ಕೊರೊನಾ ಎಫೆಕ್ಟ್ ನಿಂದ ದೇಶವೇ ಲಾಕ್ ಡೌನ್ ಆಗಿದೆ. ಇದರ ಬಿಸಿ ಸಾರ್ವಜನಿಕರಿಗೆ ತಟ್ಟಿದೆ. ಅಗತ್ಯ ವಸ್ತುಗಳನ್ನು ಪಡೆಯಲು ಮುಗಿ ಬೀಳುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ವ್ಯಾಪಾರಿಗಳು ದುಪ್ಪಟು ಬೆಲೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ಸುಲಿಗೆ ಮಾಡುತ್ತಿದ್ದಾರೆ. ಲಾಕ್ ಡೌನ್ ಹಿನ್ನೆಯಲ್ಲಿ ಊರುಗಳ ಮಾರುಕಟ್ಟೆ ಬಂದ್ ಮಾಡಲಾಗಿದೆ. ಹಾಗಾಗಿ ತಳ್ಳುವ ಗಾಡಿ ಮತ್ತು ವಾರ್ಡ್ ಅಂಗಡಿಗಳಲ್ಲಿ ತರಕಾರಿ ಹಾಗೂ ದಿನಸಿ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ಗ್ರಾಹಕರ ಸುಲಿಗೆ ಮಾಡುತ್ತಿದ್ದಾರೆ. ಒಂದೆಡೆ ತರಕಾರಿ ಬೆಲೆ ದುಪ್ಪಟ್ಟು, ಮತ್ತೊಂದೆಡೆ ದಿನಸಿ ದುಪ್ಪಟ್ಟು. ಇದರಿಂದ ಜನರಿಗೆ ಸಂಕಷ್ಟ ಎದುರಾಗಿದೆ. ಹಣ ಹೆಚ್ಚು ಪಡೆದರು ಸರಿಯಾದ ತರಕಾರಿ ನೀಡಲಾಗುತ್ತಿಲ್ಲ, ಕಳಪೆ ಮಟ್ಟದ ತರಕಾರಿ ಹೆಚ್ಚಿನ ಬೆಲೆಗೆ ನೀಡಲಾಗುತ್ತಿದೆ.
ಸರ್ಕಾರ ಮಾತ್ರ ದಿನ ಬಳಕೆ ಅಗತ್ಯ ವಸ್ತುಗಳು ಸಿಗುತ್ತವೆ. ಮನೆಯಿಂದ ಯಾರು ಹೊರ ಬರಬೇಡಿ ಎಂದು ಹೇಳುತ್ತಿದೆ. ಹಾಗಾಗಿ ಹಣ ಹೆಚ್ಚು ನೀಡಿ ಕಳಪೆಮಟ್ಟ ತರಕಾರಿ ಪಡೆಯುವ ಪರಿಸ್ಥಿತಿ ಸಾರ್ವಜನಿಕರಿಗೆ ಎದುರಾಗಿದೆ. ಅಗತ್ಯ ವಸ್ತುಗಳು ದುಪ್ಪಟು ಬೆಲೆಗೆ ಮಾರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸರ್ಕಾರ ಸಹ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ. ಆದರೂ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವುದು ವ್ಯಾಪಾರಿಗಳು ಬಿಡುತ್ತಿಲ್ಲ. ಇದು ಹೀಗೆ ಮುಂದುವರೆದರೆ ಸಾರ್ವಜನಿಕರಿಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ಹಾಗಾಗಿ ಸರ್ಕಾರ ಈ ಬಗ್ಗೆ ಹೆಚ್ಚು ಗಮನ ನೀಡಬೇಕು








