ADVERTISEMENT
Monday, July 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಫಿಲ್ಮಿ 5 ಸ್ಟಾರ್ ಪ್ರಮುಖ ಸುದ್ದಿಗಳು..!

Namratha Rao by Namratha Rao
December 14, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಫಿಲ್ಮಿ 5 ಸ್ಟಾರ್ ಪ್ರಮುಖ ಸುದ್ದಿಗಳು..!

ವ್ಹಾ… ಹೊಸ ಸಾಧನೆಯತ್ತ ಕಿಚ್ಚನ ‘ಫ್ಯಾಂಟಮ್’… ಈ ಸಾಧನೆಯಲ್ಲೇ ಭಾರತದ 2ನೇ ಸಿನಿಮಾ…!

ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಕಿಚ್ಚನ ಅಭಿನಯದ ಫ್ಯಾಂಟಮ್ ಸಿನಿಮಾದ ಆಡೀಯೋ ಲಾಂಚ್ ಮಾಡಲಿದೆಯಂತೆ ಚಿತ್ರತಂಡ. ಎಸ್ ಈ ಹಿಂದೆ ಈ ಸಾಧನೆ ಮಾಡಿದ್ದ ಏಕೈಕ ಸಿನಿಮಾ 0.2 ಸಿನಿಮಾವಾಗಿತ್ತು. ಇದೀಗ ಇದೇ ಹಾದಿ ಹಿಡಿರುವ ಚಿತ್ರತಂಡ ‘ದಿ ವರ್ಡ್ ಆಫ ಫ್ಯಾಂಟಮ್ ‘ ಸಿನಿಮಾವನ್ನ ಎಕ್ಸ್ಟ್ರೀಮ್ ಲೆವೆಲ್ ಕೊಂಡೊಯ್ಯೋ ಮಾಸ್ಟರ್ ಪ್ಲಾನ್ ಮಾಡಿದೆ. ಅನೂಪ್  ಭಂಡಾರಿ ಅವರ ಸಾರಥ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.

Related posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

July 6, 2026
ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

July 6, 2026

ಅಯ್ಯಯ್ಯೋ ನನ್ನ ಕ್ಷಮಿಸ್ಬಿಡಿ, ನಾನು ಪಾಪ ಮಾಡ್ಬಿಟ್ಟೆ : ವಿಜಯರಂಗ ಕಣ್ಣೀರು

ಬೆಂಗಳೂರು : ಕನ್ನಡದ ಮೇರು ನಟ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಭಾರಿ ಟೀಕೆಗೆ ಒಳಗಾಗಿದ್ದ ತೆಲುಗು ನಟ ವಿಜಯ್ ರಂಗರಾಜು ಕೊನೆಗೂ ಕ್ಷಮೆ ಕೇಳಿದ್ದಾರೆ. ಕಣ್ಣೀರು ಹಾಕುತ್ತಾ ವಿಜಯ್ ವಿಡಿಯೋ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕರ್ನಾಟಕ ಜನರು, ಕರ್ನಾಟಕ ಮಕ್ಕಳಿಗೆ ನಮಸ್ಕಾರ. ವಿಜಯ್ ರಂಗರಾಜು ಮಾತನಾಡುತ್ತಿದ್ದೇನೆ. ನಾನು ತುಂಬಾ ದೊಡ್ಡ ತಪ್ಪು ಮಾಡಿದ್ದೀನಿ. ಆ ತಪ್ಪುಗೆ ಈಗ ಶಿಕ್ಷೆ ಅನುಭವಿಸುತ್ತಿದ್ದೇನೆ. ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಅದಕ್ಕಾಗಿ ನಾನು ಮಾಸ್ಕ್ ಹಾಕಿಕೊಂಡಿದ್ದೇನೆ. ನಿಮಗೆ ನನ್ನ ಮುಖ ತೋರಿಸಬಾರದೆಂದು ಅಲ್ಲ. ಕೊರೊನಾದಿಂದಾಗಿ ನಾನು ಕಷ್ಟಪಡುತ್ತಿದ್ದೇನೆ. ನಾನು ದೊಡ್ಡ ಪಾಪ ಮಾಡಿದ್ದೇನೆ. ನಾನು ಇಂಡಸ್ಟ್ರೀಗೆ ಬಂದು ತುಂಬಾ ದಿನಗಳಾಗಿವೆ. ಫೈಟರ್ ಆಗಿ ನಾನು ಇಂಡಸ್ಟ್ರೀಗೆ ಬಂದೆ. ದೊಡ್ಡ ಆರ್ಟಿಸ್ಟ್ ಏನಲ್ಲ. ಕೆಲ ವ್ಯಾಪಾರಗಳನ್ನು ಮಾಡಿ ಎಲ್ಲ ಕಳೆದುಕೊಂಡಿದ್ದೇನೆ. ಮತ್ತೆ ನಾನು ಲಂಡನ್ ಗೆ ಹೋಗಿ, ಅಲ್ಲಿ ಕಸಗುಡಿಸಿದ್ದೀನಿ, ಟಾಯ್ಲೆಟ್ ಕ್ಲೀನ್ ಮಾಡ್ದೆ, ಆದ್ರೂ ನನ್ನ ಕಷ್ಟ ತೀರಲಿಲ್ಲ. ಆ ದಿನ ನಾನು ವಿಷ್ಣುವರ್ಧನ್ ಅವರನ್ನ ಹಿಡ್ಕೊಲಿಲ್ಲ. ಅಂತಃ ದೊಡ್ಡ ವ್ಯಕ್ತಿಯನ್ನ ನಾನು ಹಿಡ್ಕೊಂಡಿದ್ರೆ ಅಲ್ಲಿದ್ದ ಯುನಿಟ್ ಅವ್ರು ನನ್ನ ಸುಮ್ನೆ ಬಿಡ್ತೀದ್ರಾ..? ಅಲ್ಲೇ ನನ್ನ ಸಾಯ್ಸಿಬಿಡ್ತಿದ್ರು.

ನಾನು ಯಾವುದೋ ಕೋಪದಲ್ಲಿ, ಏನೋ ಫ್ಲೋನಲ್ಲಿ ಅವ್ರ ಬಗ್ಗೆ ಆ ರೀತಿ ಹೇಳ್ಬಿಟ್ಟೆ. ನಾನು ನಿಮ್ಮ ಪಾದಗಳನ್ನ ಹಿಡಿದು ಬೇಡಿಕೊಳ್ಳುತ್ತೇನೆ ದಯವಿಟ್ಟ ನನ್ನ ಬಿಟ್ಟು ಬಿಡಿ.. ಅಂತಾ ಕಣ್ಣೀರು ಹಾಕುತ್ತಾ ವಿಜಯ್ ರಂಗ ಕ್ಷಮೆ ಕೇಳಿದ್ದಾರೆ.

‘ದಾದಾ’ ಬಗ್ಗೆ ಅವಹೇಳನಕಾರಿ ಹೇಳಿಕೆ : ರಂಗರಾಜನ್  ಗೆ ‘ರಾಖಿಭಾಯ್’ ವಾರ್ನಿಂಗ್

ಸ್ಯಾಂಡಲ್ ವುಡ್ ನ ಯಜಮಾನ ವಿಷ್ಣು ದಾದನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ  ಅನೇಕ ಸ್ಯಾಂಡಲ್ ವುಡ್ ನಟರು ಆಕ್ರೋಶ ಹೊರಹಾಕಿದ್ದಾರೆ. ಕನ್ನಡಾಭಿಮಾನಿಗಳಂತು ನಿಗಿ ನಿಗಿ ಕೆಂಡಕಾರ್ತಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ರಂಗರಾಜನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ಹೊರಹಾಕಿರೋ ರಾಖಿ ಬಾಯ್ ‘ಸರಿದಾರಿಯಲ್ಲಿ ನಡೆಯುವವರು ಬೆವರುಹರಿಸಿ ಹಂತಹಂತವಾಗಿ ಬೆಳೆದು ಹೆಸರು ಮಾಡಿ ಉಳಿದುಕೊಳ್ಳುತ್ತಾರೆ, ಅಡ್ಡದಾರಿಯಲ್ಲಿ ನಡೆಯುವವರು ಅಂತ ಹೆಸರುಗಳನ್ನು ಬಳಸಿಕೊಳ್ಳಲು ಹೋಗಿ ಬದಿಯಲ್ಲೇ, ಉಳಿದುಬಿಡುತ್ತಾರೆ. ವಿಷ್ಣು ಸರ್ ಕನ್ನಡ ನಾಡು ಕಂಡ ಮಹಾನ್ ಸಾಧಕರು ಅವರ ಶ್ರಮ ಪ್ರತಿಭೆ ಹಾಗೂ ನಟನೆಯ ಜೊತೆಜೊತೆಯಾಗಿ ಅವರ ಬದುಕು ಅವರ ವ್ಯಕ್ತಿತ್ವದಿಂದ ನಮ್ಮ ಮನೆ ಮನದಲ್ಲಿ ಅಜರಾಮರವಾಗಿರುವವರು.

ಅಂತಹ ಸಾಧಕರನ್ನು ನಿಂದಿಸಿ ಹೆಸರು ಮಾಡ ಬಯಸುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ. ಕನ್ನಡ ಚಿತ್ರರಂಗ ಎಲ್ಲಾ ಚಿತ್ರರಂಗಗಳ ಜೊತೆ ಪರಸ್ಪರ ಹೊಂದಾಣಿಕೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಅದು ಇಂತವರಿಂದ ತಪ್ಪುದಾರಿಗೆ ಹೋಗಬಾರದು. ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು’ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಷ್ಣುವರ್ಧನ್ ಬಗ್ಗೆ ಮಾತಾಡಿದ ವ್ಯಕ್ತಿ ಕ್ಷಮೆಗೆ ಅರ್ಹರಲ್ಲ : ಸುಮಲತಾ

ಚಂದನವನದ ಯಜಮಾನ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ನಟ ವಿಜಯ್ ರಂಗರಾಜು ಕ್ಷಮೆಗೆ ಅರ್ಹರಲ್ಲ ಅಂತಾ ನಟಿ, ಸಂಸದೆ ಸುಮಲತಾ ಕಿಡಿಕಾರಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ.ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನೆತೆ ಏನೆಂಬುವುದು ಚೆನ್ನಾಗಿಯೇ ಗೊತ್ತು.

ಇತ್ತೀಚಿನ ದಿನಗಳಲ್ಲಿ ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಲ್ಲ ಸಲ್ಲದ ವಿವಾದ್ಮಕ ಹೇಳಿಕೆ ನೀಡಿ ಬಿಟ್ಟಿ ಪ್ರಚಾರ ಪಡೆಯುವುದೇ ಕೆಲವರಿಗೆ ಹವ್ಯಾಸವಾಗಿ ಹೋಗಿದೆ. ಇಡೀ ದೇಶವೇ, ಅದರಲ್ಲೂ ದಕ್ಷಿಣ ಭಾರತೀಯ ಚಿತ್ರ ರಸಿಕರಿಗೆ ನಮ್ಮ ಕರ್ನಾಟಕದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ಘನೆತೆ ಏನೆಂಬುವುದು ಚೆನ್ನಾಗಿಯೇ ಗೊತ್ತು.

ಅದು ಕೇವಲ ಅಂತಹ ಬಾಯಿಬಡುಕ ವ್ಯಕ್ತಿಯ ಕೆಟ್ಟ ಗುಣ ಹಾಗು ನೀಚ ಬುದ್ದಿಯ ಅನಾವರಣವಲ್ಲದೆ ಬೇರೇನಲ್ಲ. ಅದರಲ್ಲೂ ನಮ್ಮನ್ನು ಅಗಲಿದ ವ್ಯಕ್ತಿಯ ಬಗ್ಗೆ ಈ ರೀತಿಯ ತುಚ್ಛವಾಗಿ ಮಾತನಾಡುವುದು ಕ್ಷಮಿಸಲಾಗದ ದೊಡ್ಡ ಅಪರಾಧ.

ವಿಷ್ಣುವರ್ಧನ್ ಅವರ ವ್ಯಕ್ತಿತ್ವ, ವರ್ಚಸ್ಸು ಅವರನ್ನು ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳಿಗೆ ಗೊತ್ತು. ನಾಯಿ ಬೊಗಳಿದರೆ ದೇವಲೋಕ ಹಾಳಾಗದು ಎಂಬುದಕ್ಕೆ ಇದೊಂದು ಸರಿಯಾದ ಉದಾಹರಣೆ. ಇಂತಹ ‘ಚೀಪ್ ಪಬ್ಲಿಸಿಟಿ’ ಗಾಗಿ ಮನಬಂದಂತೆ ಬಾಯಿ ಹರಟುವ ವ್ಯಕ್ತಿಗಳು ಕ್ಷಮೆ ಕೇಳಲು ಅರ್ಹರಲ್ಲ. ಕ್ಷಮಿಸಲು ಆಗದು, ಕ್ಷಮಿಸಲು ಬಾರದು ಎಂದು ಆಕ್ರೋಶ ಹೊರಹಾಕಿದರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ShareTweetSendShare
Join us on:

Related Posts

King Mohammed VI sent congratulations to Morocco’s national football team

FIFAWORLDCUP2026- ರಾಜನ ದೂರದೃಷ್ಟಿಯ ಯುಕ್ತಿ…! ಬಿಳಿ ಚಿನ್ನದ ಶಕ್ತಿ..! ಭಾರತಕ್ಕೆ ಪಾಠವಾಗಲಿದೆ ಮೊರಾಕ್ಕೋ ಫುಟ್‍ಬಾಲ್ ಕ್ರಾಂತಿ..!

by admin
July 6, 2026
0

ಹಾಗಂತ... ಇದು ಖಂಡಿತವಾಗಿಯೂ ಫುಟ್‍ಬಾಲ್ ಜಗತ್ತಿನ ಕಾಲ್ಪನಿಕ ಕಥೆಯಂತೂ ಅಲ್ಲವೇ ಅಲ್ಲ. ಬದಲಾಗಿ ಮತ್ತೊಂದು ಸಣ್ಣ ದೇಶದ ಫುಟ್‍ಬಾಲ್ ಆಟದ ಮಹೋನ್ನತ ಪರ್ವದ ನೈಜ ಚಿತ್ರಣ. ಒಬ್ಬ...

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

ಮನೆಯಲ್ಲಿರೋ ಹಳೆಯ ಚಿನ್ನದಿಂದಲೇ ಪಡೆಯಿರಿ ಭರ್ಜರಿ ಆದಾಯ: ಕಳ್ಳರ ಭಯವಿಲ್ಲ ಲಾಕರ್ ಬಾಡಿಗೆಯೂ ಇಲ್ಲ: ನಿಮ್ಮ ಮನೆಯ ಚಿನ್ನದಿಂದಲೇ ಹಣ ಗಳಿಸುವ ಸುವರ್ಣಾವಕಾಶ

by Shwetha
July 6, 2026
0

ಮನೆಯಲ್ಲಿರುವ ಹಳೆಯ ಚಿನ್ನವನ್ನು ಲಾಕರ್ ನಲ್ಲಿಟ್ಟು ಸುಮ್ಮನೆ ಕೂರುವ ಬದಲು ಅದರಿಂದಲೇ ಲಾಭ ಗಳಿಸುವ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ದೇಶದ ಚಿನ್ನದ ಆಮದು ಪ್ರಮಾಣವನ್ನು ತಗ್ಗಿಸುವ...

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

ಫಿಂಗರ್ ಚಿಪ್ಸ್ ನೀಡಲಿಲ್ಲ ಎಂದು ಗಂಡನ ಮೇಲೆ ಕೇಸ್: ಏನ್ರೀ ಇದು ತಮಾಷೆ ಎಂದು ಜಡ್ಜ್ ಗರಂ

by Shwetha
July 6, 2026
0

ಗರ್ಭಿಣಿಯಾಗಿದ್ದಾಗ ಪತಿ ತನಗೆ ಫಿಂಗರ್ ಚಿಪ್ಸ್ ಮತ್ತು ಮಾಂಸದೂಟ ತಿನ್ನಲು ಬಿಡಲಿಲ್ಲ ಎಂಬ ವಿಚಿತ್ರ ಕಾರಣ ನೀಡಿ ಪತ್ನಿಯೊಬ್ಬಳು ತನ್ನ ಎನ್ಆರ್ಐ ಪತಿಯ ಮೇಲೆ ದಾಖಲಿಸಿದ್ದ ಕ್ರಿಮಿನಲ್...

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

ಇರಾನ್ ನಾಯಕರನ್ನು ಒಂದೇ ಹೊಡೆತಕ್ಕೆ ಹೊಸಕಿ ಹಾಕಬಹುದು- ಖಮೇನಿ ಅಂತ್ಯಕ್ರಿಯೆಯಲ್ಲಿ ಹರಿದ ಜನಸಾಗರ ಕಂಡು ಟ್ರಂಪ್ ಆಶ್ಚರ್ಯ: ಜನರ ಕಣ್ಣೀರು ನಕಲಿ ಎಂದ ಅಮೆರಿಕ ಅಧ್ಯಕ್ಷ

by Shwetha
July 6, 2026
0

ವಾಷಿಂಗ್ಟನ್: ಇರಾನ್ ದೇಶದ ಉನ್ನತ ನಾಯಕತ್ವವನ್ನು ಕೇವಲ ಒಂದೇ ಒಂದು ದಾಳಿಯ ಮೂಲಕ ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಅಮೆರಿಕಕ್ಕಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಘಾತಕಾರಿ...

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

ಚಂದಾ ಚೋರಿ ಬಗ್ಗೆ ಚೌಕಿದಾರ ಮೌನವೇಕೆ: ಆರೆಸ್ಸೆಸ್ ನೋಂದಣಿಯಾದರೆ ಮಾತ್ರ ಚಂದಾ ಚೋರಿಗೆ ಬ್ರೇಕ್ ಸಾಧ್ಯ: ಪ್ರಿಯಾಂಕ್ ಖರ್ಗೆ

by Shwetha
July 6, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಅಧಿಕೃತವಾಗಿ ನೋಂದಣಿಯಾದರೆ ಮಾತ್ರ ಇಂತಹ ಅಕ್ರಮಗಳಿಗೆ ಮುಕ್ತಿ ಸಿಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದ್ದಾರೆ. ಅಯೋಧ್ಯಾ ರಾಮಮಂದಿರದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram