ಮೊಬೈಲ್ ಚಾರ್ಜಿಂಗ್ ನಲ್ಲಿ ಇಡುವಾಗ ನೆನಪಿಡಬೇಕಾದ ಅಂಶಗಳು
ಮಂಗಳೂರು, ಡಿಸೆಂಬರ್15: ಅನೇಕರು ರಾತ್ರಿ ವೇಳೆ ಮೊಬೈಲ್ ಫೋನ್ ಅನ್ನು ಚಾರ್ಜಿಂಗ್‌ಗೆ ಹಾಕಿ ನಿದ್ದೆ ಮಾಡುತ್ತಾರೆ. ರಾತ್ರಿಯಿಡೀ ಮೊಬೈಲ್ ಚಾರ್ಜಿಂಗ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಓವರ್ ಚಾರ್ಜಿಂಗ್ ನಿಂದ ಮೊಬೈಲ್ ಫೋನ್ ಸಿಡಿಯುವ ಅಪಾಯವಿದೆ.

ಓವರ್ ಚಾರ್ಜಿಂಗ್ ಮೊಬೈಲ್ ಫೋನ್ ಗೆ ಅಪಾಯಕಾರಿ:
ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜಿಂಗ್‌ಗೆ ಇಟ್ಟು ಬಳಿಕ ನಿದ್ರೆಗೆ ಜಾರುತ್ತಾರೆ. ಆದರೆ ರಾತ್ರಿಯಿಡೀ ಮೊಬೈಲ್ ಚಾರ್ಜಿಂಗ್ (Mobile Charging) ನಲ್ಲಿ ಇರುವ ಹಿನ್ನೆಲೆಯಲ್ಲಿ ಬ್ಯಾಟರಿ ತಾಪವು ಹೆಚ್ಚಾಗಿ ಸ್ಪೋಟಗೊಳ್ಳುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ಓವರ್ ಚಾರ್ಜಿಂಗ್ ಮೊಬೈಲ್ ಬ್ಯಾಟರಿಯ ಜೀವಿತಾವಧಿಯನ್ನು ಕಡಿಮೆ ಮಾಡುವ ಜೊತೆಗೆ ಫೋನ್‌ನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಫೋನ್‌ನನ್ನು ಅದರ ರಕ್ಷಣಾತ್ಮಕ ಕವರ್ ಜೊತೆಗೆ ಚಾರ್ಜ್ ಗೆ ಇಡಬೇಡಿ
ಫೋನ್ ಅನ್ನು ಹಾನಿಯಿಂದ ರಕ್ಷಿಸಲು ನಾವು ಯಾವಾಗಲೂ ರಕ್ಷಣಾತ್ಮಕ ಕವರ್ ಹಾಕುತ್ತೇವೆ. ಆದರೆ ತಜ್ಞರ ಪ್ರಕಾರ ಫೋನ್ ಅನ್ನು ರಕ್ಷಣಾತ್ಮಕ ಕವರ್ ಜೊತೆಗೆ ಚಾರ್ಜ್ ಮಾಡುವುದು ಅಪಾಯಕಾರಿ.
ಚಾರ್ಜಿಂಗ್ ಸಮಯದಲ್ಲಿ ಬ್ಯಾಟರಿಯ ಶಾಖ ಹೆಚ್ಚಾಗುವ ಸಾಧ್ಯತೆಯಿದ್ದು, ಅಂತಹ ಪರಿಸ್ಥಿತಿಯಲ್ಲಿ ಸೇಫ್ಟಿ ಕವರ್ ಅಥವಾ ರಕ್ಷಣಾತ್ಮಕ ಕವರ್ ಇದ್ದಾಗ ಬ್ಯಾಟರಿ ಸ್ಫೋಟಗೊಳ್ಳುವ ಅಪಾಯವಿದೆ.

ಪವರ್ ಬ್ಯಾಂಕ್‌ನಿಂದ ಮೊಬೈಲ್ ಚಾರ್ಜ್ ಮಾಡುವಾಗ ಇದು ನೆನಪಿನಲ್ಲಿರಲಿ
ಪವರ್ ಬ್ಯಾಂಕಿನಿಂದ (Power Bank) ಮೊಬೈಲ್ ಫೋನ್ ಚಾರ್ಜ್ ಮಾಡುವಾಗ ಮೊಬೈಲ್ ಫೋನ್ ಅನ್ನು ಎಂದಿಗೂ ಬಳಸಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ವಾಸ್ತವವಾಗಿ ಅಂತಹ ಬಳಕೆಯು ಫೋನ್‌ನ ಕಾರ್ಯಕ್ಷಮತೆ ಮತ್ತು ಬ್ಯಾಟರಿಯ ಜೀವಿತಾವಧಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1337809990694813696?s=19
https://twitter.com/SaakshaTv/status/1337810357314699264?s=19








