ಮಂಗಳೂರು: ಕರಾವಳಿಯ ವಾಣಿಜ್ಯ ನಗರಿ ಮಂಗಳೂರಿನಲ್ಲಿ ಪದೇ ಪದೇ ಗೋಡೆಗಳ ಮೇಲೆ ಕಿಡಿಗೇಡಿಗಳು ಬರೆಯುತ್ತಿದ್ದರೂ ಗುಪ್ತಚರ ಇಲಾಖೆ ಏನು ಮಾಡ್ತಿದೆ..? ಮಂಗಳೂರಿನಲ್ಲೇ ಮತ್ತೆ ಮತ್ತೆ ಹೀಗ್ಯಾಕೆ ಅಗ್ತಿದೆ ಎಂದು ಕಾಂಗ್ರೆಸ್ ಮುಖಂಡ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಯು.ಟಿ.ಖಾದರ್, ನಗರದಲ್ಲಿ ಗೋಡೆ ಬರಹ ಬರೆಯುವುದನ್ನ ತೀವ್ರವಾಗಿ ಖಂಡಿಸುತ್ತೇವೆ. ಇದನ್ನ ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಕಾನೂನಿಗೆ ಹೆದರದ ಪರಿಸ್ಥಿತಿ ನಿರ್ಮಾಣವಾಗಿದೆ. ಗೋಡೆ ಬರಹ, ಇನ್ನಿತರ ವಿಚಾರಗಳು ಕಾಂಗ್ರೆಸ್ ಸರ್ಕಾರ ಇದ್ದಾಗ ಇರಲಿಲ್ಲ. ಆದ್ರೆ ಬಿಜೆಪಿ ಬಂದಾಗ ಸಮಾಜ ದ್ರೋಹಿ ಶಕ್ತಿಗಳಿಗೆ ಧೈರ್ಯ ಬರುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗೋಡೆ ಬರಹ ಬರೆಯುವವರ ಪತ್ತೆ ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿ. ಇವರಿಗೆ ಬೆಂಬಲವಾಗಿರುವರನ್ನ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಗುಪ್ತಚರ ಇಲಾಖೆ ಏನು ಮಾಡ್ತಿದೆ..? ಮತ್ತೆ ಮತ್ತೆ ಹೀಗ್ಯಾಕೆ ಅಗ್ತಿದೆ ಎಂದು ಖಾದರ್ ಪ್ರಶ್ನಿಸಿದ್ದಾರೆ.

ಗೋಡೆ ಬರಹ ಬರೆದವರನ್ನ ಪತ್ತೆ ಹಚ್ಚಿ ಅಂಥವರನ್ನ ಬೇರೆ ದೇಶಕ್ಕೆ ಬಿಟ್ಟು ಬರಬೇಕು. ಅಂಥವರಿಗೆ ನಮ್ಮ ಮಣ್ಣಿನಲ್ಲಿ ಇರಲು ಯಾವುದೇ ಹಕ್ಕಿಲ್ಲ. ಇದಕ್ಕೆ ಜಿಲ್ಲೆಯ ಸಂಸದರು, ಶಾಸಕರು ಉತ್ತರ ಕೊಡಬೇಕು. ಜತೆಗೆ ಈ ವಿಚಾರವನ್ನು ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಒಂದು ವಾರದ ಒಳಗೆ ಈ ಆರೋಪಿಗಳ ಪತ್ತೆಯಾಗಬೇಕು. ಅದು ಬಿಟ್ಟು 15 ದಿನದ ಒಳಗೆ ಬಂಧನ ಆಗದೇ ಇದ್ರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೇವೆ ಎಂದು ಖಾದರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕೋಮುಗಳ ನಡುವೆ ದ್ವೇಷ ಹಚ್ಚುವ ಕೆಲಸ ಮಾಡುವವರು ಮಾನಸಿಕ ಅಸ್ವಸ್ಥ ಆಗಿರಲಿ, ಯಾರೇ ಆಗಿರಲಿ ಅರೆಸ್ಟ್ ಮಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದಕ್ಕೆ ಜವಾಬ್ದಾರಿ ಅಲ್ವಾ? ರಾಜ್ಯ ಸರ್ಕಾರ ಇವತ್ತು ಕೋಮಾ ಸ್ಥಿತಿಯಲ್ಲಿ ಇದೆ ಎಂದು ಯು.ಟಿ ಖಾದರ್ ಟೀಕಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








