ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಯಾವ ಸಮುದಾಯವರೂ ಕೂಡ ನಮ್ಮನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಎಂದು ಆಗ್ರಹಿಸುವುದರಲ್ಲಿ ತಪ್ಪೇನು ಇಲ್ಲ. ನಾನು ಯಾವ ಸಮುದಾಯದ ವಿರುದ್ಧವೂ ಇಲ್ಲ, ಪರವೂ ಇಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಮಾತನಾಡಿದ ಸಿದ್ದರಾಮಯ್ಯ, ಸಂವಿಧಾನದ ಆಶಯದ ಪ್ರಕಾರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಯಾವ ಸಮುದಾಯ ಹಿಂದುಳಿದಿದೆಯೋ ಅವನ್ನು ಸೇರಿಸಬೇಕು. ಆದರೆ, ಅದನ್ನು ತೀರ್ಮಾನ ಮಾಡುವವರು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಎಂದು ಸ್ಪಷ್ಟಪಡಿಸಿದರು.
ಸಂವಿಧಾನದ ಪ್ರಕಾರ ಶಾಶ್ವತ ಆಯೋಗದ ಶಿಫಾರಸು ಮಾಡಿದ ನಂತರವೇ ರಾಜ್ಯಗಳು ಮೀಸಲಾತಿ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಆಯೋಗದ ಶಿಫಾರಸು ಇಲ್ಲದೆ ಕ್ಯಾಬಿನೆಟ್ ಅಜೆಂಡಾದಲ್ಲಿ ಸೇರಿಸಿರುವುದು ತಪ್ಪು ಎಂದು ಗೊತ್ತಾಗಿಯೇ ಸಿಎಂ ಯಡಿಯೂರಪ್ಪ ಅವರು ಪ್ರಸ್ತಾವನೆ ವಾಪಸ್ ಪಡೆದಿರಬೇಕು. ಬಿಜೆಪಿ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದು, ಎಷ್ಟು ಬೇಗ ತೊಲಗುತ್ತೋ ಅಷ್ಟು ಕರ್ನಾಟಕಕ್ಕೆ ಒಳ್ಳೆಯದು ಎಂದು ಕಿಡಿಕಾರಿದರು.

ಹಿಂದುಳಿದ ವರ್ಗಗಳ ಪಟ್ಟಿಗೆ ಯಾವುದೇ ಸಮುದಾಯವನ್ನು ಸೇರಿಸಬೇಕಾದರೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಸರ್ಕಾರ ತರಿಸಿಕೊಳ್ಳಬೇಕು. ಆದರೆ, ಎಲ್ಲರೂ ಈ ಆಯೋಗದ ಹೆಸರನ್ನೇ ಮರೆತಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಹೆಸರು ಡಿಲೀಟ್ ಮಾಡುವುದಾಗಲಿ, ಸೇರಿಸುವುದಾಗಲಿ ಮಾಡಬೇಕಾದರೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಳ್ಳಬೇಕು. ಆಯೋಗ ಕೂಲಂಕುಶವಾಗಿ ಪರಿಶೀಲನೆ ನಡೆಸಿ ವರದಿ ಕೊಡಬೇಕು. ಆಯೋಗ ಹಿಂದುಳಿದ ವರ್ಗದ ಪಟ್ಟಿಗೆ ಯಾವ ಸಮುದಾಯವನ್ನು ಸೇರಿಸಿ ಅನ್ನುತ್ತಾರಾ ಬೇಡ ಅನ್ನುತ್ತಾರಾ ಎಂದಿರುವುದಕ್ಕೆ ಆಧಾರ ಬೇಕು ಎಂದರು.
ಸರ್ಕಾರ ಬೇಕಾಬಿಟ್ಟಿಯಾಗಿ ಮೀಸಲಾತಿಗೆ ಶಿಫಾರಸು ಮಾಡುವುದಾದರೆ ಸುಪ್ರೀಂಕೋರ್ಟ್ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿರುವುದರ ಉದ್ದೇಶವೇನು ? ಸುಪ್ರೀಂಕೋರ್ಟ್ ಕೂಡ ಯಾವುದೇ ವರ್ಗವನ್ನು ಹಿಂದುಳಿದ ಪಟ್ಟಿಗೆ ಸೇರಿಸುವುದಾಗಲೀ, ತೆಗೆದು ಹಾಕುವುದಾಗಲಿ ಮಾಬೇಕಾದರೆ ಆಯೋಗದ ಶಿಫಾರಸು ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಕಾನೂನಿನ ವಿವರಗಳನ್ನು ಸಿದ್ದರಾಮಯ್ಯ ತಿಳಿಸಿದ್ದಾರೆ.
ಇದೇ ವೇಳೆ, ಸಚಿವ ಸಂಪುಟ ವಿಸ್ತರಣೆ ಮಾಡಲಿ, ಬಿಡಲಿ, ಅದು ನನಗೆ ಸಂಬಂಧ ಇಲ್ಲ, ಇವರು ವ್ಯಾಪಾರ ಮಾಡಿಕೊಂಡು ಹೋದವರು, ಅವರು ನೋಡಿಕೊಳ್ಳಲಿ ಬಿಡಿ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








