ADVERTISEMENT
Saturday, July 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ

Shwetha by Shwetha
December 13, 2020
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲ

ನನ್ನನ್ನು ಅತ್ಯಂತ ಪ್ರಭಾವಿಸಿದ್ದ ಪೂಜ್ಯ ಬನ್ನಂಜೆ ಗೋವಿಂದಾಚಾರ್ಯರು ನಿಧನರಾದ ಸುದ್ಧಿ ಓದಿ ದುಃಖವಾಗಿದೆ.

Related posts

argentina vs cabo verde

fifaworldcup:2026- ದೈತ್ಯರನ್ನು ಬೆಚ್ಚಿ ಬೀಳಿಸಿದ ಬ್ಲೂ ಬ್ಲೂ ಶಾರ್ಕ್ಸ್..! ಫಿಫಾ ವಿಶ್ವಕಪ್‍ನಲ್ಲಿ ಇತಿಹಾಸ ಬರೆದ ಕೇಪ್‍ವರ್ಡ್..!

July 4, 2026
Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

July 4, 2026

ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಅಖಂಡ ವಿದ್ವತ್ತು, ಕೃತಿ, ಕಾರ್ಯ ಮತ್ತು ಪ್ರವಚನಗಳಿಂದಾಗಿ ಲೋಕಮಾನ್ಯರಾಗಿದ್ದಾರೆ. ವೇದ, ಉಪನಿಷತ್ತು, ಪುರಾಣ ಇತಿಹಾಸ ತತ್ವಗಳಲ್ಲಿ ಅವರದ್ದು ಅಸಾಮಾನ್ಯ ಪಾಂಡಿತ್ಯ. ತಾವು ಅಪ್ರತಿಮ ಪಂಡಿತರಾಗಿದ್ದಾಗ್ಯೂ, ಸಾಮಾನ್ಯನನ್ನೂ ತಮ್ಮ ಆಕರ್ಷಣೀಯ ಕಥಾನಕಗಳು, ಹೃದಯವಂತಿಕೆ ಮತ್ತು ಸಜ್ಜನಿಕೆಗಳ ಮುಖೇನ ಭಾರತೀಯ ಸಂಸ್ಕೃತಿಗಳತ್ತ ಅವರು ಕೈ ಹಿಡಿದು ಕರೆದೊಯ್ಯುತ್ತಿದ್ದ ರೀತಿ ಅಪ್ಯಾಯಮಾನವಾದದ್ದು.
Bannanje govindacharya

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳು ಹಲವಾರು ಒಣ ಮಡಿವಂತಿಕೆ, ವಿದ್ವತ್ತಿನ ಸೋಗು ಇವುಗಳನ್ನೆಲ್ಲಾ ಮೀರಿ ವಿಶ್ವದೆಲ್ಲೆಡೆ ಸಕಲ ರೀತಿಯ ಜನರನ್ನೂ ಆಕರ್ಷಿಸಿರುವಂತದ್ದು. ಮಾಧ್ವ ತತ್ವ ಹಾಗೂ ಮಾಧ್ವ ವಿಚಾರಗಳಲ್ಲಿ ಅವರ ಅಧ್ಯಯನದ ಆಳ ಅಪಾರವಾದದ್ದು ಎಂದು ಜನ ಭಾವಿಸುವುದು ಹೌದಾದರೂ, ಕೇವಲ ದ್ವೈತ ವಿಚಾರಗಳಷ್ಟಕ್ಕೇ ಅವರ ಪಾಂಡಿತ್ಯ ಸೀಮಿತಗೊಂಡಿರದೆ, ಅದ್ವೈತ, ವಿಶಿಷ್ಟಾದ್ವೈತ, ಇನ್ನಿತರ ಭಾರತೀಯ ಹಾಗೂ ವಿಶ್ವ ಚಿಂತನೆಗಳು, ಜಾನಪದ ಇತ್ಯಾದಿಗಳ ವಿಚಾರದಲ್ಲಿ ಅವರಿಗಿರುವ ಸಮಪ್ರಕಾರದ ಗೌರವಪೂರ್ಣ ಒಲವು, ಚಿಂತನೆಯ ಆಳ, ಬೆಳಕು ಚೆಲ್ಲುವಂತಹ ಪ್ರಖರತೆಯ ಅಸಾಮಾನ್ಯ ಪರಿಣತಿ ಇವೆಲ್ಲಾ ಸರಿಸಾಟಿಯಿಲ್ಲಂತದ್ದು. ಕನ್ನಡ ಹಾಗೂ ಸಂಸ್ಕೃತ ಸಾರಸ್ವತ ಲೋಕಕ್ಕೆ ಅವರು ಅನೇಕ ಕೊಡುಗೆಗಳನ್ನಿತ್ತಿದ್ದಾರೆ. ದೇಶ, ವಿದೇಶಗಳಲ್ಲಿ ಸಂಚರಿಸಿ ಭಾರತೀಯ ಸಾಂಸ್ಕೃತಿಕ ರಾಯಭಾರಿಯಾಗಿ ನಮ್ಮ ದೇಶೀಯ ಪರಂಪರೆಗಳ ಶ್ರೇಷ್ಠತೆಯನ್ನು ಎಲ್ಲೆಡೆ ಪಸರಿಸುವಲ್ಲಿ ಆಚಾರ್ಯರು ಮನೋಜ್ಞವಾದ ಕೆಲಸ ಮಾಡಿದ್ದಾರೆ. ಉಡುಪಿಯ ಅಷ್ಟಮಠಗಳ ಅಚಾರ್ಯರಿಗೂ ಇವರಲ್ಲಿ ಅಪಾರ ಗೌರವ, ಆಚಾರ್ಯ ಭಾವವಿದೆ ಎಂಬ ಮಾತು ಇವರ ಶ್ರೇಷ್ಠತೆಯ ಪ್ರತೀಕವಾಗಿದೆ.

ಸಾವಿರದ ಒಂಭೈನೂರ ಮೂವತ್ತಾರನೇ ಇಸವಿಯ ಆಗಸ್ಟ್ 3ರಂದು ಬನ್ನಂಜೆಯಲ್ಲಿ ವಿದ್ವಾಂಸರಾದ ತರ್ಕಕೇಸರಿ ಶ್ರೀ ನಾರಾಯಣಾಚಾರ್ಯರ ಸುಪುತ್ರರಾಗಿ ಜನಿಸಿದ ಗೋವಿಂದಾಚಾರ್ಯರು ಬಾಲ್ಯದಲ್ಲಿ ವೈದಿಕ ಶಿಕ್ಷಣವನ್ನು ತೀರ್ಥರೂಪರಿಂದಲೇ ಪಡೆದರು. ಮುಂದುವರೆದ ವಿದ್ಯಾರ್ಜನೆಯನ್ನು ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥಸ್ವಾಮೀಜಿ, ಕಲಿಯೂರು ಮಠ ಮತ್ತು ಹರಿಪಾದೈರ್ಯಗ ಶ್ರೀ ಶ್ರೀ ವಿದ್ಯಾ ಸಮುದ್ರ ತೀರ್ಥರು, ಕಾಣಿಯೂರು ಮಠ ಇವರಿಂದ ಪಡೆದರು. ಬಾಲ್ಯದಲ್ಲಿಯೇ ಬಹಳ ಪ್ರತಿಭೆಗಳಿಂದ ಮಿಂಚಿದ ಇವರು ಅನೇಕ ಲೇಖನಗಳನ್ನು ಬರೆಯುತ್ತಿದ್ದರು.

ಬನ್ನಂಜೆ ಗೋವಿಂದಾಚಾರ್ಯರು ಅನೇಕ ಸಂಸ್ಕೃತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಜನಸಾಮಾನ್ಯರಿಗೆ ತಲುಪುವಂತೆ ಮಾಡಿದ್ದಾರೆ. ಹದಿಮೂರನೆಯ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷೀಕೇಶತೀರ್ಥರು ರಚಿಸಿದ್ದ ಮಧ್ವಾಚಾರ್ಯರ ವ್ಯಾಖ್ಯಾನಗಳನ್ನು ಸುಮಾರು 2000 ಪುಟಗಳಷ್ಟು ಸುದೀರ್ಘವಾದ ಗ್ರಂಥರೂಪವಾಗಿ ಅಚ್ಚುಕಟ್ಟಾಗಿ ಓದುಗರ ಮುಂದಿಟ್ಟಿದ್ದಾರೆ. ಮಧ್ವಾಚಾರ್ಯರ ಹಲವಾರು ಘನವೇತ್ತ ಕೃತಿಗಳೂ ಕೂಡಾ ಈ ಗ್ರಂಥದ ಭಾಗವಾಗಿವೆ. ಅವರ ‘ಆಚಾರ್ಯ ಮಧ್ವ: ಬದುಕು ಬರಹ’ ಕೃತಿಯನ್ನು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಪ್ರಕಟಿಸಿದೆ.

ಬಾಣಭಟ್ಟನ ಕಾದಂಬರಿ, ಕಾಳಿದಾಸನ ಶಾಕುಂತಲಾ, ಶೂದ್ರಕನ ’ಮೃಚ್ಛಕಟಿಕ’ ಇತ್ಯಾದಿ ಚಾರಿತ್ರಿಕ ಕೃತಿಗಳು ಇವರ ಅನುವಾದಿತ ಕೃತಿಗಳಲ್ಲಿ ಪ್ರಮುಖವಾದುವು. ಶ್ರೀ ಶ್ರೀ ತ್ರಿವಿಕ್ರಮಾಚಾರ್ಯದಾಸರ ’ಆನಂದಮಾಲಾ’, ತ್ರಿವಿಕ್ರಮ ಪಂಡಿತರ ’ವಾಯುಸ್ತುತಿ’, ’ವಿಷ್ಣುಸ್ತುತಿ’ ಇತ್ಯಾದಿ ಕೃತಿಗಳಿಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಆರು ಉಪನಿಷತ್ತುಗಳಿಗೆ ವ್ಯಾಖ್ಯಾನಗಳನ್ನು ಬರೆದಿದ್ದಾರೆ. ಮಧ್ವಾಚಾರ್ಯರ ಮಹಾಭಾರತದ ತಾತ್ಪರ್ಯ ವ್ಯಾಖ್ಯಾನ ಕೃತಿಯಾದ ’ಯಮಕ ಭಾರತ’ ಕೃತಿಗೆ ಟಿಪ್ಪಣಿಯನ್ನು ಬರೆದಿದ್ದಾರೆ. ಅಂತೆಯೇ ’ಭಾಗವತ ತಾತ್ಪರ್ಯ’ ಕೃತಿಗೂ ಟಿಪ್ಪಣಿ ಬರೆದಿದ್ದಾರೆ. ಅನೇಕ ಸೂಕ್ತ ಮಂತ್ರಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಪುರುಷಸೂಕ್ತ, ಶ್ರೀ ಮದ್ಭಗವದ್ಗೀತೆ, ಶ್ರೀ ಸೂಕ್ತ, ಶಿವಸೂಕ್ತ, ನರಸಿಂಹ ಸ್ತುತಿ, ತಂತ್ರಸಾರ ಸಂಗ್ರಹ ಇತ್ಯಾದಿಗಳನ್ನು ಕನ್ನಡೀಕರಿಸಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯರ ‘ಸಂಗ್ರಹ ಭಾಗವತ’ ಕೃತಿ ಭಾಗವತದ ಕಥೆಗಳನ್ನು ಜನಸಾಮಾನ್ಯರ ಸಮೀಪಕ್ಕೆ ಕೊಂಡೊಯ್ಯುವ ಆಪ್ತ ಕೃತಿ ಎನಿಸಿದೆ. ಬನ್ನಂಜೆಯವರು ಮಧ್ವಾಚಾರ್ಯರ ’ಮಾಧ್ವರಾಮಾಯಣ’, ರಾಜರಾಜೇಶ್ವರಿ ಯತಿಗಳ ಮಂಗಲಾಷ್ಟಕ ಇತ್ಯಾದಿ ಕೃತಿಗಳಿಗೆ ಕನ್ನಡದಲ್ಲಿ ಪುನರ್ಜನ್ಮ ನೀಡಿದ್ದಾರೆ. ‘ಉಡುಪಿ ಕೃಷ್ಣನ ಕಂಡಿರಾ’ದಂತಹ ಸುಂದರ ಕೀರ್ತನೆಗಳನ್ನೂ ಅವರು ರಚಿಸಿದ್ದಾರೆ. ಇವೆಲ್ಲಾ ಬನ್ನಂಜೆ ಗೋವಿಂದಾಚಾರ್ಯರ ನೂರಾರು ಕೃತಿಗಳಲ್ಲಿ ಕೆಲವು ಮಾತ್ರವಾಗಿವೆ.

Bannanje govindacharya

ಬನ್ನಂಜೆ ಗೋವಿಂದಾಚಾರ್ಯರು ನೂರಾರು ಬೃಹತ್ ಗ್ರಂಥಗಳನ್ನು ರಚಿಸಿರುವುದರ ಜೊತೆಗೆ ವಿವಿಧ ಪತ್ರಿಕೆಗಳು, ನಿಯತಕಾಲಿಕೆಗಳಿಗಾಗಿ ಸಹಸ್ರಾರು ಲೇಖನಗಳನ್ನು ಬರೆದಿದ್ದಾರೆ. ಉದಯವಾಣಿಯ ಪ್ರಾರಂಭದ ಬಹಳಷ್ಟು ವರ್ಷಗಳಲ್ಲಿ ಅಲ್ಲಿನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಾಚೀನ ಗ್ರಂಥಗಳನ್ನು ಉಳಿಸಿ ಪೋಷಿಸುವ ಕಾಯಕದಲ್ಲಿ ಅವರ ಮತ್ತು ಅವರ ಆಪ್ತ ಶಿಷ್ಯ ವೃಂದದ ಕಾಯಕ ವಿಶ್ವದ ಪ್ರತಿಷ್ಠಿತ ಸಂಸ್ಥೆಗಳ ಸಹಯೋಗದಲ್ಲಿ ಸಂದಿದೆ.

ಚಲನಚಿತ್ರ ಲೋಕಕ್ಕೂ ಆಚಾರ್ಯರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಶ್ರೀ ಜಿ.ವಿ. ಅಯ್ಯರ್ ಅವರ ಸಂಸ್ಕೃತ ಚಲನಚಿತ್ರ ’ಶ್ರೀ ಶಂಕರಾಚಾರ್ಯ’, ಕನ್ನಡದ ’ಶ್ರೀ ಮಧ್ವಾಚಾರ್ಯ’, ತಮಿಳಿನ ’ಶ್ರೀ ರಾಮಾನುಜಾಚಾರ್ಯ’ ಚಲನಚಿತ್ ಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕೊಡುಗೆಯನ್ನಿತ್ತಿದ್ದಾರೆ.

ವಿಶ್ವದೆಲ್ಲೆಡೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳು ಜನಮಾನಸವನ್ನು ನಿರಂತರವಾಗಿ ಸೆಳೆದಿದ್ದವು. ಈ ಪ್ರವಚನಗಳು ಹಲವಾರುಶ್ರವ್ಯ ಮಾಧ್ಯಮಗಳಲ್ಲಿ ಸಹಾ ಅಸಂಖ್ಯಾತ ಜನಸ್ತೋಮವನ್ನು ಪ್ರಭಾವಿಸುತ್ತಾ ಸಾಗಿವೆ.

ಆಚಾರ್ಯರನ್ನು ಅನೇಕ ಗೌರವ, ಬಿರುದುಬಾವಲಿಗಳು ಅರಸಿಕೊಂಡು ಬಂದಿದ್ದವು. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಶ್ರೇಷ್ಠ ಅನುವಾದಕ್ಕಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಣಿಪಾಲದ ಪ್ರತಿಷ್ಠಿತ ವಿದ್ಯಾ ಸಮೂಹದ ಫೆಲೋಷಿಪ್ ಮುಂತಾದ ಪ್ರತಿಷ್ಠಿತ ಗೌರವಗಳು ಅವರನ್ನರಸಿಬಂದಿದ್ದವು. ಅದಮಾರು ಪೀಠವು ಅವರನ್ನು ’ವಿದ್ಯಾವಚಸ್ಪತಿ’ ಬಿರುದಿನಿಂದ ಆಶೀರ್ವದಿಸಿತ್ತು. ಕರ್ನಾಟಕ ಸರಕಾರವು ವೈದಿಕ ಕ್ಷೇತ್ರಕ್ಕಾಗಿನ ಕೊಡುಗೆಗಳಿಗೆ ಇವರನ್ನು ಪುರಸ್ಕರಿಸಿತ್ತು. ಫಲಿಮಾರು ಮಠವು ’ಪ್ರತಿಭಾಂಬುದಿ’ ಎಂಬ ಬಿರುದಿನಿಂದ ಆಶೀರ್ವದಿಸಿತ್ತು. ಅಖಿಲ ಭಾರತ ಮಾಧ್ವಮಹಾ ಮಂಡಲವು ‘ಶಾಸ್ತ್ರ ಸವ್ಯಸಾಚಿ’ ಎಂದು ಪುರಸ್ಕರಿಸಿತ್ತು. ಪೇಜಾವಾರ ಮಠವು, ಶ್ರೀಕೃಷ್ಣಾನುಗ್ರಹ ಪ್ರಶಸ್ತಿಪೂರ್ವಕವಾಗಿ ಆಶೀರ್ವದಿಸಿತ್ತು. ಕಬೀರಾನಂದ ಆಶ್ರಮದ ವತಿಯಿಂದ ನೀಡುವ ‘ಆರೂಢಶ್ರೀ’ ಪ್ರಶಸ್ತಿ ಅವರಿಗೆ ಸಂದಿತ್ತು. ಸಾಹಿತ್ಯ ಸಾರ್ವಭೌಮ, ಸಂಶೋಧನ ವಿಚಕ್ಷಣ, ಪಂಡಿತ ಶಿರೋಮಣಿ, ಪಂಡಿತರನ್ನ, ವಿದ್ಯಾರತ್ನಾಕರ ಇತ್ಯಾದಿ ಇನ್ನೂ ಅನೇಕಾನೇಕ ಪ್ರಶಸ್ತಿಗಳು ಬಿರುದುಗಳು ಇವರನ್ನು ಆರಿಸಿಕೊಂಡು ಬಂದಿದ್ದವು. ಅನೇಕ ವ್ಯಕ್ತಿಗಳು ಶ್ರೀಯುತರನ್ನು ಗುರು ಸ್ಥಾನದಲ್ಲಿರಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿ ಕಾರ್ಯಮಾಡುತ್ತಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯರು 1979ರ ವರ್ಷದಲ್ಲಿ ಅಮೆರಿಕದ ಪ್ರಿನ್ಸ್ಟನ್ ನಗರದಲ್ಲಿ ಜರುಗಿದ ‘ವರ್ಲ್ಡ್ ಕಾನ್ವರೆನ್ಸ್ ಆನ್ ರಿಲಿಜನ್ ಅಂಡ್ ಪೀಸ್’ ವಿಶ್ವ ಧಾರ್ಮಿಕ ಮತ್ತು ಶಾಂತಿ ಸಮ್ಮೇಳನದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಪ್ರತಿನಿಧಿಸಿದ್ದರು. 1980ರಲ್ಲಿ ನಡೆದ ವಿಶ್ವ ಸಂಸ್ಕೃತ ಮೇಳದಲ್ಲಿಯೂ ಭಾಗವಹಿಸಿದ್ದರು. ದಕ್ಷಿಣ ಕನ್ನಡದಲ್ಲಿ ನಡೆದ ಸಂಸ್ಕೃತ ಪರಿಷತ್ತಿನ ಅಧ್ಯಕ್ಷತೆಯ ಗೌರವ ಅವರಿಗೆ ಸಂದಿತ್ತು. ಉಡುಪಿಯ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೆ ಸಂದಿತ್ತು. ವಿಶ್ವದಾದ್ಯಂತ ಅನೇಕ ಕವಿ ಸಮ್ಮೇಳನಗಳು, ಚರ್ಚೆಗಳು ಮತ್ತು ಉಪನ್ಯಾಸಗಳಲ್ಲಿ ಅವರು ನಿರಂತರವಾಗಿ ಅಹ್ವಾನಿಸಲ್ಪಡುತ್ತಿದ್ದರು. ಸಾಹಿತ್ಯಲೋಕದ ಶ್ರೇಷ್ಠ ಮಹಾನುಭಾವರ ಒಡನಾಟದಲ್ಲಿ ಸಹಾ ಬನ್ನಂಜೆ ಗೋವಿಂದಾಚಾರ್ಯರು ರಾರಾಜಿಸಿದ್ದರು.

Bannanje govindacharya

ಈ ಮಹಾನ್ ವಿದ್ವಾಂಸರ ಭಾಗವತ ಉಪನ್ಯಾಸಗಳನ್ನು ಹಲವಾರು ದಿನಗಳವರೆಗೆ ಕೇಳಿ ಅವರ ಪಾದಧೂಳಿಯನ್ನು ಸ್ವೀಕರಿಸುವ ಸೌಭಾಗ್ಯ ನನ್ನದೂ ಆಗಿದೆ.

ಈ ಮಹಾತ್ಮರ ನೇರಮಾರ್ಗದರ್ಶನ ಸೌಭಾಗ್ಯದಿಂದ ಇಂದು ಲೋಕವಂಚಿತವಾಯ್ತು. ಇಂಥ ಮಹಾತ್ಮರನ್ನು ನಾವು ಕಂಡಿದ್ದೆವು, ಅವರನ್ನು ನಮಸ್ಕರಿಸಿದ್ದೆವು,ಮಾತನಾಡಿದ್ದೆವು, ಅವರ ಮಾತು ಕೇಳಿ ಪುನೀತಭಾವ ಅನುಭವಿಸಿದ್ದವು ಎಂಬುದೇ ನಮ್ಮ ಸೌಭಾಗ್ಯ. ಓಹ್, ದೇವರೆ ಇಂಥ ಶ್ರೇಷ್ಠರನ್ನು ಶಾಶ್ವತವಾಗಿ ಲೋಕದಲ್ಲಿಟ್ಟಿದ್ದರೆ ಪರಮಾತ್ಮ ನಿನ್ನ ಗಂಟೇನು ಹೋಗುತ್ತಿತ್ತು. ನಿನ್ನ ಇಂಗಿತವನ್ನು ನಾವು ಅರಿಯುವದಾದರೂ ಹೇಗೆ. ತುಂಬಾ ದುಃಖವಾಗುತ್ತಿದೆ. ಈ ಮಹಾನ್ ವಿದ್ವಾಂಸ ಚೇತನ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಚೇತನಕ್ಕೆ ನನ್ನ ಭಕ್ತಿಪೂರ್ವಕ ನಮನ 🌷🙏🌷

(ನಮ್ಮ ‘ಕನ್ನಡ ಸಂಪದ’ದಲ್ಲಿ ಮೂಡಿಬರುತ್ತಿರುವ ಬರಹ ‘ಸಂಸ್ಕೃತಿ ಸಲ್ಲಾಪ’ ತಾಣವಾದ www.sallapa.comನಲ್ಲಿಯೂ ಲಭ್ಯ. ನಮಸ್ಕಾರ)

Tags: Bannanje GovindacharyaSanksrit scholar
ShareTweetSendShare
Join us on:

Related Posts

argentina vs cabo verde

fifaworldcup:2026- ದೈತ್ಯರನ್ನು ಬೆಚ್ಚಿ ಬೀಳಿಸಿದ ಬ್ಲೂ ಬ್ಲೂ ಶಾರ್ಕ್ಸ್..! ಫಿಫಾ ವಿಶ್ವಕಪ್‍ನಲ್ಲಿ ಇತಿಹಾಸ ಬರೆದ ಕೇಪ್‍ವರ್ಡ್..!

by admin
July 4, 2026
0

ಕೆಲವೊಂದು ಸೋಲುಗಳು ಗೆಲುವಿಗಿಂತಲೂ ಹೆಚ್ಚು ಕಾಲ ನೆನಪಿನಲ್ಲಿರುತ್ತವೆ. ಅದು ಭಗ್ನಗೊಂಡ ಮೊದಲ ಪ್ರೀತಿಯ ಹಾಗೇ..! ಫಿಫಾ ವಿಶ್ವಕಪ್ 2026ರ ಟೂರ್ನಿಯ ನಾಕೌಟ್ ಪಂದ್ಯವೊಂದರಲ್ಲಿ ಆಗಿದ್ದು ಕೂಡ ಅದೇ..!...

Road Safety Awareness

Bng – ವೈಟ್‌ಫೀಲ್ಡ್‌ನ ಪಾರ್ಸೆಕ್‌ನಲ್ಲಿ ಸಂಚಾರ ಸುರಕ್ಷತಾ ಗ್ಯಾಲರಿ ಉದ್ಘಾಟನೆ: ‘ಟ್ರಾಫಿಕ್ ಡಿಸೈನ್ ಚಾಲೆಂಜ್’ ಅಂತಿಮ ಹಂತಕ್ಕೆ!

