ಬಿಜೆಪಿ ಜನರ ಬಾಳನ್ನು ಅಲ್ಲೋಲ್ಲ ಕಲ್ಲೋಲ ಮಾಡುತ್ತಿದೆ : ಹೆಚ್.ಡಿ.ದೇವೇಗೌಡ
ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಸಮಾಜದಲ್ಲಿ ಅಶಾಂತಿ ಮತ್ತು ಜನರ ಬಾಳನ್ನು ಅಲ್ಲೋಲ್ಲಕಲ್ಲೋಲ ಮಾಡಲು ಹೊರಟಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ಈ ಮಸೂದೆ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿರುವ ಅವರು, ಗೋಹತ್ಯೆ ಮಸೂದೆಯನ್ನು ಜೆಡಿಎಸ್ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 1964ರ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದು, ಕಾಯ್ದೆಯಲ್ಲಿರುವ ನಿಬಂಧನೆಗಳನ್ನು ಉಲ್ಲಂಘಿಸಿದವರ ಮೇಲೆ ವಿಧಿಸಬಹುದಾದ ದಂಡ, ಜುಲ್ಮಾನೆ ಇತರ ದಂಡನೆಗಳ ಬಗ್ಗೆ ಸೆಕ್ಷನ್ 12, 13 ಮೊದಲಾದವುಗಳಲ್ಲಿ ಅವಕಾಶವಿದೆ.
ಆದರೂ ಬಿಜೆಪಿ ಸರ್ಕಾರ 2010ರಲ್ಲಿ ಮಂಡನೆ ಮಾಡಿದ್ದ ವಿಧೇಯಕದಲ್ಲಿ ಈ ಕಾಯ್ದೆಯಲ್ಲಿನ ದಂಡನೆ, ಜುಲ್ಮಾನೆ ಇತರೆ ದಂಡನೆಗಳನ್ನು ಒಂದರಿಂದ 7 ಪಟ್ಟು ಹೆಚ್ಚಳ ಮಾಡಿತ್ತು.
ಕೆಲವೊಂದು ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಗೋಹತ್ಯೆಗೆ ವಿಧಿಸಬಹುದಾದ ದಂಡದ ಪ್ರಮಾಣವನ್ನು ಹೆಚ್ಚಳ ಮಾಡಿತ್ತು.
ಆಗ ವಿಧೇಯಕವನ್ನು ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ವಿರೋಧಿಸಿ ಸದನದಲ್ಲಿ ಧರಣಿ ನಡೆಸಲಾಗಿತ್ತು. ಧರಣಿಯ ನಡುವೆ ಸದನದಲ್ಲಿ ಬಿಜೆಪಿ ಸರ್ಕಾರ ವಿಧೇಯಕವನ್ನು ಪಾಸ್ ಮಾಡಿಕೊಂಡು ರಾಜ್ಯಪಾಲರ ಅನುಮೋದನೆಗೆ ಕಳುಹಿಸಿಕೊಟ್ಟಿದ್ದರು.
ಅಂದಿನ ರಾಜ್ಯಪಾಲರನ್ನು ನನ್ನ ಪಕ್ಷದ ಮುಖಂಡರೊಂದಿಗೆ ನಾವು ಭೇಟಿ ಮಾಡಿ ವಿಧೇಯಕಕ್ಕೆ ಅಂಗೀಕಾರ ನೀಡಬಾರದೆಂದು ಮನವಿ ಮಾಡಿದ್ದೆವು. `ಬಿಜೆಪಿಗೆ ಜೆಡಿಎಸ್ ಬೆಂಬಲ’ದ ಬಗ್ಗೆ ಬಸವರಾಜ ಹೊರಟ್ಟಿ ಸ್ಪಷ್ಟನೆ
ವಿಧೇಯಕದಲ್ಲಿ ಅಡಕವಾಗಿರುವ ಕೆಲವೊಂದು ನಿಬಂಧನೆಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿಗಳ ಅಂಗೀಕಾರ ಬೇಕೆಂದು ರಾಜ್ಯಪಾಲರು ಕಳುಹಿಸಿಕೊಟ್ಟಿದ್ದರು.
ಕೇಂದ್ರ ಸರ್ಕಾರ ಈ ವಿಧೇಯಕವನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳುಹಿಸಿದಾಗ ಮತ್ತೆ ನಮ್ಮ ಪಕ್ಷದ ಮುಖಂಡರೊಂದಿಗೆ ನಾನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಮಸೂದೆಯಲ್ಲಿರುವ ಹಲವು ನಿಬಂಧನೆಗಳು, ಸಮಾಜದಲ್ಲಿರುವ ಸಮುದಾಯಗಳಿಗೆ ಮತ್ತು ರೈತ ಸಮುದಾಯಕ್ಕೆ ಮಾರಕ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೆವು.
ನಂತರ ರಾಜ್ಯದಲ್ಲಿ ಉಂಟಾದ ಸರ್ಕಾರ ಬದಲಾವಣೆಯಲ್ಲಿ ಈ ಮಸೂದೆಯನ್ನು ವಾಪಸ್ ಪಡೆದು ನಿಷ್ಕಿಕ್ರಿಯಗೊಳಿಸಲಾಗಿದೆ. ಆದರೂ ಬಿಜೆಪಿ ಸರ್ಕಾರ ಮತ್ತೊಮ್ಮೆ ಈ ವಿಧೇಯಕವನ್ನು ವಿಧಾನಮಂಡಲದಲ್ಲಿ ಮಂಡಿಸಿದೆ ಎಂದು ದೇವೇಗೌಡರು ಟೀಕಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









