ADVERTISEMENT
Wednesday, June 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ರೈತರಿಂದ ನಾಳೆ ಭಾರತ್ ಬಂದ್, ರಾಜ್ಯದಲ್ಲಿ ನಾಳೆ ಏನಿರುತ್ತೆ.. ಏನಿರಲ್ಲ..!

admin by admin
December 7, 2020
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ರೈತ ವಿರೋಧಿ ಕಾಯ್ದೆಗಳ ವಿರುದ್ಧ ನಾಳೆ ಭಾರತ್ ಬಂದ್
ಭಾರತ್ ಬಂದ್‍ಗೆ 12 ಸಂಘಟನೆಗಳ ಬೆಂಬಲ
ಕರ್ನಾಟಕದಲ್ಲೂ ಕಾಂಗ್ರೆಸ್ ಸೇರಿ ಹಲವು ಸಂಘಟನೆಗಳ ಬೆಂಬಲ

ಬೆಂಗಳೂರು: ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳ ವಿರುದ್ಧ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರು ಕಳೆದ 13 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಉಗ್ರಸ್ವರೂಪ ಪಡೆದುಕೊಂಡಿದೆ. ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ನಾಳೆ 12 ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿವೆ.
ಅನ್ನದಾತನ ಪಾಲಿಗೆ ಮರಣ ಶಾಸನವಾಗಿರುವ ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ರೈತರು ಕಳೆದ ಒಂದು ವಾರದಿಂದ ಉಗ್ರ ಹೋರಾಟ ನಡೆಸಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಮಣಿಯದ ಹಿನ್ನೆಲೆ ನಾಳೆ ರೈತರು ಭಾರತ್ ಬಂದ್‍ಗೆ ಕರೆ ನೀಡಿದ್ದಾರೆ.

Related posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

June 17, 2026
ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

June 17, 2026

ಭಾರತ್ ಬಂದ್‍ಗೆ ಕರ್ನಾಟಕದ ರೈತ ಸಂಘಟನೆಗಳ ಬೆಂಬಲ
ರೈತಸಂಘ, ಹಸಿರು ಸೇನೆ, ವಾಟಾಳ್‍ಮ ಕರವೇ ಬೆಂಬಲ
ನಾಳೆ ಎಪಿಎಂಸಿಗಳನ್ನು ಬಂದ್ ಮಾಡಲಿರುವ ವರ್ತಕರು

ಶನಿವಾರವಷ್ಟೇ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದವು. ಕರ್ನಾಟಕ ಬಂದ್ ಆದ ಮೂರೇ ದಿನಗಳಲ್ಲಿ ಭಾರತ್ ಬಂದ್ ಬರುತ್ತಿದೆ. ಬಂದ್‍ಗೆ ರಾಜ್ಯದ ರೈತ ಸಂಘಟನೆಗಳಾದ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸಂಘ ಸೇರಿ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದು, ಪ್ರತಿಭಟನೆ ನಡೆಸಲಿವೆ.

ಭಾರತ್ ಬಂದ್‍ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಭಾರತ್ ಬಂದ್‍ಗೆ ಹಲವು ಸಂಘಟನೆಗಳ ನೈತಿಕ ಬೆಂಬಲ
ಹೋಟೆಲ್, ಬೀದಿಬದಿ ವ್ಯಾಪಾರಿಗಳು, ಖಾಸಗಿ ಶಾಲೆಗಳ ಬೆಂಬಲ
ವಾಟಾಳ್, ಕರವೇ, ಕಾಂಗ್ರೆಸ್ ಪಕ್ಷದಿಂದ ಬಂದ್‍ಗೆ ಬೆಂಬಲ

ನಾಳೆಯ ಭಾರತ್ ಬಂದ್‍ಗೆ ವಾಟಾಳ್ ನಾಗರಾಜ್ ನೇತೃತ್ವದ ಹಲವು ಕನ್ನಡಪರ ಸಂಘಟನೆಗಳು, ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದ್ದು, ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಘೋಷಣೆ ಮಾಡಿವೆ. ನಾಳೆಯ ಭಾರತ್ ಬಂದ್‍ಗೆ ಪ್ರದೇಶ ಕಾಂಗ್ರೆಸ್ ಪಕ್ಷ(ಕೆಪಿಸಿಸಿ) ಬೆಂಬಲ ಸೂಚಿಸಿದ್ದು, ರಾಜ್ಯ ಎಲ್ಲಾ ಬ್ಲಾಕ್, ತಾಲೂಕು ಮಟ್ಟದಲ್ಲೂ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ವ ಹೇಳಿದ್ದಾರೆ.

ಹೋಟೆಲ್ ಬಂದ್ ಇಲ್ಲ,
ಓಲಾ-ಉಬರ್, ಆಟೋ ಬಂದ್ ಇಲ್ಲ

ಪದೇ ಪದೇ ಬಂದ್ ನಡೆಸುತ್ತಿರುವುದರಿಂದ ಭಾರತ್ ಬಂದ್‍ಗೆ ಬೆಂಬಲ ನೀಡದಿರಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದ್ದು, ಎಂದಿನಂತೆ ನಾಳೆಯು ಹೋಟೆಲ್‍ಗಳು ತೆರೆಯಲಿವೆ. ಓಲಾ, ಉಬರ್ ಸಂಘಗಳು ಬಂದ್‍ಗೆ ನೈತಿಕ ಬೆಂಬಲ ನೀಡಿದ್ದು, ನಾಳೆ ನಗರದಲ್ಲಿ ಸಂಚಾರ ಮಾಡಲಿವೆ. ಕೆಲ ಆಟೋ ಸಂಘಟನೆಗಳು ಬಂದ್ ಬೆಂಬಲಿಸಿದ್ದರೆ, ಮತ್ತೆ ಕೆಲವು ನೈತಿಕ ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆ ಬೆಂಗಳೂರಿನಲ್ಲಿ ಆಟೋಗಳು ಸಂಚಾರ ಮಾಡಲಿವೆ. ಜತೆಗೆ ಬಂದ್‍ಗೆ ಬೀದಿ ಬದಿ ವ್ಯಾಪಾರಿಗಳು ನೈತಿಕ ಬೆಂಬಲ ಸೂಚಿಸಿದ್ದರೆ, ಪರೀಕ್ಷೆ ಹೊರತುಪಡಿಸಿ ಆನ್‍ಲೈನ್ ಕ್ಲಾಸ್ ಬಂದ್ ಮಾಡಿ ನಾಳೆ ಖಾಸಗಿ ಶಾಲೆಗಳು ಬೆಂಬಲ ಸೂಚಿಸಲಿವೆ.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತೆ
ತರಕಾರಿ, ಹೂವು-ಹಣ್ಣು, ದಿನಸಿ ಅಂಗಡಿ, ಹಾಲು,
ಮೆಡಿಕಲ್, ಆಸ್ಪತ್ರೆಗಳು ಓಪನ್

ನಾಳೆಯ ಭಾರತ್‍ಗೆ ರೈತರು ಕರೆ ನೀಡಿದ್ದರೂ ಕೆಎಸ್‍ಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್ ಸಂಚಾರ ಎಂದಿನಂತೆ ಇರಲಿದೆ. ನಾಳೆ ರಾಜ್ಯಾದ್ಯಂತ ಬಸ್‍ಗಳು ಎಂದಿನಂತೆ ಸಂಚಾರ ಮಾಡಲಿವೆ ಎಂದು ಸಾರಿಗೆ ಸಂಸ್ಥೆಗಳು ತಿಳಿಸಿವೆ. ಬಂದ್ ಇದ್ದರೂ ನಾಳೆ ತರಕಾರಿ, ಹೂವು-ಹಣ್ಣು, ದಿನಸಿ, ಹಾಲು, ಮೆಡಿಕಲ್ ಹಾಗೂ ಆಸ್ಪತ್ರೆಗಳು ಓಪನ್ ಆಗಲಿವೆ.

ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ ಅಖಿಲ ಭಾರತ ವ್ಯಾಪಾರ ಒಕ್ಕೂಟ ಸಂಘಟನೆ ಎಐಟಿಯುಸಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳು ನಾಳೆಯ ಬಂದ್‍ಗೆ ಸಂಪೂರ್ಣ ಬೆಂಬಲ ನೀಡಿದೆ. ಪಂಜಾಬ್ ರೈತರು ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಸತತ 13 ದಿನಗಳಿಂದಲೂ ನಿರಂತರವಾಗಿ ಪ್ರತಿಭಟನೆಗಳನ್ನ ಮಾಡುತ್ತಾ ಬಂದಿದ್ದಾರೆ. ರೈತರ ಜೊತೆ ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತುಗಳ ಸಂಧಾನ ಸಭೆಗಳು ವಿಫಲವಾಗಿವೆ. ಎಂಎಸ್‍ಪಿಯನ್ನ ಲಿಖಿತವಾಗಿ ಅಳವಡಿಸುವ ಕೇಂದ್ರದ ಭರವಸೆ ರೈತರಿಗೆ ಸಮಾಧಾನ ತಂದಿಲ್ಲ. ಕೃಷಿ ಕಾಯ್ದೆಗಳನ್ನ ಕೈಬಿಡುವವರೆಗೂ ರೈತ ಸಂಘಟನೆಗಳ ಹೋರಾಟ ಮುಂದುವರಿಯುವ ಎಲ್ಲಾ ಸಾಧ್ಯತೆ ಇದೆ.

Tags: Bharat BandhFarmersFarmers protest
ShareTweetSendShare
Join us on:

Related Posts

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

by admin
June 17, 2026
0

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..! ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ...

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

by Shwetha
June 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿ...

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

by Shwetha
June 17, 2026
0

ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳ ಹೆಸರನ್ನು ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪೊಲೀಸ್...

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

by Shwetha
June 17, 2026
0

ಚೆನ್ನೈ: ಮುಂಬರುವ ನೀಟ್ ಯುಜಿ ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಭಾವಿ ನಾಯಕ...

ಕರ್ನಾಟಕದಲ್ಲಿ ಮದ್ಯ ಪ್ರಿಯರಿಗೆ ಬಿಗ್ ಶಾಕ್: ವಯಸ್ಸು 21 ಆಗದಿದ್ದರೆ ಎಣ್ಣೆ ಸಿಗುವುದು ಡೌಟು!- ಪ್ರಿಯಾಂಕ್ ಖರ್ಗೆ ವಾರ್ನಿಂಗ್!

RSS ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ; ಪಾರದರ್ಶಕತೆ ಕುರಿತು ಮಹತ್ವದ ಹೇಳಿಕೆ

by Shwetha
June 17, 2026
0

ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ಯಾವುದೇ ಸಂಘ-ಸಂಸ್ಥೆ ದೇಶದ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram