ಸಾರಿಗೆ ನೌಕರರ ಪ್ರತಿಭಟನೆ – ಸರ್ಕಾರದ ಘೋಷಣೆಗಳೇನು ಗೊತ್ತಾ..?
ಬೆಂಗಳೂರು : ಸಾರಿಗೆ ನೌಕರರ ಜೊತೆ ಸರ್ಕಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿತ್ತು, ರಾಜ್ಯ ಸರ್ಕಾರ ಸಾರಿಗೆ ನೌಕರರ ಪ್ರಮುಖ ಎಂಟು ಬೇಡಿಕೆಗಳ ಈಡೇರಿಕೆ ಒಪ್ಪಿಗೆ ಸೂಚಿಸಿತ್ತು ಆದ್ರೆ ಫ್ರಿಡಂ ಪಾರ್ಕ್ ಗೆ ಬಂದ ನಂತರ ಸಾರಿಗೆ ನೌಕರರ ಸಂಘದ ಮುಖಂಡರು ಉಲ್ಟಾ ಹೊಡೆದಿದ್ದಾರೆ. ಹೀಗಾಗಿ ಸಾರಿಗೆ ನೌಕರರ ಸಂಘದ ಪ್ರತಿಭಟನೆ ಮುಂದುವರಿದಿದೆ.
ಸಭೆ ಬಳಿಕ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಮುಂದಿನ ದಿನಗಳಲ್ಲಿ ನೌಕರರ ಬಾಳಲ್ಲಿ ಬೆಳಕು ಬರಲಿದೆ. ನಾಳೆಯಿಂದ ಎಂದಿನಂತೆ ಬಸ್ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು. ಆದ್ರೆ ಈಗ ಸಾರಿಗೆ ನೌಕರರು ಪ್ರತಿಭಟನೆ ಮುಂದುವರಿಸಲು ನಿರ್ಧಾರಿಸಿದ್ದಾರೆ.
ಸರ್ಕಾರದ ಘೋಷಣೆಗಳೇನು..?
ನೌಕರರ ತರಬೇತಿ ಅವಧಿ 2ರಿಂದ ಒಂದು ವರ್ಷಕ್ಕೆ ಇಳಿಕೆ.
ಕೊರೊನಾದಿಂದ ಮೃತಪಟ್ಟ ಸಿಬ್ಬಂದಿಯ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ.
ಆರನೇ ವೇತನ ಆಯೋಗದ ಜಾರಿಗೆ ಒಪ್ಪಿಗೆ
ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಅಳವಡಿಕೆ.
ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚನೆ.
ನಿಗಮದಲ್ಲಿ ಹೆಚ್ ಆರ್ ಎಂಎಸ್ ವ್ಯವಸ್ಥೆ ಜಾರಿ
ಸಿಬ್ಬಂದಿಯ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆ ನೀಡಲು ತೀರ್ಮಾನ
ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








