ಎಸ್ಮಾ ಎಂದರೇನು..? ಜಾರಿಯಾದ್ರೆ ಏನಾಗುತ್ತೆ..?
ಸಾರಿಗೆ ನೌಕರರ ಮುಷ್ಕರ ಅಥವಾ ಯಾವುದೇ ಸರ್ಕಾರಿ ನೌಕರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ ಸರ್ಕಾರ ಎಸ್ಮಾ ಜಾರಿಮಾಡುವ ಎಚ್ಚರಿಕೆ ಕೊಡುತ್ತೆ. ಸದ್ಯ ಸಾರಿಗೆ ನೌಕರರ ಮುಷ್ಕರ ಸಂದರ್ಭದಲ್ಲೂ ಎಸ್ಮಾ ಜಾರಿ ಮಾಡೋದಾಗಿ ಕೆಲ ಸಚಿವರು ಹೇಳಿಕೆಗಳನ್ನ ನೀಡಿದ್ದಾರೆ.
ಹಾಗಾದರೆ ಈ ಎಸ್ಮಾ ಎಂದರೇನು? ಇದರ ಹೇರಿಕೆಗೆ ಸರ್ಕಾರ ಮುಂದಾದರೆ ಉದ್ಯೋಗಿಗಳು ಯಾವ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ವರದಿ ಇಲ್ಲಿದೆ.
ಎಸ್ಮಾ ಎಂದರೇನು..?
* ಎಸ್ಮಾ ಎಂದರೆ Essential Services Maintenance Act. ಕನ್ನಡದಲ್ಲಿ ಅಗತ್ಯ ಸೇವೆ ನಿರ್ವಹಣೆ ಕಾಯಿದೆ. ಅಲ್ಲದೆ ಎಸ್ಮಾ ಎಂದರೆ ಕಡ್ಡಾಯ ಕೆಲಸ ಎಂಬ ಅರ್ಥ ಬರುತ್ತದೆ.
* ಈ ಕಾಯ್ದೆ 1968 ರಿಂದ ಜಾರಿಯಲ್ಲಿದೆ.
* ಕರ್ನಾಟಕದಲ್ಲಿ 1994ರಲ್ಲಿ ಎಸ್ಮಾ ಕಾನೂನಿನ ಮೊದಲ ಬಾರಿ ಉಲ್ಲೇಖ ಆಯಿತು.
* ಆದ್ರೆ ಜೂನ್ 2013 ರಿಂದ ರಾಜ್ಯದಲ್ಲಿ ಎಸ್ಮಾ ಬಳಕೆಗೆ ಅವಕಾಶ ಸಿಕ್ಕಿತು.
* 2015 ರಲ್ಲಿ ಎಸ್ಮಾಗೆ ಕೆಲ ತಿದ್ದುಪಡಿ ಮಾಡಲಾಯಿತು.
ಎಸ್ಮಾ ಎಂಬುದು ಕೇಂದ್ರ ಕಾನೂನು, ಭಾರತದ ಸಂಸತ್ತು ಮಾಡಿದ ಕಾನೂನು; ಆದರೆ ಅದರ ಕಾರ್ಯಗತಗೊಳಿಸುವ ವಿವೇಚನೆಯು ಹೆಚ್ಚಾಗಿ ರಾಜ್ಯ ಸರ್ಕಾರಗಳಿಗೆ ಇರುತ್ತದೆ
ಇನ್ನು ಎಸ್ಮಾವನ್ನು ಯಾವಾಗ ಜಾರಿ ಮಾಡಲಾಗುತ್ತದೆ ಅನ್ನೋದನ್ನ ನೋಡೋದಾದ್ರೆ..
ಸರ್ಕಾರ ಈ ಎಸ್ಮಾವನ್ನು, ಸರ್ಕಾರಿ ನೌಕರರು ಸಾಮೂಹಿಕ ಪ್ರತಿಭಟನೆಗೆ ಮುಂದಾಗಿದ್ದಾಗ, ಪರಿಸ್ಥಿತಿ ಸಂಪೂರ್ಣವಾಗಿ ಕೈ ಮೀರಿ ಹೋಗುತ್ತಿದೆ ಅಂದ್ರೆ ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೆÇಲೀಸ್ ವ್ಯವಸ್ಥೆಗೆ ಭಂಗ ಬರುವ ಸಂಭವ ಹೆಚ್ಚಿದೆ ಅನ್ನೋ ಸಂದರ್ಭದಲ್ಲಿ ಜಾರಿ ಮಾಡಬಹುದು.
ಎಸ್ಮಾ ಜಾರಿ ಪರಿಣಾಮ ಏನು?
ಸರ್ಕಾರಿ ನೌಕರರು ಎಸ್ಮಾ ಕಾಯ್ದೆಯನ್ನು ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು.
ಅವರಿಗೆ ಆರು ತಿಂಗಳು ಜೈಲು ವಾಸ ಸಾಧ್ಯತೆಯೂ ಇರುತ್ತದೆ.
ಒಂದು ವೇಳೆ ಎಸ್ಮಾ ಜಾರಿಯಾದ ಮೇಲೂ ನೌಕರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರೇ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮ ಉಂಟಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







