ರೈತ ವಿರೋಧಿ ಕಾಯ್ದೆಗಳ ವಿರುದ್ಧ ನಾಳೆ ಭಾರತ್ ಬಂದ್
ಭಾರತ್ ಬಂದ್‍ಗೆ 12 ಸಂಘಟನೆಗಳ ಬೆಂಬಲ
ಕರ್ನಾಟಕದಲ್ಲೂ ಕಾಂಗ್ರೆಸ್ ಸೇರಿ ಹಲವು ಸಂಘಟನೆಗಳ ಬೆಂಬಲ
ಬೆಂಗಳೂರು: ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ಕಳೆದ 13 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಉಗ್ರಸ್ವರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ನಾಳೆ 12 ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿವೆ.
ಅನ್ನದಾತನ ಪಾಲಿಗೆ ಮರಣ ಶಾಸನವಾಗಿರುವ ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ರೈತರು ಕಳೆದ ಒಂದು ವಾರದಿಂದ ಉಗ್ರ ಹೋರಾಟ ನಡೆಸಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಮಣಿಯದ ಹಿನ್ನೆಲೆ ನಾಳೆ ರೈತರು ಭಾರತ್ ಬಂದ್‍ಗೆ ಕರೆ ನೀಡಿದ್ದಾರೆ.
ಭಾರತ್ ಬಂದ್‍ಗೆ ಕರ್ನಾಟಕದ ರೈತ ಸಂಘಟನೆಗಳ ಬೆಂಬಲ
ರೈತಸಂಘ, ಹಸಿರು ಸೇನೆ, ವಾಟಾಳ್‍ಮ ಕರವೇ ಬೆಂಬಲ
ನಾಳೆ ಎಪಿಎಂಸಿಗಳನ್ನು ಬಂದ್ ಮಾಡಲಿರುವ ವರ್ತಕರು
ಶನಿವಾರವಷ್ಟೇ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದವು. ಕರ್ನಾಟಕ ಬಂದ್ ಆದ ಮೂರೇ ದಿನಗಳಲ್ಲಿ ಭಾರತ್ ಬಂದ್ ಬರುತ್ತಿದೆ. ಬಂದ್‍ಗೆ ರಾಜ್ಯದ ರೈತ ಸಂಘಟನೆಗಳಾದ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಪ್ರತಿಭಟನೆ ನಡೆಸಲಿವೆ.
ಭಾರತ್ ಬಂದ್‍ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಭಾರತ್ ಬಂದ್‍ಗೆ ಹಲವು ಸಂಘಟನೆಗಳ ನೈತಿಕ ಬೆಂಬಲ
ಹೋಟೆಲ್, ಬೀದಿಬದಿ ವ್ಯಾಪಾರಿಗಳು, ಖಾಸಗಿ ಶಾಲೆಗಳ ಬೆಂಬಲ
ವಾಟಾಳ್, ಕರವೇ, ಕಾಂಗ್ರೆಸ್ ಪಕ್ಷದಿಂದ ಬಂದ್‍ಗೆ ಬೆಂಬಲ
ನಾಳೆಯ ಭಾರತ್ ಬಂದ್‍ಗೆ ವಾಟಾಳ್ ನಾಗರಾಜ್ ನೇತೃತ್ವದ ಹಲವು ಕನ್ನಡಪರ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದ್ದು, ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಘೋಷಣೆ ಮಾಡಿವೆ. ನಾಳೆಯ ಭಾರತ್ ಬಂದ್‍ಗೆ ಪ್ರದೇಶ ಕಾಂಗ್ರೆಸ್ ಪಕ್ಷ(ಕೆಪಿಸಿಸಿ) ಬೆಂಬಲ ಸೂಚಿಸಿದ್ದು, ರಾಜ್ಯ ಎಲ್ಲಾ ಬ್ಲಾಕ್, ತಾಲೂಕು ಮಟ್ಟದಲ್ಲೂ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ವ ಹೇಳಿದ್ದಾರೆ.
ಹೋಟೆಲ್ ಬಂದ್ ಇಲ್ಲ,
ಓಲಾ-ಉಬರ್, ಆಟೋ ಬಂದ್ ಇಲ್ಲ
ಪದೇ ಪದೇ ಬಂದ್ ನಡೆಸುತ್ತಿರುವುದರಿಂದ ಭಾರತ್ ಬಂದ್‍ಗೆ ಬೆಂಬಲ ನೀಡದಿರಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದ್ದು, ಎಂದಿನಂತೆ ನಾಳೆಯು ಹೋಟೆಲ್‍ಗಳು ತೆರೆಯಲಿವೆ. ಓಲಾ, ಉಬರ್ ಸಂಘಗಳು ಬಂದ್‍ಗೆ ನೈತಿಕ ಬೆಂಬಲ ನೀಡಿದ್ದು, ನಾಳೆ ನಗರದಲ್ಲಿ ಸಂಚಾರ ಮಾಡಲಿವೆ. ಕೆಲ ಆಟೋ ಸಂಘಟನೆಗಳು ಬಂದ್ ಬೆಂಬಲಿಸಿದ್ದರೆ, ಮತ್ತೆ ಕೆಲವು ನೈತಿಕ ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ಆಟೋಗಳು ಸಂಚಾರ ಮಾಡಲಿವೆ. ಜತೆಗೆ ಬಂದ್‍ಗೆ ಬೀದಿ ಬದಿ ವ್ಯಾಪಾರಿಗಳು ನೈತಿಕ ಬೆಂಬಲ ಸೂಚಿಸಿದ್ದರೆ, ಪರೀಕ್ಷೆ ಹೊರತುಪಡಿಸಿ ಆನ್‍ಲೈನ್ ಕ್ಲಾಸ್ ಬಂದ್ ಮಾಡಿ ನಾಳೆ ಖಾಸಗಿ ಶಾಲೆಗಳು ಬೆಂಬಲ ಸೂಚಿಸಲಿವೆ.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತೆ
ತರಕಾರಿ, ಹೂವು-ಹಣ್ಣು, ದಿನಸಿ ಅಂಗಡಿ, ಹಾಲು,
ಮೆಡಿಕಲ್, ಆಸ್ಪತ್ರೆಗಳು ಓಪನ್
ನಾಳೆಯ ಭಾರತ್‍ಗೆ ರೈತರು ಕರೆ ನೀಡಿದ್ದರೂ ಕೆಎಸ್‍ಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ. ನಾಳೆ ರಾಜ್ಯಾದ್ಯಂತ ಬಸ್‍ಗಳು ಎಂದಿನಂತೆ ಸಂಚಾರ ಮಾಡಲಿವೆ ಎಂದು ಸಾರಿಗೆ ಸಂಸ್ಥೆಗಳು ತಿಳಿಸಿವೆ. ಬಂದ್ ಇದ್ದರೂ ನಾಳೆ ತರಕಾರಿ, ಹೂವು-ಹಣ್ಣು, ದಿನಸಿ, ಹಾಲು, ಮೆಡಿಕಲ್ ಹಾಗೂ ಆಸ್ಪತ್ರೆಗಳು ಓಪನ್ ಆಗಲಿವೆ.
ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ ಅಖಿಲ ಭಾರತ ವ್ಯಾಪಾರ ಒಕ್ಕೂಟ ಸಂಘಟನೆ ಎಐಟಿಯುಸಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ನಾಳೆಯ ಬಂದ್‍ಗೆ ಸಂಪೂರ್ಣ ಬೆಂಬಲ ನೀಡಿದೆ. ಪಂಜಾಬ್ ರೈತರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಸತತ 13 ದಿನಗಳಿಂದಲೂ ನಿರಂತರವಾಗಿ ಪ್ರತಿಭಟನೆಗಳನ್ನ ಮಾಡುತ್ತಾ ಬಂದಿದ್ದಾರೆ. ರೈತರ ಜೊತೆ ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತುಗಳ ಸಂಧಾನ ಸಭೆಗಳು ವಿಫಲವಾಗಿವೆ. ಎಂಎಸ್‍ಪಿಯನ್ನ ಲಿಖಿತವಾಗಿ ಅಳವಡಿಸುವ ಕೇಂದ್ರದ ಭರವಸೆ ರೈತರಿಗೆ ಸಮಾಧಾನ ತಂದಿಲ್ಲ. ಕೃಷಿ ಕಾಯ್ದೆಗಳನ್ನ ಕೈಬಿಡುವವರೆಗೂ ರೈತ ಸಂಘಟನೆಗಳ ಹೋರಾಟ ಮುಂದುವರಿಯುವ ಎಲ್ಲಾ ಸಾಧ್ಯತೆ ಇದೆ.