ಸೋತವರಿಗೆ ಸಚಿವ ಸ್ಥಾನ ಕೊಡುವುದು ಬೇಡ : ರಾಜುಗೌಡ
ಬೆಂಗಳೂರು : ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್, ಶಂಕರ್ ಪಕ್ಷಕ್ಕೆ ತ್ಯಾಗ ಮಾಡಿ ಬಂದವರು. ಈ ಮೂವರಿಗೂ ಸಚಿವ ಸ್ಥಾನ ಕೊಡಲಿ, ನಮ್ಮ ಆಕ್ಷೇಪ ಇಲ್ಲ. ಆದರೆ, ಯೋಗೇಶ್ವರ್ ವಿಚಾರದಲ್ಲಿ ನಮ್ಮ ಅಭಿಪ್ರಾಯ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ತಿಳಿಸಿದ್ದೇವೆ ಎಂದು ರಾಜುಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸೋತವರಿಗೆ ಸಚಿವ ಸ್ಥಾನ ಕೊಡುವುದು ಬೇಡ ಅಂತಾ ಸಿಎಂಗೆ ಮನವಿ ಮಾಡಿದ್ದೇವೆ.
ಸೋತವರ ಬದಲು ಶಾಸಕರಿಗೆ ಸಚಿವ ಸ್ಥಾನ ಕೊಡಿ ಎಂದಿದ್ದೇವೆ. ಎಂಟಿಬಿ ನಾಗರಾಜ್, ಹೆಚ್ ವಿಶ್ವನಾಥ್, ಶಂಕರ್ ಪಕ್ಷಕ್ಕೆ ತ್ಯಾಗ ಮಾಡಿ ಬಂದವರು.
ಈ ಮೂವರಿಗೂ ಸಚಿವ ಸ್ಥಾನ ಕೊಡಲಿ, ನಮ್ಮ ಆಕ್ಷೇಪ ಇಲ್ಲ. ಆದರೆ, ಯೋಗೇಶ್ವರ್ ವಿಚಾರದಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ.ಉಮಾಶ್ರೀ ಕಾರು ಅಪಘಾತ ಪ್ರಕರಣ: ಗಾಯಗೊಂಡಿದ್ದ ವೈದ್ಯೆ ಸಾವು
ಯೋಗೇಶ್ವರ್ ಅವರನ್ನು ಮಂತ್ರಿ ಮಾಡೆ ಮಾಡ್ತೀವಿ ಅಂದರೆ ಮಾಡಲಿ. ಆದರೆ, ಹೈಕಮಾಂಡ್, ಸಿಎಂ ನಿರ್ಧಾರಕ್ಕೆ ಬದ್ಧ. ಆದರೆ, ಸೋತವರ ಬದಲು ಗೆದ್ದವರಿಗೆ ಕೊಟ್ಟರೆ ಉತ್ತಮ ಅಷ್ಟೇ ಎಂದು ಹೇಳಿದ್ದಾರೆ.
ಇನ್ನು ನಾವು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇವೆ. ಒಂದು ವೇಳೆ ಯೋಗೇಶ್ವರ್ ಅವರಿಗೆ ಮಂತ್ರಿಸ್ಥಾನ ಕೊಟ್ಟರೆ, ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೆದಾರ್ ಅವರಿಗೂ ಸಚಿವ ಸ್ಥಾನ ಕೊಡಲಿ.
ಅವರು ಕೂಡ ಕಷ್ಟ ಪಟ್ಟಿದ್ದಾರೆ. ಆದರೂ ಸೋತರು ಎಂದು ಒತ್ತಾಯಿಸಿದ್ದಾರೆ. ಸಂತೋಷ್ ಆತ್ಮಹತ್ಯೆ ಯತ್ನದ ಹಿಂದೆ ರಾಜಕೀಯ ಒತ್ತಡ : ಸಲೀಂ
ಇದೇ ವೇಳೆ ರಮೇಶ್ ಜಾರಕಿಹೊಳಿ ಬಿಜೆಪಿಯ ಪರ್ಯಾಯ ಪವರ್ ಸೆಂಟರ್ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಪವರ್ ಸೆಂಟರ್ ಅನ್ನೋ ಪ್ರಶ್ನೆ ಇಲ್ಲ.
ಬಿಜೆಪಿಯಲ್ಲಿ ಒಂದೇ ಪವರ್ ಸೆಂಟರ್ ಇರೋದು. ಅದು ಯಡಿಯೂರಪ್ಪ, ರಾಜ್ಯಾಧ್ಯಕ್ಷರು ಇವರಿಬ್ಬರು ಬಿಟ್ಟರೆ ನಮ್ಮಲ್ಲಿ ಬೇರೆ ಪವರ್ ಸೆಂಟರ್ ಇಲ್ಲ ಎಂದು ಸ್ಪಷ್ಟಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










