ನೆಟ್ಟಿಗನ ಪ್ರಶ್ನೆಗೆ ಚಪ್ಪಲಿ ಬ್ರ್ಯಾಂಡ್ ಕೇಳ್ಬೇಡಿ ಅಂದಿದ್ದು ಯಾಕೆ ಸ್ಮೃತಿ ಇರಾನಿ..!
ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ.ಇನ್ನೂ ಕೆಲವೊಮ್ಮೆ ನೆಟ್ಟಿಗರ ಪ್ರಶ್ನೆಗಳಿಗು ಉತ್ತರಿಸುತ್ತಾರೆ. ಇದೀಗ ಸ್ಮೃತಿ ಇರಾನಿ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನ ಹಂಚಿಕೊಂಡಿದ್ದರು. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಸ್ಮೃತಿ ಅವರ ಫೋಟೋಗೆ ನಾನಾ ಕಮೆಂಟ್ ಗಳು ಬಂದಿವೆ.
ಗಾರ್ಡನ್ ಏರಿಯಾದಲ್ಲಿ ಲ್ಯಾಪ್ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದ ಕೇಂದ್ರ ಸಚಿವೆ ‘ಪ್ಯಾನ್ಡಮಿಕ್ ಮಾರ್ನಿಂಗ್’ ಎಂಬ ಕ್ಯಾಪ್ಷನ್ ಕೊಟ್ಟಿದ್ದರು. ಬರೆದುಕೊಂಡಿದ್ದರು. ನೆಟ್ಟಿಗರು ತರಹೇವಾರಿ ಕಮೆಂಟ್ ಗಳನ್ನ ಮಾಡಿದ್ದಾರೆ.
ಆದ್ರೆ ನೆಟ್ಟಿಗನೊಬ್ಬ ಮಾಡಿದ್ದ ಕಮೆಂಟ್ ಕೇಂದ್ರ ಸಚಿವೆಯ ಗಮನ ಸೆಳೆದಿದೆ. ಅಂದ್ಹಾಗೆ ಈ ಕಾಮೆಂಟ್ ಇದ್ದದ್ದು ಸ್ಮೃತಿ ಅವರ ಚಪ್ಪಲಿ ಕುರಿತಾಗಿ.
KGF ತಂಡ: ಪ್ರಶಾಂತ್ ನೀಲ್ ಡೈರೆಕ್ಷನ್ , ‘ಸಲಾರ್’ ನಾಯಕ ಪ್ರಭಾಸ್ , ನಾಯಕಿ ಕೂಡ ಫಿಕ್ಸ್..!
ಹೌದು.. ಸ್ಮೃತಿ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಸ್ಮೃತಿ ಅವರು ತೊಟ್ಟಿದ ಚಪ್ಪಳಿ ಬಗ್ಗೆ ಕಮೆಂಟ್ ಮಾಡಿರುವ ನೆಟಿಜನ್ ‘ಇದು ಹವಾಯಿ ಚಪ್ಪಲಿ ಅಲ್ವಾ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೇ ನೀಡಿರುವ ಸ್ಮೃತಿ ಅವರು ‘ಅರೇ ಬ್ರದರ್ ಇದು ಹವಾಯಿ ಚಪ್ಪಲಿ, 200 ರೂಪಾಯಿ ಬೆಲೆಯದ್ದು’. ಈಗ ನೀವು ಯಾವ ಬ್ರ್ಯಾಂಡ್ ಎಂದು ಮಾತ್ರ ಕೇಳಬೇಡಿ.. ಲೋಕಲ್ ಬ್ರ್ಯಾಂಡ್ ಇದು ಎಂದು ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆ ನಿಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel