ಅವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಲಸೆ ನಾಯಕರ ವಿರುದ್ಧ ಗುಡುಗಿದ್ದಾರೆ..

ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಟಿಬಿ ನಾಗರಾಜ್, ಸರ್ಕಾರಕ್ಕೆ 105 ಜನನೂ ಮುಖ್ಯ, 17 ಮಂದಿಯೂ ಮುಖ್ಯ. ಎಲ್ಲರೂ ಸೇರಿದ್ದರಿಂದ ಬಿಜೆಪಿ ಸರ್ಕಾರ ರಚನೆಯಾಗಿದ್ದು ಎಂದು ರೇಣುಕಾಚಾರ್ಯಗೆ ನಾಗರಾಜ್ ತಿರುಗೇಟು ನೀಡಿದ್ದಾರೆ.
ಒಟ್ಟಾರೆ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮಸಿದ್ರೆ ಇದು ಸಂಪುಟ ವಿಸ್ತರಣೆಯೋ.. ಬಿಜೆಪಿ ವಿಭಜನೆಯೋ ಎಂಬುದು ಗೊತ್ತಾಗುತ್ತಿಲ್ಲ. ಆದ್ರೆ ರಾಜ್ಯ ಬಿಜೆಪಿದಲ್ಲಿ ಆಂತರಿಕ ಯುದ್ಧ ಶುರುವಾಗಿದೆ ಅನ್ನೋದು ಸ್ಪಷ್ಟವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








