ADVERTISEMENT
Friday, May 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಸ್ ಬಂದ್ | ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಶುರು: ಬಸ್‍ಗಳಿಲ್ಲದೆ ಪ್ರಯಾಣಿಕರ ಪರದಾಟ..!

Kariyappa N by Kariyappa N
December 11, 2020
in Newsbeat, Politics, Samagra karnataka, ರಾಜ್ಯ
bus bund
Share on FacebookShare on TwitterShare on WhatsappShare on Telegram

                          ====ಮಧ್ಯಾಹ್ನ 12ಗಂಟೆಗೆ ಸರ್ಕಾರಕ್ಕೆ ಡೆಡ್‍ಲೈನ್===
                          ====ಮುಷ್ಕರ ಕೈಬಿಡಲು ಸಿಎಂ ಬಿಎಸ್‍ವೈ ಮನವಿ===
ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ರಾಜ್ಯದ ಲಕ್ಷಾಂತರ ಸಾರಿಗೆ ನೌಕರರು, ಇಂದಿನಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.


ಬೆಂಗಳೂರು ನಗರದ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ನಿಗಮಗಳ ನೌಕರರು ಬಸ್‍ಗಳನ್ನು ರಸ್ತೆಗಿಳಿಸದೆ ಪ್ರತಿಭಟನೆ ಆರಂಭಿಸಿದ್ದಾರೆ.
ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‍ನಲ್ಲಿರುವ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಶಾಂತಿನಗರ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ ನಗರದ ಬಹುತೇಕ ಬಸ್ ನಿಲ್ದಾಣಗಳಲ್ಲಿ ಚಾಲಕರು ಹಾಗೂ ನಿರ್ವಾಹಕರು ಡಿಪೋಗಳಿಂದ ಬಸ್‍ಗಳನ್ನು ಹೊರಗೆ ತೆಗೆದಿಲ್ಲ. ಹೀಗಾಗಿ ಎಲ್ಲಾ ಬಸ್ ನಿಲ್ದಾಣಗಳು ಖಾಲಿ ಖಾಲಿ ಹೊಡೆಯುತ್ತಿವೆ.

Related posts

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

May 8, 2026
ಸಾಂವಿಧಾನಿಕ ಜವಾಬ್ದಾರಿ ಮರೆಯದಿರಿ: ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದಿದ್ದರೆ ಜನಾಭಿಪ್ರಾಯಕ್ಕೆ ಅವಮಾನ – ನಟ ಕಮಲ್ ಹಾಸನ್ ಆಕ್ರೋಶ

ಸಾಂವಿಧಾನಿಕ ಜವಾಬ್ದಾರಿ ಮರೆಯದಿರಿ: ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದಿದ್ದರೆ ಜನಾಭಿಪ್ರಾಯಕ್ಕೆ ಅವಮಾನ – ನಟ ಕಮಲ್ ಹಾಸನ್ ಆಕ್ರೋಶ

May 8, 2026


ರಾಜ್ಯದ ಪ್ರಮುಖ ನಗರಗಳಾದ ಮೈಸೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲೂ ಸಾರಿಗೆ ನೌಕರರು ಬಸ್‍ಗಳನ್ನು ರಸ್ತೆಗಳಿಸದೆ ಮುಷ್ಕರ ನಡೆಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಿರುವ ನೂರಾರು ಬಿಎಂಟಿಸಿ ಹಾಗೂ ಕೆಎಸ್‍ಆರ್‍ಸಿ ಸಿಬ್ಬಂದಿ ಕೂಡ ಧರಣಿ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಹೀಗಾಗಿ ಬಸ್‍ಗಳು ಇಲ್ಲದೆ ಎಲ್ಲಾ ನಿಲ್ದಾಣಗಳು ಬಿಕೋ ಎನ್ನುತ್ತಿವೆ.

ಬಸ್‍ಗಳಿಲ್ಲದೆ ಪ್ರಯಾಣಿಕರ ಪರದಾಟ
ನಿನ್ನೆ ತಡರಾತ್ರಿ ಸಾರಿಗೆ ನೌಕರರು ಮುಷ್ಕರ ಆರಂಭಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಬಸ್‍ಗಳ ಸಂಚಾರದ ಬಗ್ಗೆ ಮಾಹಿತಿ ಇಲ್ಲದೆ ನಿಲ್ದಾಣಗಳಿಗೆ ಬಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.
ದೂರದ ಊರುಗಳಿಗೆ, ಕಚೇರಿ, ಗಾರ್ಮೆಂಟ್ಸ್, ತುರ್ತು ಕೆಲಸಗಳಿಗೆಂದು ಬಸ್ ನಿಲ್ದಾಣಗಳಿಗೆ ಬಂದ ಪ್ರಯಾಣಿಕರು ಬಸ್‍ಗಳಿಲ್ಲದೆ ದಿಕ್ಕು ತೋಚದಂತಾಗಿದ್ದು, ಪರದಾಟ ನಡೆಸುತ್ತಿದ್ದಾರೆ.
ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿ ಎಂಡಿಗಳು ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರೂ ಯಾವುದೇ ಪ್ರಯತ್ನ ಆಗಿಲ್ಲ. ಒಂದೇ ಒಂದು ಬಸ್ ಕೂಡ ರಸ್ತೆಗೆ ಇಳಿದಿಲ್ಲ. ಹೀಗಾಗಿ ಪ್ರಯಾಣಿಕರು ದಿಕ್ಕು ತೋಚದಂತಾಗಿದ್ದಾರೆ.
ಬಸ್ ಸಂಚಾರ ಆರಂಭಿಸದ ಹಿನ್ನೆಲೆಯಲ್ಲಿ ನೆಲಮಂಗಲದ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ ಘಟನೆಯೂ ನಡೆದಿದೆ.

12ಗಂಟೆಗೆ ಸರ್ಕಾರಕ್ಕೆ ಡೆಡ್‍ಲೈನ್..!
ಇಂದಿನಿಂದ ಮುಷ್ಕರ ಆರಂಭಿಸಿರುವ ಸಾರಿಗೆ ನೌಕರರು ಸರ್ಕಾರಕ್ಕೆ ಮಧ್ಯಾಹ್ನ 12ಗಂಟೆವರೆಗೆ ಡೆಡ್‍ಲೈನ್ ನೀಡಿದ್ದಾರೆ. 12ಗಂಟೆಯೊಳಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.
ಧರಣಿ ನಡೆಸುತ್ತಿರುವ ಎಲ್ಲಾ ನೌಕರರು ಫ್ರೀಡಂಪಾರ್ಕ್‍ಗೆ ತೆರಳುತ್ತೇವೆ. ಅಲ್ಲೇ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮುಷ್ಕರ ಕೈಬಿಡುವಂತೆ ಸಿಎಂ ಬಿಎಸ್‍ವೈ ಮನವಿ
ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರ ವಾಪಸ್ ಪಡೆದು ಕರ್ತವ್ಯಕ್ಕೆ ಹಾಜರಾಗಬೇಕು. ಕೋರೊನಾ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಸಾರಿಗೆ ನಿಗಮಗಳೂ ಕೂಡ ಸಂಕಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದು ಕಷ್ಟ. ಹೀಗಾಗಿ ಮುಷ್ಕರ ನಡೆಸುವುದು ಸರಿಯಾದ ಕ್ರಮ ಅಲ್ಲ. ಕೂಡಲೇ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: B S YADIYURAPPABMTCbus bundcommuters feces strikekartnakatakKSRTCtransport employes strike
ShareTweetSendShare
Join us on:

Related Posts

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

ಜನಾದೇಶಕ್ಕೆ ಬೆಲೆ ನೀಡದ ದೀದಿ ಅಹಂಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿದ ಪಶ್ಚಿಮ ಬಂಗಾಳ ನಾಯಕಿ ಈಗ ಮಾಜಿ ಸಿಎಂ

by Shwetha
May 8, 2026
0

ಭಾರತದ ರಾಜಕೀಯ ಭೂಪಟದಲ್ಲಿ ಪಶ್ಚಿಮ ಬಂಗಾಳದ ರಾಜಕಾರಣ ಯಾವಾಗಲೂ ಒಂದು ಕುತೂಹಲದ ಕೇಂದ್ರಬಿಂದು. ಅಲ್ಲಿನ ಕೆಚ್ಚೆದೆಯ ನಾಯಕಿ ಎಂದು ಕರೆಸಿಕೊಳ್ಳುವ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ನಡೆಗಳು...

ಸಾಂವಿಧಾನಿಕ ಜವಾಬ್ದಾರಿ ಮರೆಯದಿರಿ: ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದಿದ್ದರೆ ಜನಾಭಿಪ್ರಾಯಕ್ಕೆ ಅವಮಾನ – ನಟ ಕಮಲ್ ಹಾಸನ್ ಆಕ್ರೋಶ

ಸಾಂವಿಧಾನಿಕ ಜವಾಬ್ದಾರಿ ಮರೆಯದಿರಿ: ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ಆಹ್ವಾನ ನೀಡದಿದ್ದರೆ ಜನಾಭಿಪ್ರಾಯಕ್ಕೆ ಅವಮಾನ – ನಟ ಕಮಲ್ ಹಾಸನ್ ಆಕ್ರೋಶ

by Shwetha
May 8, 2026
0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದರೂ, 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ...

ತಮಿಳುನಾಡಿನಲ್ಲಿ ಮ್ಯಾಜಿಕ್ ನಂಬರ್ ಸಿಗದೆ ವಿಜಯ್ ಪರದಾಟ: ಅಣ್ಣಾಮಲೈ ನೀಡಿದ್ದ ಮಾಸ್ಟರ್ ಪ್ಲಾನ್ ಕಡೆಗಣಿಸಿ ಪಶ್ಚಾತ್ತಾಪ ಪಡುತ್ತಿರುವ ಬಿಜೆಪಿ

ತಮಿಳುನಾಡಿನಲ್ಲಿ ಮ್ಯಾಜಿಕ್ ನಂಬರ್ ಸಿಗದೆ ವಿಜಯ್ ಪರದಾಟ: ಅಣ್ಣಾಮಲೈ ನೀಡಿದ್ದ ಮಾಸ್ಟರ್ ಪ್ಲಾನ್ ಕಡೆಗಣಿಸಿ ಪಶ್ಚಾತ್ತಾಪ ಪಡುತ್ತಿರುವ ಬಿಜೆಪಿ

by Shwetha
May 8, 2026
0

ತಮಿಳುನಾಡು ರಾಜಕಾರಣದಲ್ಲಿ ಈಗ ಅನಿರೀಕ್ಷಿತ ತಿರುವುಗಳು ಕಂಡುಬರುತ್ತಿದ್ದು, ಇಡೀ ದೇಶದ ಗಮನ ಈಗ ದ್ರಾವಿಡ ನಾಡಿನತ್ತ ನೆಟ್ಟಿದೆ. ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ...

ಚುನಾವಣಾ ರಾಜಕೀಯಕ್ಕೆ ಹಳ್ಳಿಹಕ್ಕಿ ಎಚ್ ವಿಶ್ವನಾಥ್ ವಿದಾಯ ಪೋಕ್ಸೋ ಆರೋಪಿ ಬಿಎಸ್ವೈಗೆ ಸನ್ಮಾನ ಮಾಡುವುದು ನಾಚಿಕೆಗೇಡು ಎಂದು ಗುಡುಗಿದ ಹಿರಿಯ ನಾಯಕ

ಚುನಾವಣಾ ರಾಜಕೀಯಕ್ಕೆ ಹಳ್ಳಿಹಕ್ಕಿ ಎಚ್ ವಿಶ್ವನಾಥ್ ವಿದಾಯ ಪೋಕ್ಸೋ ಆರೋಪಿ ಬಿಎಸ್ವೈಗೆ ಸನ್ಮಾನ ಮಾಡುವುದು ನಾಚಿಕೆಗೇಡು ಎಂದು ಗುಡುಗಿದ ಹಿರಿಯ ನಾಯಕ

by Shwetha
May 8, 2026
0

ಕರ್ನಾಟಕ ರಾಜಕೀಯದ ಅನುಭವಿ ಮುತ್ಸದ್ದಿ, ಹಳ್ಳಿಹಕ್ಕಿ ಎಂದೇ ಜನಪ್ರಿಯರಾಗಿರುವ ಎಚ್ ವಿಶ್ವನಾಥ್ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಹಲವು...

ಬಂಗಾಳದಲ್ಲಿ ಪಟ್ಟು ಬಿಡದ ಮಮತಾ ಬ್ಯಾನರ್ಜಿ : ಐವರು ಆಕಾಂಕ್ಷಿಗಳು, ಒಂದು ಸಿಎಂ ಗಾದಿ; ಬಂಗಾಳದ ಮುಂದಿನ ಸಾರಥಿ ಯಾರು? ಸುವೇಂದು ಅಥವಾ ದಿಲೀಪ್ ಘೋಷ್?

ಬಂಗಾಳದಲ್ಲಿ ಪಟ್ಟು ಬಿಡದ ಮಮತಾ ಬ್ಯಾನರ್ಜಿ : ಐವರು ಆಕಾಂಕ್ಷಿಗಳು, ಒಂದು ಸಿಎಂ ಗಾದಿ; ಬಂಗಾಳದ ಮುಂದಿನ ಸಾರಥಿ ಯಾರು? ಸುವೇಂದು ಅಥವಾ ದಿಲೀಪ್ ಘೋಷ್?

by Shwetha
May 8, 2026
0

ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಅಕ್ಷರಶಃ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಿದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram