sonu sood
ಬಡವರ ರಿಯಲ್ ಹೀರೋ ಸೋನು ಸೂದ್ ಹೆಸರಲ್ಲಿ ನಡೆಯುತ್ತಿದೆ ಮಹಾವಂಚನೆ : ಹುಷಾರಾಗಿರಿ ಎಂದ ನಟ..!
ರೀಲ್ ಲೈಫ್ ನಲ್ಲಿ ವಿಲ್ಲನ್ ಆಗಿದ್ರು ರಿಯಲ್ ಲೈಫ್ ನಲ್ಲಿ ಜನರ ಪಾಲಿನ ಹೀರೋ ಆಗಿರುವ ಸೋನು ಸೂದ್ ಅವರು ಲಾಕ್ ಡೌನ್ ಸಮಯದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನ ಮಾಡಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿದ್ಯಾರ್ಥಿಗಳಿಗೆ ನೆರವಾಗಿ, ಲಾಕ್ ಡೌನ್ ವೇಳೆ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ತೆರಳಲು ಸಹಾಯ ಮಾಡಿ ಮಾನವೀಯತೆ ಪ್ರದರ್ಶಿಸಿರುವ ಸೋನು ಸೂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದಾರೆ. ಆದ್ರೆ ಸೋನು ಸೂದ್ ಅವರ ಹೆಸರಲ್ಲಿ ಇದೀಗ ಜಾಲತಾಣದಲ್ಲಿ ಭಾರೀ ಮೋಸವಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ಸ್ವತಃ ಸೋನು ಸೂದ್ ಅವರೇ ಈ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಎಚ್ಚರಿಸಿದ್ದಾರೆ.
ಹೌದು ಸೋನು ಸೂದ್ ಅವರ ಹೆಸರು ದುರ್ಬಳಕೆಯಾಗ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು
ಹುಷಾರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ. ಅಂದ್ಹಾಗೆ ಸೋನು ಸೂದ್ ಅವರ ಹೆಸರು ಬಳಸಿ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಜನರನ್ನ ಯಾಮಾರಿಸುವ ಪ್ರಯತ್ನ ಮಾಡ್ತಿರೋದು ಸೋನು ಅವರ ಗಮನಕ್ಕೆ ಬಂದಿದೆ. ಹೀಗಾಗಿ ಈ ಬಗ್ಗೆ ಸಾಕ್ಷಿ ಸಮೇತ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ ಸೋನು.
2008ರ ಮುಂಬೈ ಉಗ್ರ ದಾಳಿಯ ಕರಾಳತೆಗೆ 12 ವರ್ಷ: ಹುತಾತ್ಮ ಯೋಧರಿಗೆ ಅಕ್ಷಯ್ ಕುಮಾರ್ ಗೌರವ ನಮನ..!
ಸೋನು ಸೂದ್ ಹೆಸರಿನಲ್ಲಿ ಪರ್ಸನಲ್ ಲೋನ್ ಕೊಡಲಾಗುತ್ತೆ. ಈ ನಂಬರ್ ಗೆ ಕರೆ ಮಾಡಿ ಎಂದು ಕಿಡಿಗೇಡಿಗಳು ಟ್ವೀಟ್ ಮಾಡಿದ್ದಾರೆ. ಇದನ್ನು ಸ್ಕ್ರೀನ್ ಶಾಟ್ ತೆಗೆದು ಸೋನು ಸೂದ್ ಶೇರ್ ಮಾಡಿದ್ದಾರೆ. ಇವು ನಕಲಿ ಖಾತೆಗಳು, ಎಚ್ಚರಿಕೆಯಿಂದಿರಿ ಎಂದು ಹೇಳಿದ್ದಾರೆ.
ಲೆಜೆಂಡ್ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ನಿಧನಕ್ಕೆ ಕಂಬನಿ ಮಿಡಿದ ಸಿನಿ ತಾರೆಯರು
sonu sood
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








