ಪೂರ್ಣ ಸುದ್ದಿಗಾಗಿ ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ
ಸಹೋದ್ಯೋಗಿಗಳ ಸ್ನಾನದ ಧೃಶ್ಯ ಸೆರೆ.. ಪ್ರಿಯಕರನಿಗೆ ರವಾನೆ… ಕಾರಣವೇ ವಿಚಿತ್ರ…!
ಬೆಂಗಳೂರು: ನರ್ಸ್ ಒಬ್ಬಳು ತನ್ನ ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ನಿಗೂಢವಾಗಿ ಚಿತ್ರೀಕರಿಸಿ ಅದನ್ನ ತನ್ನ ಪ್ರಿಯಕರನಿಗೆ ರವಾನಿಸುತ್ತಿದ್ದಳು. ಅಶ್ವಿನಿ ಎಂಬಾಕೆ ಇಂತಹ ನೀಚ ಕೆಲಸ ಮಾಡುತ್ತಿದ್ದಳು. ಆದ್ರೆ ಈಕೆ ಈ ರೀತಿ ಮಾಡುತ್ತಿದ್ದ ಕಾರಣವೇ ಶಾಕಿಂಗ್ : ಹೌದು.. ಸಾಮಾನ್ಯವಾಗಿ, ದುಡ್ಡಿಗಾಗಿ ಈ ರೀತಿಯಾದ ವಿಡಿಯೋ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡೋದು, ಹೆಚ್ಚಂದ್ರೆ ಕೆಲ ಕಾಮುಕರು ಇಂತವುಗಳನ್ನ ಮಾಡೋದು , ಇಲ್ಲ ಸೇಡಿಗಾಗಿ ಈ ರೀತಿ ಮಾಡಿರೋ ಪ್ರಕರಣಗಳ ಬಗ್ಗೆ ನೋಡೀರುತ್ತೇವೆ. ಆದ್ರೆ ಈ ಲೇಡಿ ಯಾಕೆ ಹೀಗೆ ಮಾಡಿದ್ಲು ಅನ್ನೋ ಕಾರಣ ನಿಜಕ್ಕೂ ವಿಚಿತ್ರ..
ಮಿಸ್ ಆಗಿ ಮತ್ತೊಬ್ಬರ ಖಾತೆಗೆ 18.60 ಲಕ್ಷ ರೂ : ದುಡ್ಡು ವಾಪಸ್ ಕೇಳಿದ ಮಹಿಳೆಗೆ ಕಾದಿತ್ತು ಶಾಕ್..!
ಮಿಸ್ ಆಗಿ ಮತ್ತೊಬ್ಬರ ಖಾತೆಗೆ 18.60 ಲಕ್ಷ ರೂ : ದುಡ್ಡು ವಾಪಸ್ ಕೇಳಿದ ಮಹಿಳೆಗೆ ಕಾದಿತ್ತು ಶಾಕ್..!
ಬೆಂಗಳೂರು : ನಾವು ಎಷ್ಟೋ ಬಾರಿ ಮಿಸ್ ಆಗಿ ಯಾರಿಗೋ ಕಳುಹಿಸಬೇಕಾಗಿದ್ದ ಹಣವನ್ನ ಮತ್ಯಾರಿಗೋ ಕಳುಗಹಿಸುತ್ತೇವೆ.. ಕೆಲವೊಂದು ವಾಪಸ್ ಬರುತ್ತೆ. ಕೆಲವೊಮ್ಮೆ ಕಳೆದುಕೊಂಡಿದ್ದು ನೀರಿನಲ್ಲಿ ಹೋಮವಾದಂತೆ ಅಷ್ಟೇ ಅಂತ ಬಿಟ್ಟು ಬಿಡ್ತೇವೆ. ಆದ್ರೆ ಇದೇ ರೀತಿಯಾಗಿ ಮಹಿಳೆಯೊಬ್ಬರು ಒಂದಲ್ಲಾ ಎರೆಡಲ್ಲಾ ಬರೋಬ್ಬರಿ 18.60 ರೂಪಾಯಿ ಹಣವನ್ನ ಕಳೆದುಕೊಂಡಿದ್ದಾರೆ. ತನ್ನ ಸ್ನೇಹಿತಿಗೆ ಹಣ ವರ್ಗಾವಣೆ ಮಾಡೋವಾಗ ಮಿಸ್ ಆಗಿ ಬೇರೊಬ್ಬರ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ತಪ್ಪನ್ನ ಅರಿತು ಹಣ ಹಿಂದಿರುಗಿಸುವಂತೆ ಖಾತೆಯ ಮಾಲೀಕನ ಬಳಿ ಕೇಳಿಕೊಂಡಿದ್ದಾರೆ. ಆದ್ರೆ ಆ ಆಸಾಮಿ ಹಣ ವಾಪಸ್ ಮಾಡೋ ಬದಲು ಹಣ ಕೇಳದಂತೆ ಧಮ್ಕಿ ಹಾಕಿದ್ದಾನೆ.
ಹೆಂಡತಿ ಹುಡುಗಾಟಕ್ಕೆ ಬಲಿಯಾದ ಪತಿ: ಅಸಲಿಗೆ ಆಗಿದ್ದೇನು..!
ಆಂಧ್ರ ಪ್ರದೇಶ: ಪತ್ನಿಯೊಬ್ಬಳ ಹುಡುಗಾಟಕ್ಕೆ ಪತಿ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರದಲ್ಲಿ ನಡೆದಿದೆ. ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪತಿ ಪತ್ನಮಿ ನಡುವಿನ ಗಲಾಟೆ ಪತಿಯ ಸಾವಿನಲ್ಲಿ ದುರಂತ ಅಂತ್ಯ ಕಂಡಿದೆ.28 ವರ್ಷದ ವೆಂಕಟ ರವಿಕುಮಾರ್ ಹಾಗೂ ಪತ್ನಿ ಪುಷ್ಪಶಿವ ಎಂಬುವವರು ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು. ಅವರಿಗೆ 11 ತಿಂಗಳ ಮಗು ಇದೆ. ಇವರು ಮಂಡಿಕುಡುರು ಮಂಡಲದ ಪೆದ್ದಪಟ್ನಂ ಗ್ರಾಮದಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ ಯಾವುದೋ ವಿಚಾರವಾಗಿ ದಂಪತಿ ನಡುವೆ ಕಲಹ ಉಂಟಾಗಿದೆ ಎನ್ನಲಾಗ್ತಿದೆ. ಬಳಿಕ ಬೆಳಗಾಗುವಷ್ಟರಲ್ಲಿ ರವಿಕುಮಾರ್ ಪತ್ನಿ ಮನೆಯಿಂದ ನಾಪತ್ತೆಯಾಗಿದ್ರು. ಇತ್ತ ಪತ್ನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾನೆ. ಆದ್ರೆ ಎಲ್ಲೂ ಸಿಕ್ಕಿಲ್ಲ. ಬಳಿಕ ಗೋದಾವರಿ ನದಿ ದಡದಲ್ಲಿ ಪತ್ನಿಯ ಚಪ್ಪಲಿಗಳು ಕಂಡುಬಂದಿವೆ. ಇದರಿಂದ ಗಾಬರಿಗೊಂಡ ವೆಂಕಟ ಪತ್ನಿ ಆತ್ಮಹತ್ಯೆಗೆ ಶರಣಾಗಿರಬೇಕೆಂಬ ನಿರ್ಧಾರಕ್ಕೆ ಬಂದಿದ್ದಾನೆ.
ಲವರ್ ನ ಬಿಡಲ್ಲ ಅಂದ ಮಗನ ಮೇಲಿನ ಸಿಟ್ಟಿಗೆ ಹೀಗಾ ಮಾಡೋದು..!
ಚೆನ್ನೈ: ಕೆಲವೊಮ್ಮೆ ಪ್ರೀತಿಗೆ ಮನೆಯವರಿಂದ ವಿರೋಧ ವ್ಯಕ್ತವಾಗೋದು, ಸಾಯೋದಾಗಿ ಬೆದರಿಕೆಯೊಡ್ಡೋದು, ಹೆಚ್ಚಂದ್ರೆ ಹೊಡೆಯೋದು ಬಡಿಯೋದು ವಾರ್ನಿಂಗ್ ಕೊಡೋದು ಸಹಜ.. ಆದ್ರೆ ಗರ್ಲ್ ಫ್ರೆಂಡ್ ಜತೆ ಬ್ರೇಕ್ ಅಪ್ ಮಾಡಿಕೋ ಅಂತ ಎಷ್ಟೇ ಹೇಳಿದ್ರು, ಮಗ ಮಾತು ಕೇಳದ ಕಾರಣಕ್ಕೆ ಈ ತಂದೆ ಮಾಡಿದ್ದನ್ನ ನೋಡಿದ್ರೆ ಶಾಕ್ ಆಗುತ್ತೆ. ಆಟೋ ಚಾಲಕನಾಗಿರೋ 52 ವರ್ಷದ ವ್ಯಕ್ತಿ ತನ್ನ ಮಗನ ಮೇಲಿನ ಸಿಟ್ಟಿಗೆ 7 ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಹೌದು ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಪುತ್ರನ ಬೈಕ್ ಹಾಗೂ ಇತರೇ 6 ಗಾಡಿಗಳಿಗೂ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದಾನೆ.
6 ವರ್ಷದ ಮಗನ ಆ್ಯಪ್ ಖರೀದಿ – ತಾಯಿಯ ಖಾತೆಯಿಂದ 11ಲಕ್ಷ ರೂಪಾಯಿ ಕಡಿತ – ಹಣ ಹಿಂತಿರುಗಿಸಲು ಆಪಲ್ ನಿರಾಕರಣೆ
ನ್ಯೂಯಾರ್ಕ್, ಡಿಸೆಂಬರ್15: ಜನರು ಕೆಲವೊಮ್ಮೆ ತಮ್ಮ ಮಕ್ಕಳಿಂದ ಹಣಕಾಸಿನ ನಷ್ಟಕ್ಕೆ ಬಲಿಯಾಗುತ್ತಾರೆ. ಜೆಸ್ಸಿಕಾ ಜಾನ್ಸನ್ ಎಂಬಾಕೆಯ ಖಾತೆಯಿಂದ, ಅಂದಾಜು 11 ಲಕ್ಷ ರೂ ಕಡಿತಗೊಳಿಸಲಾಗಿದೆ ಮತ್ತು ಆಪಲ್ ಗೆ ಪಾವತಿಸಲಾಗಿದೆ. ಹಣ ಏಕೆ ಕಡಿತಗೊಂಡಿದೆ ಎಂದು ವಿಚಾರಿಸಿದಾಗ ಆಕೆಯ ಆರು ವರ್ಷದ ಮಗ ಜಾರ್ಜ್ ಜಾನ್ಸನ್ ಆಪಲ್ ಆಪ್ ಸ್ಟೋರ್ ಅಪ್ಲಿಕೇಶನ್‌ನಲ್ಲಿ ಆ್ಯಪ್ ಖರೀದಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆಕೆಯ ಖಾತೆಯಿಂದ ಹಣವನ್ನು ಕಡಿತಗೊಳಿಸಲಾಗಿರುವುದು ತಿಳಿದು ಬಂದಿದೆ. ಈ ಘಟನೆ ನ್ಯೂಯಾರ್ಕ್ ನಲ್ಲಿ ನಡೆದಿದೆ.
ಪೂರ್ಣ ಸುದ್ದಿಗಾಗಿ ( ಸಂಕ್ಷಿಪ್ತ ವಿವರಣೆ) ಲಿಂಕ್ ಗಳನ್ನ ಕ್ಲಿಕ್ ಮಾಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








