ವಿಲಕ್ಷಣ ಅಪರಾಧ ಪ್ರಕರಣಗಳು : ಪ್ರಮುಖ ಸುದ್ದಿಗಳು..!
ಪೂರ್ಣ ಸುದ್ದಿಗಳಿಗಾಗಿ ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ..!
3 ಮಕ್ಕಳ ಜೊತೆ ತಾಯಿ ನಾಪತ್ತೆ… ಕಾಡಿನಲ್ಲಿ ಪತ್ತೆ… ಕೊಳೆತ ಸ್ಥಿತಿಯಲ್ಲಿ..!
ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳ ಜೊತೆಗೆ 2 ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಆದ್ರೆ ಇದೀಗ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಗಂಡನ ಜೊತೆ ಜಗಳವಾಡಿ ಮೂರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದ ಮಹಿಳೆ ಮೃತದೇಹ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೌಟುಂಬಿಕ ಕಲಹದಿಂದ ಬೇಸತ್ತ ರಂಜನಾ (30) ಮಕ್ಕಳೊಂದಿಗೆ ನೇಣಿಗೆ ಶರಣಾಗಿರೋದಾಗಿ ಹೇಳಲಾಗ್ತಿದೆ. ಇನ್ನೂ ಆಕೆಯ ಜೊತೆಗೆ ಮಕ್ಕಳಾದ ರೋಹಿತ್ (9), ರೋಷಿಣಿ(6) , ದರ್ಶನ್ (12) ಮೃತದೇಹಗಳು ಸಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ನೀಚ ತಾಯಿ.. ಮಗನನ್ನೇ ಕೊಂದಳು.. ಮಸಾಲೆ ಹಾಕಿ ಬೇಯಿಸಿದಳು..!
ನೀಚ ತಾಯಿ.. ಮಗನನ್ನೇ ಕೊಂದಳು.. ಮಸಾಲೆ ಹಾಕಿ ಬೇಯಿಸಿದಳು..!
ಕೋಲ್ಕೊತ್ತಾ: ಜೀವನದಲ್ಲಿ ಯಾರು ಬೇಕಾದರೂ ನಮಗೆ ಕೆಟ್ಟದ್ದನ್ನ ಮಾಡಬಹುದು. ಆದ್ರೆ ಕೊನೆತನಕ ನಾವೇಷ್ಟೇ ತಪ್ಪು ಮಾಡಿದ್ರು ನಮ್ಮ ಜೊತೆಗೆ ನಿಲ್ಲುವುದು ನಮ್ಮ ಹೆತ್ತ ತಾಯಿ ಮಾತ್ರ.. ಆದ್ರೆ ಕೆಲವು ತಾಯಂದಿರು ಇದನ್ನ ಸುಳ್ಳು ಮಾಡಿದ್ದಾರೆ. ಅನೇಕ ಪ್ರಕರಣಗಳಲ್ಲಿ ತಾಯಂದಿರು ಮಕ್ಕಳನ್ನ ಹತ್ಯೆಗೈದ ಪ್ರಕರಣಗಳನ್ನ ಸಹ ನೋಡಿದ್ದೇವೆ.
ಆದ್ರೆ ಈ ಪಾಪಿ ತಾಯಿಯ ಕ್ರೂರತ್ವ ನೋಡಿದ್ರೆ ನಿಜಕ್ಕೂ ಇಂಥವರು ಭೂಮಿಮೇಲೆ ಇರುತ್ತಾರಾ ಅನ್ನಿಸುತ್ತೆ. ಹೌದು ನೀಚ ತಾಯೊಬ್ಬಳು ತನ್ನ ಮಗನನ್ನ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಮಗನನ್ನೇ ಹತ್ಯೆ ಮಾಡಿದ್ದಲ್ಲದೇ ಮಸಾಲೆ ಹಾಕಿ ಬೇಯಿಸಿ ವಿಕೃತಿ ಮೆರೆದಿದ್ದಾಳೆ. ಪಶ್ಚಿಮ ಬಂಗಾಲದಲ್ಲಿ ಇಂತಹ ಎದೆ ಝಲ್ ಎನಿಸುವಂತಹ ಘಟನೆ ನಡೆದಿದೆ.
ರಾತ್ರಿ ನಿದ್ರೆ ಮಾಡಿದ್ದ ಕಂದಮ್ಮ ಮುಂಜಾನೆ ಶವವಾಗಿ ಪತ್ತೆ..!
ರಾತ್ರಿ ನಿದ್ರೆ ಮಾಡಿದ್ದ ಕಂದಮ್ಮ ಮುಂಜಾನೆ ಶವವಾಗಿ ಪತ್ತೆ..!
ರಷ್ಯಾ : ರಾತ್ರಿ ನಿದ್ದೆ ಮಾಡಿದ್ದ 3 ವರ್ಷದ ಕಂದಮ್ಮ ಮುಂಜಾನೆ ದುರಂತ ಅಂತ್ಯ ಕಂಡಿತ್ತು. ಪಾಲಕರು ಬೆಳಗ್ಗೆ ಎದ್ದು ನೋಡಿದಾಗ ದೊಡ್ಡ ಆಘಾತ ಕಾದಿತ್ತು. ಯಾಕಂದ್ರೆ ಪಾಲಕರು ನಿದ್ರೆಗೆ ಜಾರಿದ್ದ ವೇಳೆ ಅವರ 3 ವರ್ಷದ ಕಂದಮ್ಮ ನಿದ್ರೆಯಲ್ಲಿ ನಡೆದು ಹೋಗಿ ಸಾವಿಗೀಡಾಗಿದೆ.
ರಷ್ಯಾದ ಸಟ್ಕಾದಲ್ಲಿ ಈ ದಾರುಣ ಘಟನೆ ನಡೆದಿದೆ. ಹೌದು 3 ವರ್ಷದ ಏಂಜಲಿನಾ ಎಂಬ ಮುದ್ದು ಮಗು ಅತ್ಯಂತ ದುರಂತ ಅತ್ಯಂತ ಕಂಡಿದೆ. ರಾತ್ರಿ ನಡೆದು ಹೋದ ಏಂಜಲೀನಾ ಮುಂಜಾನೆ ಮನೆಯ ಮುಂಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅವರ ತಾಯಿ ಸ್ವೆಟ್ಲಾನಾ ಕುಲೆಶೋವಾ ಮಗುವನ್ನ ಕಳೆದುಕೊಂಡು ಮಾನಸಿಕವಾಗಿ ಕುಸಿದುಹೋಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಏಂಜಲಿನಾಗೆ ನಿದ್ರೆಯಲ್ಲಿ ನಡೆಯುವ ಹವ್ಯಾಸವಿತ್ತಂತೆ. ಅನೇಕ ಬಾರಿ ಪಾಲಕರು ಏಂಜಲಿನಾ ನಿದ್ರೆಯಲ್ಲಿ ನಡೆದಾಗ ಆಕೆಯನ್ನು ಮರಳಿ ಬೆಡ್ ಮೇಲೆ ತಂದು ಮಲಗಿಸಿದ್ದಾರೆ. ಆದರೆ, ಆ ರಾತ್ರಿ ಮಾತ್ರ ಮಗಳು ಹೋದದ್ದು, ಪೋಷಕರ ಅರಿವೆಗೆ ಬಂದಿಲ್ಲವಂತೆ.
ಏಂಜಿಲಿನಾ ನಿದ್ರೆಯಲ್ಲಿ ನಡೆದುಕೊಂಡು ಲಿವಿಂಗ್ ರೂಮ್ ತಲುಪ್ಪಿದ್ದಳು. ಶೀತದಿಂದ ತುಂಬಿದ್ದ ಮನೆಯ ವಾತಾವರಣದಲ್ಲಿ ಮೈನಸ್ 15 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ಕತ್ತಲು ಬೇರೆ ಆವರಿಸಿದ್ದರಿಂದ ದಾರಿ ಕಾಣದೇ ವಾಪಸ್ ಹೋಗಲಾರದೇ ಚಳಿಗೆ ಅಲ್ಲೇ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾಳೆ ಎಂದು ಹೇಳಲಾಗ್ತಿದೆ.
ಹಾಲಿವುಟ್ ನಟಿಯಂತೆ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಯುವತಿ
ಹಾಲಿವುಡ್ ನಟಿ ಏಂಜಲೀನಾ ಜೋಲಿಯಂತೆ ಕಾಣಲು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಇರಾನಿಯನ್ ಯುವತಿ ಸಹರ್ ತಬಾರ್ ಗೆ 10 ವರ್ಷ ಜೈಲು ಶಿಕ್ಷಿಯಾಗಿದೆ.
19 ವರ್ಷದ ತಬಾರ್ ಹಲವಾರು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳಿಂದ ಖ್ಯಾತಿ ಗಳಿಸಿದ್ದರು. ಸದ್ಯ ಇವರನ್ನು ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಆರೋಪದ ಮೇಲೆ ಬಂಧಿಸಲಾಗಿದೆ.
ಸದ್ಯ ಜೈಲು ಸೇರಿರುವ 17 ವರ್ಷದ ಸಹರ್ ತಬಾರ್ ಅವ್ರ ನಿಜವಾದ ಹೆಸರು ಫಾತಿಮೆ ಖಿಶ್ವಾಂಡ್. ಮೂಲತಃ ಟೆಹ್ರಾನ್ ಮೂಲದವರು.
ಪೂರ್ಣ ಸುದ್ದಿಗಳಿಗಾಗಿ ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








