ADVERTISEMENT
Saturday, March 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಇಲ್ಲಿದೆ ಹೊಸ ಸಂಸತ್ ಭವನದ ಇಂಚಿಂಚು ಮಾಹಿತಿ..

Mahesh M Dhandu by Mahesh M Dhandu
December 10, 2020
in National, Newsbeat, ದೇಶ - ವಿದೇಶ
new Parliament building
Share on FacebookShare on TwitterShare on WhatsappShare on Telegram

ಇಲ್ಲಿದೆ ಹೊಸ ಸಂಸತ್ ಭವನದ ಇಂಚಿಂಚು ಮಾಹಿತಿ..

ಪ್ರಧಾನಿ ನರೇಂದ್ರ ಮೋದಿ ದೆಹಲಿಯ ರಾಜಪಥದಲ್ಲಿ ಹೊಸ ಸಂಸತ್ ಭವನದ ಶಂಕು ಸ್ಥಾಪನೆ ಮಾಡಿದ್ದಾರೆ. ಈ ಸಮಾರಂಭದಲ್ಲಿ ಅನೇಕ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ವಿವಿಧ ದೇಶಗಳು ರಾಯಭಾರಿಗಳು ಭಾಗವಹಿಸಿದ್ದಾರೆ. ಸುಮಾರು 971 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಸಂಸತ್ ಭವನದ ಗುತ್ತಿಗೆ ಟಾಟಾ ಪಾಲಾಗಿದೆ.

Related posts

ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?

ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?

March 14, 2026
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನೋಟಿಸ್: ವಿರೋಧ ಪಕ್ಷಗಳ ಕ್ರಮ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನೋಟಿಸ್: ವಿರೋಧ ಪಕ್ಷಗಳ ಕ್ರಮ

March 14, 2026

new Parliament building

ಇನ್ನು ಈ ಸಂಸತ್ ಭವನದ ವಿಶೇಷತೆಗಳೇನು ಅಂತಾ ನೋಡೊದಾದ್ರೆ..

ಹೊಸ ಸಂಸತ್ ಭವನದಲ್ಲಿ ಲೋಕಸಭೆಯ ಚೇಂಬರ್‍ನಲ್ಲಿ ಈ ಗಿರುವ 543 ಆಸನಗಳ ಬದಲು 888 ಆಸನಗಳು ಹಾಗೂ ರಾಜ್ಯಸಭೆ ಚೇಂಬರ್‍ನಲ್ಲಿ ಈಗಿರುವ 245 ಆಸನಗಳ ಬದಲು 384 ಆಸನಗಳಿರಲಿವೆ.

ಜಂಟಿ ಸಮಾವೇಶ ನಡೆಸಲು ಹೆಚ್ಚು ಆಸನಗಳ ಸಭಾಂಗಣ ನಿರ್ಮಾಣವಾಗಲಿದೆ. ಇಡೀ ಕಟ್ಟಡ ಭೂಕಂಪ ನಿರೋಧಕ ಶಕ್ತಿ ಹೊಂದಿರಲಿದೆ.

ಫರ್ನಿಚರ್‍ಗಳಲ್ಲಿ ಸ್ಮಾರ್ಟ್ ಡಿಸ್ಪ್ಲೇ, ಮತದಾನವನ್ನು ಸುಲಭಗೊಳಿಸಲು ಬಯೋಮೆಟ್ರಿಕ್ಸ್, ಡಿಜಿಟಲ್ ಅನುವಾದ ವ್ಯವಸ್ಥೆ ಮತ್ತಿತರ ಸೌಲಭ್ಯಗಳನ್ನು ಅಳವಡಿಸಲಾಗುತ್ತದೆ.

ಅಂಡರ್‍ಪಾಸ್ ಮೂಲಕ ಸಂಸತ್ ಭವನಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಹೊಸ ಸಂಸತ್ ಭವನದ ಪಕ್ಕ ಶ್ರಮ ಶಕ್ತಿ ಭವನದ ಇರಲಿದ್ದು, ಇಲ್ಲಿ ಎಲ್ಲಾ ಸಂಸದರಿಗೆ ಕೊಠಡಿಗಳಿವೆ.

ಅತ್ಯಂತ ಆಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಹೊಸ ಕಟ್ಟಡದಲ್ಲಿ ಅಳವಡಿಸಲಾಗುತ್ತದೆ.

ಈ ಕಟ್ಟಡ 64,500 ಚ.ಮೀಟರ್ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. 2022ರ ವೇಳೆಗೆ ಹೊಸ ಸಂಸತ್ ಕಟ್ಟಡ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.

ಇನ್ನು ಹೊಸ ಸಂಸತ್ ಭವನದಲ್ಲಿ 120 ಕಚೇರಿಗಳು ಇರಲಿವೆ.

ಸಮಿತಿಗಳ ಕೊಠಡಿಗಳು, ಸಂಸದೀಯ ವ್ಯವಹಾರಗಳ ಸಚಿವಾಲಯದ ಪ್ರಮುಖ ಕಚೇರಿಗಳು, ಲೋಕಸಭಾ ಸಚಿವಾಲಯ, ರಾಜ್ಯಸಭಾ ಸಚಿವಾಲಯ, ಪ್ರಧಾನ ಮಂತ್ರಿಗಳ ಕಚೇರಿಗಳು, ಕೆಲವು ಸಂಸದರು ಮತ್ತು ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿಯ ಕಚೇರಿಗಳನ್ನು ಒಳಗೊಂಡಂತೆ ಒಟ್ಟು 120 ಕಚೇರಿಗಳು ಹೊಸ ಸಂಸತ್ ಕಟ್ಟಡ ಹೊಂದಿರಲಿದೆ.

ಕಟ್ಟಡಕ್ಕೆ ಆರು ಪ್ರವೇಶದ್ವಾರಗಳು ಇರಲಿವೆ.
ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಬರಲು ಒಂದು ದ್ವಾರ, ಲೋಕಸಭೆಯ ಸ್ಪೀಕರ್, ರಾಜ್ಯಸಭೆಯ ಅಧ್ಯಕ್ಷರು ಮತ್ತು ಸಂಸದರು ಬರಲು ಒಂದು ದ್ವಾರ, ಸಾಮಾನ್ಯ ದ್ವಾರ, ಸಂಸದರಿಗಾಗಿ ಮತ್ತೊಂದು ಪ್ರವೇಶ ದ್ವಾರ ಹಾಗೂ ಎರಡು ಸಾರ್ವಜನಿಕ ಪ್ರವೇಶ ದ್ವಾರಗಳು ಹೊಸ ಕಟ್ಟಡದಲ್ಲಿ ಇರಲಿವೆ.

ಹೊಸ ಸಂಸತ್ ಸಂಕೀರ್ಣ ನಾಲ್ಕು ಮಹಡಿಗಳನ್ನು ಹೊಂದಿರಲಿದ್ದು, ಕೆಳ ಮಹಡಿ, ನೆಲ ಮಹಡಿ, ಮೊದಲ ಮತ್ತು ಎರಡನೇ ಮಹಡಿಗಳು ಇರಲಿವೆ.

ಲೋಕಸಭೆ, ರಾಜ್ಯಸಭೆಯಲ್ಲಿ ಆಗುವ ಬದಲಾವಣೆಗಳೇನು
ಲೋಕಸಭೆ ಮತ್ತು ರಾಜ್ಯಸಭೆ ಎಷ್ಟು ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ ಅನ್ನೋದರ ಡಿಟೈಲ್ಸ್ ಹೀಗಿದೆ..

ಎರಡು ಆಸನಗಳ ಬೆಂಚ್‍ಗಳಲ್ಲಿ ಸಂಸದರನ್ನು ಕೂರಿಸಲಾಗುವುದು. ಜಂಟಿ ಅಧಿವೇಶನದ ಸಂದರ್ಭದಲ್ಲಿ ಇಲ್ಲಿ ಮೂವರು ಕುಳಿತುಕೊಳ್ಳಲು ಅವಕಾಶ ಇದೆ. * ಆಸನಗಳು 60 ಸೆಂ.ಮೀ. ಅಗಲ ಮತ್ತು 40 ಸೆಂ.ಮೀ. ಎತ್ತರ ಇರಲಿವೆ. ಪ್ರಸ್ತುತ ಇರುವ ಆಸನಗಳಿಗಿಂತ ದೊಡ್ಡದಾಗಿರಲಿವೆ. * 3,015 ಚ.ಮೀಟರ್ ವಿಸ್ತೀರ್ಣದಲ್ಲಿ ಲೋಕಸಭೆ ಇರಲಿದ್ದು, 1,145 ಚ.ಮೀಟರ್ ವಿಸ್ತೀರ್ಣದಲ್ಲಿ 543 ಆಸನಗಳ ಬದಲಿಗೆ 888 ಆಸನಗಳು ಇರಲಿವೆ. * ಜಂಟಿ ಅಧಿವೇಶನ ನಡೆಯುವ ವೇಳೆ ಹೊಸ ಲೋಕಸಭೆಯಲ್ಲಿ 1,224 ಸದಸ್ಯರಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಬಹುದು. * 3,220 ಚ.ಮೀಟರ್ ವಿಸ್ತೀರ್ಣದಲ್ಲಿ ರಾಜ್ಯಸಭೆ ಇರಲಿದ್ದು, 1,232 ಚ.ಮೀಟರ್ ವಿಸ್ತೀರ್ಣದಲ್ಲಿ 245 ಸ್ಥಾನಗಳ ಬದಲಾಗಿ 384 ಆಸನಗಳನ್ನು ಹೊಂದಿರಲಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: foundation stonenew Parliament buildingpm narendra modi
ShareTweetSendShare
Join us on:

Related Posts

ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?

ಕಾಂಗ್ರೆಸ್‌ನಲ್ಲಿ ಬಜೆಟ್ ಅಸಮಾಧಾನ ಸ್ಫೋಟ.. ಪಕ್ಷಕ್ಕೆ ಡ್ಯಾಮೇಜ್?

by Shwetha
March 14, 2026
0

ಕರ್ನಾಟಕ ರಾಜ್ಯ ಬಜೆಟ್ ಕುರಿತು ಸ್ವಪಕ್ಷ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿರುವುದು ಆಡಳಿತ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ರಾಮನಗರ MLA ಇಕ್ಸಾಲ್ ಹುಸೇನ್ ಅವರು ತಮ್ಮ ಕ್ಷೇತ್ರಕ್ಕೆ ನಿರೀಕ್ಷಿಸಿದ್ದಷ್ಟು...

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನೋಟಿಸ್: ವಿರೋಧ ಪಕ್ಷಗಳ ಕ್ರಮ

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗ ನೋಟಿಸ್: ವಿರೋಧ ಪಕ್ಷಗಳ ಕ್ರಮ

by Shwetha
March 14, 2026
0

ವಿರೋಧ ಪಕ್ಷಗಳು ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾ‌ರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಕೋರಿ ಸಂಸತ್ತಿನಲ್ಲಿ ಮಹಾಭಿಯೋಗ ನೋಟಿಸ್ ಸಲ್ಲಿಸಿವೆ . ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿಸಿರುವ...

ನನ್ನನ್ನು ಬೆಳೆಸಿದಂತೆ ಯತೀಂದ್ರನನ್ನೂ ಬೆಳೆಸಿ ಪುತ್ರನ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಸಿಎಂ  ಸಿದ್ದರಾಮಯ್ಯ

ನನ್ನನ್ನು ಬೆಳೆಸಿದಂತೆ ಯತೀಂದ್ರನನ್ನೂ ಬೆಳೆಸಿ ಪುತ್ರನ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದ ಸಿಎಂ ಸಿದ್ದರಾಮಯ್ಯ

by Shwetha
March 14, 2026
0

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತಮ್ಮ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯವನ್ನು ಮತ್ತಷ್ಟು ಭದ್ರಪಡಿಸಲು...

ಕುಂಭಮೇಳದ ಸುಂದರಿ ಮೊನಾಲಿಸಾಗೆ ಕೇರಳದಲ್ಲಿ ಮುಸ್ಲಿಂ ಯುವಕನ ಜೊತೆ ವಿವಾಹ : ಇದು ಲವ್ ಜಿಹಾದ್ ಎಂದ ತಂದೆ, ಮಗಳ ರಕ್ಷಣೆಗೆ ಸಿಎಂಗೆ ಕಣ್ಣೀರಿನ ಮೊರೆ

ಕುಂಭಮೇಳದ ಸುಂದರಿ ಮೊನಾಲಿಸಾಗೆ ಕೇರಳದಲ್ಲಿ ಮುಸ್ಲಿಂ ಯುವಕನ ಜೊತೆ ವಿವಾಹ : ಇದು ಲವ್ ಜಿಹಾದ್ ಎಂದ ತಂದೆ, ಮಗಳ ರಕ್ಷಣೆಗೆ ಸಿಎಂಗೆ ಕಣ್ಣೀರಿನ ಮೊರೆ

by Shwetha
March 14, 2026
0

ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಮಣಿಮಾಲೆ ಮಾರುತ್ತಾ ತನ್ನ ಆಕರ್ಷಕ ಕಣ್ಣುಗಳಿಂದಲೇ ದೇಶಾದ್ಯಂತ ವೈರಲ್ ಆಗಿದ್ದ ಮಧ್ಯಪ್ರದೇಶದ ಯುವತಿ ಮೊನಾಲಿಸಾ ಭೋಂಸ್ಲೆ ಅವರ ವಿವಾಹ ಇದೀಗ ಭಾರಿ ವಿವಾದದ ಸ್ವರೂಪ...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (14-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 14, 2026
0

ದಿನ ಭವಿಷ್ಯ: 14-03-2026 ಮೇಷ ರಾಶಿ ಇಂದು ನಿಮಗೆ ಅತ್ಯಂತ ಶುಭದಾಯಕವಾದ ದಿನ. ಉದ್ಯೋಗದಲ್ಲಿ ನೀವು ಅಂದುಕೊಂಡ ಗುರಿಗಳನ್ನು ಸುಲಭವಾಗಿ ತಲುಪುವಿರಿ ಮತ್ತು ನಿಮ್ಮ ಕಠಿಣ ಪರಿಶ್ರಮಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram