ಭಾರತದ ಮೊದಲ ಸೌರಶಕ್ತಿ ಚಾಲಿತ ಚಿಕಣಿ ರೈಲು ಇಂದಿನಿಂದ ಕಾರ್ಯಾರಂಭ
ಕೇರಳ : ಭಾರತದ ಮೊದಲ ಸೌರಶಕ್ತಿ ಚಾಲಿತ ಚಿಕಣಿ ರೈಲು ತಿರುವನಂತಪುರಂನ ವೇಲಿ ಪ್ರವಾಸಿ ಗ್ರಾಮದಲ್ಲಿ ಇಂದಿನಿಂದ ಕಾರ್ಯಾರಂಭಿಸಲಿದೆ.
ದೇಶದಲ್ಲೇ ಸೌರಶಕ್ತಿ ಚಾಲಿತ ಮೊದಲ ಚಿಕಣಿ ರೈಲು ಇದಾಗಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳೆದ ತಿಂಗಳು ತಿರುವನಂತಪುರದ ವೆಲಿ ಪ್ರವಾಸಿ ಗ್ರಾಮದಲ್ಲಿ ಇದನ್ನು ಉದ್ಘಾಟಿಸಿದ್ದರು.
ಇನ್ನು ಈ ರೈಲಿನಲ್ಲಿ ಇದು ಪರಿಸರ ಸ್ನೇಹಿಯಾಗಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯ ಆನಂದಿಸಲು ನೆರವಾಗಲಿದೆ. ಜೊತೆಗೆ ಒಂದು ಉತ್ತಮ ಅನುಭವ ನೀಡುತ್ತದೆ. ಇಂದಿನಿಂದ ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಬಹುದಾಗಿದೆ.
ಅಂದಹಾಗೆ ಚಿಕಣಿ ರೈಲು ನಿಲ್ದಾಣಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಉತ್ಪತ್ತಿಯಾಗುವ ಹೆಚ್ಚುವರಿ ಶಕ್ತಿಯನ್ನು ಕೇರಳ ರಾಜ್ಯ ವಿದ್ಯುತ್ ಮಂಡಳಿಗೆ ಪೂರೈಸಲಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









