ಏಲಿಯನ್ಸ್ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ಇಸ್ರೇಲ್ ನ ಹಿರಿಯ ವಿಜ್ಞಾನಿ
ಶತಶತಮಾನಗಳಿಂದ ಅನ್ಯಗ್ರಹ ಜೀವಿ ಏಲಿಯನ್ಸ್ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಕೆಲವರು ನಾವು ಏಲಿಯನ್ ಗಳನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ.
ಏಲಿಯನ್ ಗಳು ಭೂಮಿಗೆ ಬಂದಿದ್ವು ಅನ್ನೋ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಆದ್ರೆ ಈ ಸಾಕಷ್ಟು ಪುರಾವೆಗಳಂತೂ ಇನ್ನೂ ಸಿಕ್ಕಿಲ್ಲ. ಆದರೂ ಏಲಿಯನ್ ಗಳ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ.
ಇದೀಗ ಏಲಿಯನ್ ಇರುವ ಬಗ್ಗೆ ಹಾಗೂ ಅವು ಅಮೆರಿಕಾದ ಜೊತೆ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಇಸ್ರೇಲ್ ನ ಪ್ರಸಿದ್ಧ ವಿಜ್ಞಾನಿ ಅಚ್ಚರಿಯ ಮಾಹಿತಿ ನೀಡಿದ್ದಾರೆ.
ಇಸ್ರೇಲ್ ಸರ್ಕಾರದ ಬಾಹ್ಯಾಕಾಶ ರಕ್ಷಣಾ ಯೋಜನೆಯ ಮುಖ್ಯಸ್ಥರಾಗಿ 1981ರಿಂದ 2010ರವರೆಗೆ ಕಾರ್ಯ ನಿರ್ವಹಿಸಿರುವ 87 ವರ್ಷದ ಈ ವಿಶ್ವಖ್ಯಾತಿಯ ವಿಜ್ಞಾನಿ ಹೇಳಿದ್ದೇನು ಅನ್ನೋದು ಇಲ್ಲಿದೆ ನೋಡಿ..
ಹೌದು ಏಲಿಯನ್ ಗಳು ಇರೋದು ನಿಜ. ಅವು ಅಮೆರಿಕ ಸೇರಿದಂತೆ ಕೆಲ ದೇಶಗಳ ಜೊತೆಗೆ ವ್ಯವಹರಿಸುತ್ತಿವೆ. ಅವುಗಳು ತಮ್ಮದೇ ಆದ ಸಂಘಟನೆಯನ್ನೂ ಹೊಂದಿವೆ. ಅದರ ಹೆಸರು ಗಲ್ ಕ್ ಟಿಕ್ ಫೆಡರೇಷನ್ ಎಂದು ಹೇಮ್ ಯೇಶದ್ ಹೇಳಿದ್ದಾರೆ.
ಇಸ್ರೇಲಿ ಪ್ರಕಾಶನ ಸಂಸ್ಥೆ ಯಡಿಯೋಟ್ ಅಹರೊನೋಟ್ ಗೆ ನೀಡಿದ ಸಂದರ್ಶನದಲ್ಲಿ ಏಲಿಯನ್ ಗಳ ಬಗ್ಗೆ ಮಾತನಾಡಿರುವ ಅವರು, ಈ ಹಿಂದೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸಹ ಅನ್ಯಗ್ರಹ ಜೀವಿಗಳ ಅಸ್ತಿತ್ವ ಒಪ್ಪಿಕೊಂಡಿದ್ದರು.
ಆದರೆ ಹೆಚ್ಚೇನೂ ವಿವರ ನೀಡಿರಲಿಲ್ಲ. ಅದೇ ರೀತಿ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೂ ಏಲಿಯನ್ ಗಳು ಇರುವ ಬಗ್ಗೆ ತಿಳಿದಿತ್ತು. ಚೀನಾದಿಂದ ಡಿಜಿಟಲ್ ಸ್ಟ್ರೈಕ್ ; ಪ್ರಮುಖ ದೇಶಗಳ ಜನಪ್ರಿಯ 105 ಆ್ಯಪ್ ಬ್ಯಾನ್
ಅದನ್ನು ಅವರು ವಿಶ್ವಕ್ಕೆ ಸಾರಲು ಮುಂದಾಗಿದ್ದರು. ಆದ್ರೆ ಹಾಗೇನಾದರೂ ಅವರು ಹೇಳಿದ್ದರೆ ಅವರನ್ನು ಹುಚ್ಚ ಎಂದು ಹೇಳುತ್ತಿದ್ದರು. ಆದ್ದರಿಂದ ಅವರು ಹೇಳಲು ಹಿಂಜರಿದಿದ್ದಾರೆ’ ಎಂದು ಹೇಮ್ ಯೇಶದ್ ಹೇಳಿದ್ದಾರೆ.
ಇದಲ್ಲದೆ ಹೇಮ್ ಅವರು ಇನ್ನೂ ಅಚ್ಚರಿ ವಿಷಯವೊಂದನ್ನು ಸಂದರ್ಶನದ ವೇಳೆ ಬಹಿರಂಗಪಡಿಸಿದ್ದಾರೆ. ಅದೇನೆಂದ್ರೆ ಮಂಗಳ ಗ್ರಹದಲ್ಲಿರುವ ಭೂಗತ ಬಾಹ್ಯಾಕಾಶ ಕೇಂದ್ರದಲ್ಲಿ ಏಲಿಯನ್ ಗಳು ಮತ್ತು ಮನುಷ್ಯರು ಸೇರಿ ಸಂಶೋಧನೆ ನಡೆಸುತ್ತಿದ್ದರಂತೆ.
ಭೂಮಿಯ ಮೇಲೆ ಸಂಶೋಧನೆ ನಡೆಸಲು ಅನ್ಯಗ್ರಹ ಜೀವಿಗಳು ಅಮೆರಿಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆಯಂತೆ. ವಿಶ್ವದ ಅಸ್ತಿತ್ವಕ್ಕೆ ಕಾರಣವಾಗಿರುವ ಅಂಶಗಳನ್ನು ಅರ್ಥ ಮಾಡಿಕೊಳ್ಳಲು ಅವೂ ಪ್ರಯತ್ನಿಸುತ್ತಿವೆ.
ಈ ನಿಟ್ಟಿನಲ್ಲಿ ನಮ್ಮ ಸಹಾಯಬೇಕು ಎಂದು ಅಪೇಕ್ಷಿಸುತ್ತಿವೆ ಎಂದಿದ್ದಾರೆ!
ಆದ್ರೆ ಹೇಮ್ ಅವರ ಈ ಹೇಳಿಕೆಗಳಿಗೆ ಹಲವರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ರೀಲು ಬಿಡ್ರಿ.. ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.
ಮಾಧ್ಯಮದವರಿಗೆ ಶಿಕ್ಷೆಯಾಕಿಲ್ಲ : ರಮೇಶ್ ಕುಮಾರ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel