ಬಳ್ಳಾರಿ: ನೂತನ ವಿಜಯನಗರ ಕಂಪ್ಲಿ ತಾಲೂಕು ಸೇರ್ಪಡೆಗೆ ಆಗ್ರಹಿಸಿ ಇಂದು ಕರೆ ನೀಡಲಾಗಿದ್ದ ಕಂಪ್ಲಿ ಪಟ್ಟಣ ಬಂದ್ ವೇಳೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಎನ ನಡೆದಿದೆ.

ಬಂದ್ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಜೆ.ಎನ್ ಗಣೇಶ್ ಆಗಮಿಸಿದ್ದಾರೆ. ಶಾಸಕ ಗಣೇಶ್ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಇದರಿಂದ ಆಕ್ರೋಶಗೊಂಡ ಶಾಸಕ ಜೆ.ಎನ್.ಗಣೇಶ್ ಹಾಗೂ ಬೆಂಬಲಿಗರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ಏರ್ಪಟ್ಟು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸ ಹರಸಾಹಸ ನಡೆಸಬೇಕಾಯಿತು.

ಕಂಪ್ಲಿ ಸೇರೋವರೆಗೆ ಹೋರಾಟ ಮಾಡ್ತೇವೆ-ಗಣೇಶ್
ನೂತನ ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರೋವರೆಗೆ ಹೋರಾಟ ಮಾಡುತ್ತೇನೆ ಎಂದು ಕಂಪ್ಲಿಯಲ್ಲಿ ಶಾಸಕ ಜೆ.ಎನ್. ಗಣೇಶ್ ಹೇಳಿದ್ದಾರೆ.
ಈ ಸಂಬಂಧ ಸ್ಥಳೀಯ ಮುಖಂಡರು ಏನೂ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ಧ. ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಕಂಪ್ಲಿ ಸೇರಿಸದೇ ಇರುವುದಕ್ಕೆ ಬೇಸರವಿದೆ. ಆನಂದ್ ಸಿಂಗ್ ಅವರು ನಮಗೆ ಅಭಿಪ್ರಾಯ ಕೇಳಿದಾಗ ಖಾಲಿ ಲೆಟರ್ ಪ್ಯಾಡ್ ಕೊಟ್ಟು, ಸ್ವಾಮೀಜಿಗಳ ಜತೆ ಬೆಂಗಳೂರಿಗೆ ಹೋದ ಏಕೈಕ ಶಾಸಕ ನಾನು. ಆನಂದ್ ಸಿಂಗ್ ಅವರಿಗೆ ನನಗೂ ರೆಸಾರ್ಟ್‍ನಲ್ಲಿ ಗಲಾಟೆಯಾಗಿದ್ದಕ್ಕೂ, ಕಂಪ್ಲಿ ಕ್ಷೇತ್ರ ಕೈಬಿಟ್ಟಿದ್ದಕ್ಕೆ ಸಂಬಂಧವಿಲ್ಲ ಎಂದು ಗಣೇಶ್ ಸ್ಪಷ್ಟಪಡಿಸಿದ್ದಾರೆ.
ಕಂಪ್ಲಿ ಕ್ಷೇತ್ರದಲ್ಲಿ ಹಿಟ್ಲರ್ ಆಡಳಿತ
ಶಾಸಕನಾದ ನನಗೆ ಭದ್ರತೆ ಇಲ್ಲ. ಕಂಪ್ಲಿ ಕ್ಷೇತ್ರದಲ್ಲಿ ಹಿಟ್ಲರ್ ಆಡಳಿತ ಇದೆ. ಇಂದು ನಡೆದ ಕಂಪ್ಲಿ ಬಂದ್ ನಲ್ಲಿ ನನಗೆ ಹತ್ತಾರು ಜನ ಬಿಜೆಪಿ ಕಾರ್ಯಕರ್ತರು ಗದರಿಸಲು ಬಂದ್ರು. ಹಲ್ಲೆ ಮಾಡಲು ಮೇಲೇರಿ ಬಂದ್ರು. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ದೌರ್ಜನ್ಯ ಹೆಚ್ಚಾಗುತ್ತಿದೆ. ಒಬ್ಬ ಶಾಸಕನ ಮೇಲೆ ದೌರ್ಜನ್ಯ ನಡೆದಿದೆ. ಈ ಸಂಬಂಧ ಪೆÇಲೀಸರು ದೂರು ದಾಖಲಿಸಿಕೊಳ್ಳಬೇಕು. ಇಲ್ಲವಾದ್ರೆ ಕಾಂಗ್ರೆಸ್ ಪಕ್ಷ ಏನೂ ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿರ್ತೆವೆ. ನನ್ನ ಮೇಲೆ ದೌರ್ಜನ್ಯ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕಿದೆ. ಇಲ್ಲಿ ಮಾಜಿ ಶಾಸಕ ಸುರೇಶ್ ಬಾಬು ಅವರದ್ದು ದರ್ಬಾರ್ ಇದೆ ಎಂದು ಹಾಲಿ ಶಾಸಕ ಜೆ.ಎನ್ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