by admin
July 4, 2026
0

​• ಸುರಕ್ಷಿತ ಸಂಚಾರಕ್ಕಾಗಿ ನೂತನ ಗ್ಯಾಲರಿ ಉದ್ಘಾಟನೆ * ವಾಸ್ತವ ಟ್ರಾಫಿಕ್ ಪರಿಸ್ಥಿತಿಯ ಪ್ರಾಯೋಗಿಕ ಕಲಿಕೆ * 'ಟ್ರಾಫಿಕ್ ಡಿಸೈನ್ ಚಾಲೆಂಜ್'ನ ಸಬ್ಮಿಷನ್ ಮುಕ್ತಾಯ * ಮುಂದಿನ...

kylian mbappe

fifaworldcup-2026- ಮೈದಾನದಲ್ಲಿ ರಕ್ಕಸ.. ಬಡವರ ಪಾಲಿಗೆ ದೇವದೂತ.. ಫುಟ್‌ಬಾಲ್ ಜಗತ್ತಿನ ಭವಿಷ್ಯದ ಮಹಾರಾಜ..!

by admin
July 4, 2026
0

ಕಾಲಿಗೆ ಸ್ಟಡ್ಸ್ ಕಟ್ಕೊಂಡು.. ಗಂಟೆಗೆ 38 ಕಿಲೋಮೀಟರ್ ವೇಗದಲ್ಲಿ ಓಡಾಡಿಕೊಂಡು.. ಚೆಂಡನ್ನು ಡ್ರಿಬ್ಲಿಂಗ್ ಮಾಡುತ್ತಾ.. ಎದುರಾಳಿ ಆಟಗಾರರನ್ನು ವಂಚಿಸುವ ಮಾಯಾಕಾರ..! ಫುಟ್‍ಬಾಲ್ ಅಂಗಣದ ಹಸಿರು ಹುಲ್ಲಿನ ಅಂಗಣದ...

ಬಿಡದಿ ಟೌನ್‌ಶಿಪ್ ದಂಗಲ್:ನಿಮ್ಮಿಂದ ರಿಪ್ಲೈ ಬಂದಿಲ್ಲ- ಬಿಡದಿ ರೈತರ ಕಣ್ಣೀರು ಒರೆಸಲು ಬನ್ನಿ: ಡಿಕೆಶಿಗೆ ಎಚ್‌ಡಿಕೆ ಖಡಕ್ ಪತ್ರ, ಜೂನ್ 27ಕ್ಕೆ ಮಹಾ ಮುಖಾಮುಖಿ?

ಮತದಾರರ ಹುಂಡಿ ಲೂಟಿಗೆ ಕಾಂಗ್ರೆಸ್ ಸ್ಕೆಚ್ -ಅಧಿಕಾರಿಗಳು ಸರ್ಕಾರದ ಗುಲಾಮರಾಗಿದ್ದಾರೆ:ವಿಡಿಯೋ ಸಾಕ್ಷಿ ಸಮೇತ ಹೆಚ್ ಡಿ ಕುಮಾರಸ್ವಾಮಿ ಗುಡುಗು!

by Shwetha
July 4, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಈಗ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸರ್ಕಾರವು ಅಧಿಕಾರಿಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮ ಎಸಗುತ್ತಿದೆ ಎಂದು...

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

ಪ್ರಜಾಪ್ರಭುತ್ವದ ಕೊನೆಯ ಭರವಸೆ ನ್ಯಾಯಾಂಗ ಮಾತ್ರ- ನ್ಯಾಯಾಂಗ ಸ್ಪಂದಿಸದಿದ್ದರೆ ಗಣರಾಜ್ಯದ ಪತನ ನಿಶ್ಚಿತ: ಸಿಜೆಐ ಸೂರ್ಯ ಕಾಂತ್ ಅವರಿಗೆ ಇಂಡಿಯಾ ಒಕ್ಕೂಟದ ಗಂಭೀರ ಎಚ್ಚರಿಕೆ!

by Shwetha
July 4, 2026
0

ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ಗಂಭೀರವಾಗಿ ಆರೋಪಿಸಿರುವ ಇಂಡಿಯಾ ವಿರೋಧ ಪಕ್ಷಗಳ ಒಕ್ಕೂಟವು, ಈ ಆತಂಕಗಳಿಗೆ ನ್ಯಾಯಾಂಗವು ತಕ್ಷಣವೇ ಸ್ಪಂದಿಸದಿದ್ದರೆ ಭಾರತೀಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram