ಹುಬ್ಬಳ್ಳಿ: ಕೇಂದ್ರದ ರೈತ ವಿರೋಧಿ ಕಾಯ್ದೆಗಳನ್ನು ಖಂಡಿಸಿ ನಡೆಯುತ್ತಿರುವ ಭಾರತ್ ಬಂದ್ ಪ್ರತಿಭಟನೆಗೆ ಬೆಂಬಲ ನೀಡಿದ ಭಾರತೀಯ ಸೇನೆಯ ಯೋಧನನ್ನು ವಶಕ್ಕೆ ಪಡೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಅಸ್ಸಾಂನ ಆರ್.ಆರ್ ವಿಂಗ್ ನಲ್ಲಿ ಹವಾಲ್ದಾರ್ ಆಗಿರುವ ಯೋಧ ರಮೇಶ ಬಂದಿದ್ದರು. ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದ ಯೋಧ ರಮೇಶ ಮಾಡಳ್ಳಿ ರಜೆ ಮೇಲೆ ಹುಟ್ಟೂರಿಗೆ ಬಂದಿದ್ದರು.
ರೈತ ಕುಟುಂಬದಲ್ಲಿ ಜನಿಸಿದ ಯೋಧ ರೈತರ ಹೋರಾಟಕ್ಕೆ ಬೆಂಬಲ ನೀಡಲು ಬಂದಿದ್ದರು. ನನಗೆ ಯಾವುದೇ ಸರ್ಕಾರ ಹಾಗೂ ಪಕ್ಷಗಳು ಎಂಬುದು ನಮಗೆ ಸಂಬಂಧವೇ ಇಲ್ಲ. ಅನ್ನದ ಬೆಲೆ ಏನೂ ಎಂದು ನನಗೆ ಗೊತ್ತಿದೆ. ರೈತರ ಹೋರಾಟ ಎಂಬ ಕಾರಣಕ್ಕೆ ಬೆಂಬಲ ನೀಡಲು ಬಂದಿದ್ದೇನೆ. ರೈತರು ದೇಶದ ಬೆನ್ನೆಲುಬು, ನಾವು ದೇಶದ ರಕ್ಷಕರು. ಅನ್ನಕ್ಕೆ ಬೆಲೆ ನೀಡುವ ಸಲುವಾಗಿ ರೈತರ ಪ್ರತಿಭಟನೆಗೆ ಸ್ವಇಚ್ಛೆಯಿಂದ ಬೆಂಬಲ ನೀಡಿದ್ದೇನೆ ಎಂದು ಯೋಧ ರಮೇಶ್ ಸ್ಪಷ್ಟನೆ ನೀಡಿದ್ದಾರೆ.
ಯೋಧ ರಮೇಶ್ ಸೇನೆಯ ಸೇವೆಯಲ್ಲಿದ್ದು ಪ್ರತಿಭಟನೆಗೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel