ಸಿಎಂ ಸಾಹೇಬ್ರೆ ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಿ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಹೇಬ್ರೇ ನೀವು ಕೊಟ್ಟ ಮಾತಿನಂತೆ ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ. 2017 ಮೇ 2ರಂದು ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಹಡಪಡ ಸಮುದಾಯ ಆಗ್ರಹಿಸಿದೆ.
ಹಡಪದ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ.
ಈ ಸಮಾಜ 12 ನೇ ಶತಮಾನದ ಪೂರ್ವದಿಂದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ತಮ್ಮ ಮೂಲ ವೃತ್ತಿಯಾದ ಕ್ಷೌರಿಕ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದೆ.
ರಾಜ್ಯದಲ್ಲಿ 18 ಲಕ್ಷ ಜನ ಹಡಪದ ಸಮಾಜದವರಿದ್ದು, ಯಾವುದೇ ರೀತಿಯಾಗಿ ಅಭಿವೃದ್ಧಿಯಾಗಿಲ್ಲ.

ವಿಶ್ವ ಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾದ ಶಿವಶರಣ ಶ್ರೀ ಹಡಪದ ಅಪ್ಪಣ್ಣನವರ ವಂಶಸ್ಥರು ಮತ್ತು ಕರ್ನಾಟಕದ ಮೂಲ ನಿವಾಸಿಗಳಾದ ಹಡಪದ ಸಮಾಜದವರು ಈಗ ಶೋಚನೀಯ ಸ್ಥಿತಿಯಲ್ಲಿದ್ದಾರೆ.
ಹೀಗಾಗಿ ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಹಡಪದ ಸಮಾಜವನ್ನು ಪ್ರ ವರ್ಗ 1 ಕ್ಕೆ ಸೇರಿಸಬೇಕು. ಹಡಪದ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂದು ಈರಣ್ಣ ಹಡಪದ ಸಣ್ಣೂರು ಒತ್ತಾಯಿಸಿದ್ದಾರೆ.
ಸಗಣಿ ಎತ್ತಿದ್ದರಿಂದ ಏನೂ ಆಗೋದಿಲ್ಲ, ಆರಾಧನೆ ಮಾಡಬೇಕು
2017ರಲ್ಲಿ ಕಲಬುರಗಿಯಲ್ಲಿ ನಡೆಸದ ಹಡಪದ ಸಮಾಜದ ಕಾರ್ಯಕ್ರಮದಲ್ಲಿ ಈಗನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ 24 ಗಂಟೇಲಿ ಹಡಪದ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ.
ಹಡಪದ ಸಮಾಜವನ್ನು ಎಸ್ ಟಿಗೆ ಸೇರ್ಪಡೆ. ಈರಣ್ಣ ಸಿ ಹಡಪದ ಸಣ್ಣೂರ ಅವರನ್ನು ನಿಗಮ ಮಂಡಳಿಗೆ ನಾಮನೀರ್ಧೇಶನ ಮಾಡುವೆ ಎಂದು ವಾಗ್ದಾನ ಮಾಡಿದ್ದರು.
ಆದ್ರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಹೀಗಾಗಿ ಕೂಡಲೇ ಸಿಎಂ ಬಿಎಸ್ ವೈ ಹಡಪದ ಪ್ರತ್ಯೇಕ ಅಭಿವೃದ್ಧಿ ಸ್ಥಾಪಿಸಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









