ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಬಾರುಕೋಲು ಚಳವಳಿ ನಡೆಸಿದ್ದು, ಈ ಚಳವಳಿಯಲ್ಲಿ ಮೇನ್ ಅಟ್ರಾಕ್ಷನ್ ಆಗಿದ್ದು 3 ವರ್ಷದ ಪುಟ್ಟ ಬಾಲಕ.

ರಾಯಚೂರಿನಿಂದ ತಂದೆಯೊಂದಿಗೆ ಬಂದಿದ್ದ ಹಸಿರು ಶಾಲು ಹಾಗೂ ಬಾರುಕೋಲು ಹಿಡಿದ ಬಾಲಕ ಪೋರ ಬಸಯ್ಯ ಎಲ್ಲರ ಗಮನ ಸೆಳೆದಿದ್ದ. ಬಸಯ್ಯ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಬಯ್ಯಪುರ ಗ್ರಾಮದ ತಾತನೊಂದಿಗೆ ಬೆಂಗಳೂರಿಗೂ ಬಂದಿದ್ದ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ರೈತರು, ಮೆಜೆಸ್ಟಿಕ್‍ನ ರೈಲ್ವೆ ನಿಲ್ದಾಣದ ಮುಂದೆ ಸೇರಿದ್ದರು. ಈ ವೇಳೆ ರೈತರು ಬಾರುಕೋಲು ಹೊಡೆಯುತ್ತಾ ಚಳವಳಿ ಆರಂಭಿಸಲು ಸಿದ್ಧತೆ ನಡೆಸಿದ್ದಾಗ ಕ್ಯಾಮೆರಾ ಕಣ್ಣಿಗೆ ಬಸಯ್ಯ ಕಾಣಸಿಕೊಂಡ. ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದ ಬಸಯ್ಯ ಬಾರುಕೋಲು ಅಲ್ಲಾಡಿಸುತ್ತಾ ಗಮನ ಸೆಳೆದಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








