ವಿವಾಹಿತ ಪ್ರಿಯಕರನ ಸಲಹೆಯಂತೆ ವಿಡಿಯೋ ಕಾಲ್ ಕರೆಯಲ್ಲಿ ಇರುವಾಗಲೇ ನೇಣಿಗೆ ಶರಣಾದ ಯುವತಿ woman ended life

ಚೆನ್ನೈ, ಡಿಸೆಂಬರ್07: ವಿವಾಹಿತನನ್ನು ಪ್ರೀತಿಸಿದ ತಪ್ಪಿಗೆ 24 ವರ್ಷದ ಯುವತಿ ನೇಣು ಬಿಗಿದು ಕೊಂಡು ತನ್ನ ಜೀವವನ್ನು ಕೊನೆಗೊಳಿಸಿದ್ದಾಳೆ. ಪ್ರಿಯತಮನೇ ಯುವತಿಗೆ ಸಾಯಲು ಹೇಳಿದ್ದ ಎನ್ನುವುದು ಇದೀಗ ತಿಳಿದುಬಂದಿದೆ. woman ended life
ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಆರೋಪಿ ತನಗೆ ಈ ಮೊದಲು ಮದುವೆಯಾದ ವಿಷಯವನ್ನು ಯುವತಿಯಿಂದ ಮರೆಮಾಚಿದ್ದ ಎಂದು ತಿಳಿದು ಬಂದಿದೆ. ಆ ಬಗ್ಗೆ ತಿಳಿದಾಗ ಆಕೆ ಆತನ ಮೇಲೆ ಕೋಪಗೊಂಡಿದ್ದು, ಪ್ರೀತಿಯನ್ನು ಮುರಿಯಲು ಮುಂದಾಗಿದ್ದಾಳೆ
ಮಹಿಳೆಯನ್ನು ಕೆ ಭಾರತಿ ಎಂದು ಗುರುತಿಸಲಾಗಿದೆ. ತಮಿಳುನಾಡಿನ ಪೆರುಂಬಕ್ಕಂ ನಿವಾಸಿಯಾಗಿರುವ ಭಾರತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿಯನ್ನು ಮುತ್ತು ಕುಮಾರೇಶನ್ ಎಂದು ಗುರುತಿಸಲಾಗಿದೆ.
ನವೆಂಬರ್ 18 ರಂದು ಕುಮಾರೇಶನ್ ಭಾರತಿಯನ್ನು ಭೇಟಿಯಾಗಲು ನಾಗ್ಪುರದಿಂದ ಚೆನ್ನೈಗೆ ಬಂದಿದ್ದ. ಆ ಸಮಯದಲ್ಲಿ ಕುಮಾರೇಶನ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ ಎಂದು ಭಾರತಿಗೆ ವಿಷಯ ತಿಳಿದಿದ್ದು, ಅವಳು ಅವನೊಂದಿಗಿನ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದಳು.
ಆದರೆ ಕುಮಾರೇಶನ್ ಭಾರತಿಯ ಮಾತನ್ನು ಕೇಳಲು ನಿರಾಕರಿಸಿದ್ದು, ಆಕೆಯನ್ನು ಎರಡನೇ ಮದುವೆಯಾಗಲು ಬಯಸಿದ್ದ. ಕುಮಾರ್ಸೇನ್ನ ಸಂಬಂಧವನ್ನು ಕೊನೆಗೊಳಿಸಲು ನಿರಾಕರಿಸಿದಾಗ, ಭಾರತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು.
ಡಿಸೆಂಬರ್ 2 ರಂದು ಭಾರತಿ ಮತ್ತು ಕುಮಾರೇಶನ್ ಪರಸ್ಪರ ವಿಡಿಯೋ ಕರೆಯಲ್ಲಿ ಮಾತನಾಡಿದ್ದರು ಮತ್ತು ಆಕೆ ಈ ಬಗ್ಗೆ ಆತನಿಗೆ ಎಚ್ಚರಿಕೆ ನೀಡಿದ್ದಳು. 24 ವರ್ಷದ ಯುವತಿ ತನ್ನ ರಕ್ತನಾಳಗಳನ್ನು ಕತ್ತರಿಸುವ ಪ್ರಯತ್ನ ಮಾಡಿದಾಗ, ಕುಮಾರ್ಸೇನ್ ಬೇಗನೆ ಸಾಯಲು ನೇಣು ಬಿಗಿದುಕೊಳ್ಳಬೇಕೆಂದು ಹೇಳಿದ್ದನು. ಅದರಂತೆ ಭಾರತಿ ವಿಡಿಯೋ ಕಾಲ್ ಕರೆಯಲ್ಲಿ ಇರುವಾಗಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.

ಭಾರತಿ ಸಾವಿನ ನಂತರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಅವರ ಫೋನ್ನಲ್ಲಿ ದಾಖಲಾದ ಸಂಭಾಷಣೆಯನ್ನು ಮರುಪಡೆಯಲಾಗಿದೆ.
ಕಾಲ್ ರೆಕಾರ್ಡಿಂಗ್ ಬಳಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹಿರಿಯ ಅಧಿಕಾರಿಯೊಬ್ಬರು ಭಾರತಿ ತನ್ನ ಜೀವನವನ್ನು ಕೊನೆಗೊಳಿಸುವುದನ್ನು ತಡೆಯುವ ಬದಲು, ಕುಮಾರೇಶನ್ ಅವರು ಮೌನವಾಗಿ ವೀಕ್ಷಿಸಿದ್ದ ಎಂದು ಹೇಳಿದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ವಾಯುಮಾಲಿನ್ಯದಿಂದಾಗಿ ಕೆಮ್ಮು ಉಂಟಾಗಿದ್ದರೆ ಇಲ್ಲಿದೆ ಸುಲಭವಾದ ಮನೆಮದ್ದುhttps://t.co/wkmjNg9GhY
— Saaksha TV (@SaakshaTv) November 30, 2020
ಪ್ಯಾಂಟ್ ನ ಹಿಂದಿನ ಕಿಸೆಯಲ್ಲಿ ಪರ್ಸ್ ಇಡುತ್ತಿದ್ದೀರಾ ? ಹಾಗಿದ್ದರೆ ಈ ಮಾಹಿತಿಯನ್ನು ಓದಿhttps://t.co/jEDUT5gzD0
— Saaksha TV (@SaakshaTv) November 30, 2020








