ಜಪಾನ್ ನ ಡೆಡ್ಲಿ ಟ್ವಿಟ್ಟರ್ ಕಿಲ್ಲರ್ ಗೆ ಕೊನೆಗೂ ಮರಣ ದಂಡನೆ..!
ಇಡೀ ಜಪಾನ್ ಅನ್ನೇ ಬೆಚ್ಚಿ ಬೀಳಿಸಿದ್ದ ಟ್ವಿಟ್ಟರ್ ಸೀರಿಯಲ್ ಕಿಲ್ಲರ್ ಟಕಹಿರೋ ಶಿರೈಷಿಗೆ ಟೋಕಿಯೋ ನ್ಯಾಯಾಲಯವು ಗಲ್ಲುಶಿಕ್ಷೆ ವಿಧಿಸಿದೆ.
ಈತ ಟ್ವಿಟರ್ ಬಳಸಿಕೊಂಡು 9 ಮಂದಿಯ ಜೀವ ತೆಗೆದಿದ್ದ. ಟ್ವೀಟರ್ ನಲ್ಲಿ ಪರಿಚಯವಾದ ಯುವ ಸಂತ್ರಸ್ತರನ್ನು ಹತ್ಯೆಗೈದಿದ್ದ 27 ವರ್ಷದ ಟಕಹಿರೋ ಶಿರೈಷಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾನೆ. ಈ ಸೀರಿಯಲ್ ಕಿಲ್ಲರ್ ಹತ್ಯೆ ಮಾಡಿರುವ 9 ಮಂದಿಯ ಪೈಕಿ 8 ಮಂದಿ ಯುವತಿಯರಾಗಿದ್ರೆ ಓರ್ವ ಯುವಕನಾಗಿದ್ದಾನೆ.
ಅಷ್ಟಕ್ಕೂ ಈತ ಏನ್ ಮಾಡ್ತಾಯಿದ್ದ.
ಈತ ಟ್ವೀಟರ್ ಮೂಲಕ ಜಜೀವನದಲ್ಲಿ ಜಿಗುಪ್ಸೆಗೊಂಡಿರುವಂತವರನ್ನ ಹುಡುಕುತ್ತಿದ್ದ. ಅವರಿಗೆ ಆತ್ಮಹತ್ಯೆಗೆ ಪ್ರಚೋದಿಸುತ್ತಿದ್ದ.. ನಿಮಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಅನ್ನಿಸಿದರೆ, ನಾನು ನಿಮಗೆ ನೆರವು ನೀಡುತ್ತೇನೆ ಎಂದು ಹೇಳಿಕೊಂಡು ಕೆಲ ಸಂತ್ರಸ್ತರನ್ನ ಆಕರ್ಷಿಸುತ್ತಿದ್ದ. ಈತನ ಮಾತು ನಂಬಿ ಬಂದವರ ಕಥೆ ಫಿನಿಷ್ ಮಾಡ್ತಿದ್ದ.
‘ಮಾಸ್ಕ್ ಬೇಡ’ ವೆಂದ ಮೋದಿ : ವಿಡಿಯೋ ಸಖತ್ ಟ್ರೋಲ್
ಈತ ಸಿಕ್ಕಿಬಿದ್ದಿದ್ದು ಹೇಗೆ..?
ಯಾವ ಟ್ವಿಟ್ಟರ್ ಬಳಸಿ ಜನರ ಕೊಲೆ ಮಾಡಿದ್ದನೋ ಅದೇ ಟ್ವಿಟ್ಟರ್ ನೆರವಿನಿಂದ ಪೊಲೀಸರು ಹಂತಕನಿಗೆ ಗಾಳ ಹಾಕಿದ್ದಾರೆ. ಫೆಬ್ರವರಿಯಲ್ಲಿ ಶಂಕಿತ ಹಂತಕನನ್ನು ಸಂಘಟಿತ ಅಪರಾಧದ ಆರೋಪದಡಿ ಬಂಧಿಸಿದ್ದರು.
ಈತ ಹೀಗೆ ಮಾಡಿದ್ದೇಕೆ..?
ಇನ್ನೂ ಈತ ಹೇಗೆ ಮಾಡಿದ್ದೇಕೆ ಅನ್ನೋದನ್ನ ನೋಡೋದಾದ್ರೆ , ಈತ ನಿರುದ್ಯೋಗಿ ಆಗಿದ್ದ. ಕೆಲಸ ಸಿಗದೇ ಜಿಗುಪ್ಸೆಗೆ ಒಳಗಾಗಿದ್ದ. ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಇದೇ ಜಿಗುಪ್ಸೆಯಲ್ಲೇ ಈತ ಸೀರಿಯಲ್ ಕಿಲ್ಲರ್ ಕಸುಬನ್ನೇ ವೃತ್ತಿಯಾಗಿಸಿಕೊಂಡ. ಒಟ್ಟಾರೆ ನಿರುದ್ಯೋಗ ಮನುಷ್ಉನಿಂದ ಏನೆಲ್ಲಾ ಮಾಡಿಸುತ್ತೆ ಅನ್ನೋದಕ್ಕೆ ಇದು ಉದಾಹರಣೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel