ನಾನು ತಿಪ್ಪೆಗೆ ಸಗಣಿ ಹೊತ್ತಿದ್ದೇನೆ ಎಂದು ಹೇಳಿದ್ದೇಕೆ ಸಿದ್ದರಾಮಯ್ಯ
ಬೆಂಗಳೂರು : ನಮ್ಮ ದೇಶದಲ್ಲಿ ಹುಚ್ಚರ ಸಂತೆಯಲ್ಲಿ ಉಂಡೋನೆ ಜಾಣ ಅನ್ನೋ ಹಾಗಾಗಿದೆ. ಗೋಹತ್ಯೆ ನಿಷೇಧ ಮಾಡಿದ್ರೆ ಸಾಕಷ್ಟು ಬಡವರಿಗೆ ತೊಂದರೆ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾನೂನಿಗೆ ವಿರೋಧ ವ್ಯಕ್ತಪಡಿಸಿದರು. ಕಾನೂನು ಜಾರಿಗೆ ತಂದ್ರೆ ಮುದಿ ಹಸು, ಗೊಡ್ಡು ಹಸುನಾ ಏನು ಮಾಡೋದು? ಆರ್ ಎಸ್ ಎಸ್ ನವರ ಮನೆಗೆ ಹೊಡೆಯೋದಾ ಎಂದು ಪ್ರಶ್ನಿಸಿದರು.
ಹಿಂದೂ – ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ತುಂಬಾ ಜನರಿದ್ದಾರೆ : ಸಿದ್ದರಾಮಯ್ಯ
ಹಾಲು, ತುಪ್ಪ ಎಲ್ಲ ಇವರು ತಗೊಂಡು ತಿಂತಾರೆ. ಪಾಪ ಅವರು ಸಗಣಿ ಇಟ್ಕೊಂಡು ಏನ್ ಮಾಡೋದು. ನಾನು ತಿಪ್ಪೆಗೆ ಸಗಣಿ ಹೊತ್ತಿದ್ದೇನೆ. ಇವರು ಹೊತ್ತಿದ್ದಾರಾ?
ನಮ್ಮ ದೇಶದಲ್ಲಿ ಹುಚ್ಚರ ಸಂತೆಯಲ್ಲಿ ಉಂಡೋನೆ ಜಾಣ ಅನ್ನೋ ಹಾಗಾಗಿದೆ. ಗೋಹತ್ಯೆ ನಿಷೇಧ ಮಾಡಿದ್ರೆ ಸಾಕಷ್ಟು ಬಡವರಿಗೆ ತೊಂದರೆ ಆಗುತ್ತದೆ ಎಂದು ಗೋಹತ್ಯೆ ನಿಷೇಧ ಕಾನೂನಿಗೆ ವಿರೋಧ ವ್ಯಕ್ತಪಡಿಸಿದರು.
ಇನ್ನು ಲವ್ ಜಿಹಾದ್ ವಿಚಾರವಾಗಿ ಮಾತನಾಡಿ, ಮದುವೆ ಅವರವರ ವೈಯುಕ್ತಿಕ ಆಯ್ಕೆ. ಈ ದೇಶದಲ್ಲಿ ಮುಸಲ್ಮಾನರು ಮೊಘಲರು 600 ವರ್ಷಗಳಿಂದ ಇದ್ದಾರೆ.
ಎಷ್ಟೋ ಸಂಬಂಧಗಳು ಬೆಳೆದು ಬಿಟ್ಟಿದ್ದಾವೆ. ಹಿಂದೂ- ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಬಹಳ ಜನ ಇದ್ದಾರೆ. ನನ್ನ ಪ್ರಕಾರ ಇದೊಂದು ಮೂರ್ಖತನ. ಇದನ್ನು ಸಂವಿಧಾನ ಅನುಮತಿಸುವುದಿಲ್ಲ. ಕೋರ್ಟಿಗೆ ಹೋದರೆ ವಜಾ ಆಗುತ್ತವೆ ಎಂದು ವಿವರಿಸಿದರು.
ಇನ್ನು ವಯಸ್ಸಿಗೆ ಬಂದ ಹೆಣ್ಣು ಅಥವಾ ಗಂಡು ಅವರ ಇಚ್ಛೆಯಂತೆ ಬದುಕಬಹುದು ಎಂದು ಇತ್ತೀಚೆಗಷ್ಟೇ ಅಲಹಬಾದ್ ಹೈಕೋರ್ಟ್ ಹೇಳಿದೆ. ತೀರ್ಪಿನ ನಂತರವೂ ಕೇಂದ್ರ ಕಾನೂನು ಜಾರಿಗೆ ಮುಂದಾಗಿರುವುದು ದುರುದ್ದೇಶದ ಸಂಗತಿ ಆಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









