ನಮ್ಮ ಹಣೆಬರಹ ಕೆಟ್ಟಿದೆ.. ಅದಕ್ಕೆ ಇನ್ನೂ ಮಂತ್ರಿಯಾಗಿಲ್ಲ : ಎಂಟಿಬಿ
ಬೆಂಗಳೂರು : ನಮ್ಮ ಹಣೆಬರಹ ಕೆಟ್ಟಿರಬೇಕು. ಅದಕ್ಕೆ ಇನ್ನೂ ನಾವು ಮಂತ್ರಿ ಆಗಿಲ್ಲ ಎಂದು ಸಚಿವ ಸ್ಥಾನದ ಆಕಾಂಕ್ಷಿ, ಎಂಎಲ್ ಸಿ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಎಂಟಿಬಿ ನಾಗರಾಜ್ ಅವರು ಇಂದು ದೆಹಲಿಯಿಂದ ವಾಪಸ್ ಆಗಿರುವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದರು.ಸಂತೋಷ್ ಆತ್ಮಹತ್ಯೆ ಯತ್ನಕ್ಕೆ `ಆ ವಿಡಿಯೋ’ ಕಾರಣ..? ಬಾಂಬ್ ಸಿಡಿಸಿದ ಡಿಕೆಶಿ..!
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್ ಜಾರಕಿಹೊಳಿ ಭೇಟಿಯಲ್ಲಿ ವಿಶೇಷ ಏನಿಲ್ಲ. ಅವರ ಮೇಲೆ ನಮಗೆ ಅಸಮಧಾನ ಏನೂ ಇಲ್ಲ.
ನಿನ್ನೆ ಖಾಸಗಿ ಹೊಟೇಲಿನಲ್ಲಿ ಎಲ್ಲರೂ ಕಷ್ಟ-ಸುಖ ಹಂಚ್ಕೊಳ್ಳೋಕೆ ಸೇರಿದ್ವಿ. ಮುಂಬೈ ಬಳಿಕ ನಾವು ಒಟ್ಟಿಗೆ ಸೇರಿರಲಿಲ್ಲ. ಕಷ್ಟ ಅಂದ್ರೆ, ನಾವು ಇನ್ನೂ ಮಂತ್ರಿ ಆಗಿಲ್ಲ ಅದೇ ನಮ್ ಕಷ್ಟ ಎಂದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಸಚಿವ ಸ್ಥಾನ ಕೊಡುತ್ತೇನೆ, ಸಚಿವರನ್ನಾಗಿ ಮಾಡುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಸುವೆಂಡು ಅಧಿಕಾರಿ ರಾಜೀನಾಮೆ : ಬಿಜೆಪಿಗೆ ಸೇರಲು ಬಯಸಿದರೆ ಸ್ವಾಗತ – ಘೋಷ್
ಆದರೆ ಈವರೆಗೂ ಮಂತ್ರಿ ಮಾಡಿಲ್ಲ. ನಾನು ವಿಧಾನಪರಿಷತ್ ಸದಸ್ಯನಾಗಿ 5 ತಿಂಗಳಾಗಿದೆ. ಮಂತ್ರಿ ಯಾವಾಗ ಎಂದು ನೀವೇ ಕೇಳಬೇಕು.
ನಾವು 17 ಮಂದಿ ಒಟ್ಟಾಗಿ ಇದ್ದೇವೆ. ಮಂತ್ರಿಯಾದವರ ಹಣೆಬರಹ ಚೆನ್ನಾಗಿತ್ತು. ನಮ್ಮ ಹಣೆಬರಹ ಕೆಟ್ಟಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









