ಬೆಂಗಳೂರು: ಸಾರಿಗೆ ನೌಕರರ ನಾಲ್ಕು ದಿನಗಳ ಮುಷ್ಕರ ಡೀ ರಾಜ್ಯದ ಸಾರಿಗೆ ವ್ಯವಸ್ಥೆಯನ್ನೇ ಸ್ತಬ್ದಗೊಳಿಸಿತ್ತು. ಎಲ್ಲಾ ನೌಕರರಂತೆ ತಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ನಾಲ್ಕು ದಿನಗಳ ಮುಷ್ಕರ ನಡೆಸಿ, ಸರ್ಕಾರದಿಂದ 9 ಬೇಡಿಕೆಗಳ ಈಡೇರಿಸಿಕೊಂಡಿದ್ದಾರೆ. ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದ ಕೋಟ್ಯಂತರ ಜನತೆ ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಅದರ ಜತೆಗೆ ರಾಜ್ಯದ ನಾಲ್ಕು ಸಾರಿಗೆ ನಿಮಗಳೂ ಬರೋಬ್ಬರಿ 54 ಕೋಟಿ ರೂ. ನಷ್ಟ ಅನುಭವಿಸಿವೆ.

ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ಸೇರಿದಂತೆ ರಾಜ್ಯಾದ್ಯಂತ 1.40 ಲಕ್ಷ ನೌಕರರು ಮುಷ್ಕರ ನಡೆಸಿದ್ದರು. 4 ದಿನಗಳ ಕಾಲ ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ ಸಾರಿಗೆ ಇಲಾಖೆಗೆ 54 ಕೋಟಿ ರೂ. ನಷ್ಟವಾಗಿದೆ. ಮುಷ್ಕರದ ನಡುವೆಯೂ ಕೆಲವು ಸಾರಿಗೆ ಬಸ್‍ಗಳ ಓಡಾಟದಿಂದ ಮೂರು ಕೋಟಿ ರೂ. ಆದಾಯ ಬಂದಿದೆಯಂತೆ.
ನಾಲ್ಕು ನಿಗಮಗಳ ನಷ್ಟದ ಮೊತ್ತ-53.4 ಕೋಟಿ ರೂ.
ಕೆಎಸ್‌ಆರ್‌ಟಿಸಿ-16 ಕೋಟಿ ರೂ.
ಬಿಎಂಟಿಸಿ-8.4 ಕೋಟಿ ರೂ
ಈಶಾನ್ಯ ಸಾರಿಗೆ-15 ಕೋಟಿ ರೂ.
ವಾಯುವ್ಯ ಸಾರಿಗೆ-3.5 ಕೋಟ ರೂ.
ಕೆಎಸ್‌ಆರ್‌ಟಿಸಿಯಿಂದ ಪ್ರತಿದಿನ 6,000 ಬಸ್‍ಗಳ ಸಂಚಾರದಿಂದ ಪ್ರತಿದಿನ 4 ಕೋಟಿ ರೂ. ಆದಾಯ ಬರುತ್ತದೆ. ನಾಲ್ಕು ದಿನಗಳ ಮುಷ್ಕರದಿಂದ ಕೆಎಸ್‌ಆರ್‌ಟಿಸಿಗೆ ಅಂದಾಜು 16 ಕೋಟಿ ರೂ. ನಷ್ಟವಾಗಿದೆ.
ಬಿಎಂಟಿಸಿಯಿಂದ ಪ್ರತಿದಿನ 4,900 ರಿಂದ 5,000 ಬಸ್‍ಗಳು ಸಂಚಾರ ಮಾಡುತ್ತವೆ. ಬಿಎಂಟಿಸಿಯ ಪ್ರತಿದಿನದ ಆದಾಯ 2.10 ಕೋಟಿ ರೂ. ನಾಲ್ಕು ದಿನದ ಮುಷ್ಕರದಿಂದ ಬಿಎಂಟಿಸಿಯಲ್ಲಿ 8.4 ಕೋಟಿ ರೂ. ನಷ್ಟವಾಗಿದೆ.
ಈಶಾನ್ಯ ರಸ್ತೆ ಸಾರಿಗೆಯಿಂದ ಪ್ರತಿದಿನ 3775 ಬಸ್ಸುಗಳು ಸಂಚಾರ ಮಾಡುತ್ತಿವೆ. ಮುಷ್ಕರವಿದ್ದರೂ ಕೆಲವು ಬಸ್‍ಗಳು ಸಂಚಾರ ನಡೆಸಿದ್ದವು. ಆದರೂ ಮುಷ್ಕರದಿಂದ 15 ಕೋಟಿ ರೂ. ನಷ್ಟವಾಗಿದೆ.
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರತಿದಿನ 3,402 ಬಸ್‍ಗಳನ್ನು ಓಡಿಸುತ್ತದೆ. ದಿನದ ಆದಾಯ 3.5 ಕೋಟ ರೂ. ಆಗಿದ್ರೆ, ನಾಲ್ಕು ದಿನದ ಲಾಸ್ 14 ಕೋಟಿ ರೂ. ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟಾರೆ ವಾಯುವ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ರಸ್ತೆ ಸಾರಿಗೆ ನಿಗಮ, ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸಾರಿಗೆ ನೌಕರರ ಮುಷ್ಕರದಿಂದಾಗಿ 4 ದಿನಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು 53.4 ಕೋಟಿ ರೂ. ನಷ್ಟ ಉಂಟಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








