ಸಾಲವನ್ನು ಮರುಪಾವತಿಸಲು ತನ್ನ ಮೂತ್ರಪಿಂಡವನ್ನೇ ಮಾರಾಟಕಿಟ್ಟ ! repay loan selling kidney
ಕುಲ್ಗಾಂ, ಡಿಸೆಂಬರ್18: 91 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ, ಕುಲ್ಗಾಂನ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಮೂತ್ರಪಿಂಡವನ್ನು ಮಾರಾಟ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ವ್ಯಕ್ತಿ ತನ್ನ ಮೂತ್ರಪಿಂಡವನ್ನು ಮಾರಾಟ ಮಾಡುವ ಜಾಹೀರಾತನ್ನು ಶ್ರೀನಗರ ಮೂಲದ ಕಾಶ್ಮೀರ ರೀಡರ್ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. repay loan selling kidney
ವ್ಯಕ್ತಿಯನ್ನು ಸಬ್ಜರ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿದೆ. ಖಾನ್ ಕುಲ್ಗಂ ಜಿಲ್ಲೆಯ ಖಾಜಿಗುಂಡ್‌ನ ನುಸು ಗ್ರಾಮದ ನಿವಾಸಿ. 28 ವರ್ಷದ ವ್ಯಕ್ತಿ ಈ ವ್ಯಕ್ತಿ ಕಾರು ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದಾರೆ.
ನಾನು ವ್ಯವಹಾರದಲ್ಲಿ ಎಲ್ಲವನ್ನೂ ಕಳೆದುಕೊಂಡಿರುವುದರಿಂದ ನನ್ನ ಮೂತ್ರಪಿಂಡವನ್ನು ಮಾರಾಟ ಮಾಡಲು ನಾನು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಖಾನ್ ನೀಡಿದ ಜಾಹೀರಾತಿನಲ್ಲಿ, ನಾನು ನನ್ನ ಮೂತ್ರಪಿಂಡವನ್ನು ಮಾರಾಟ ಮಾಡಲು ಬಯಸುತ್ತೇನೆ ಏಕೆಂದರೆ ನಾನು ವ್ಯವಹಾರದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಆದರೆ 90 ಲಕ್ಷ ರೂಪಾಯಿಗಳ ಸಾಲ ನನಗೆ ಇದೆ. ಹಾಗಾಗಿ ಮೂತ್ರಪಿಂಡದ ಅಗತ್ಯವಿರುವ ಯಾರಾದರೂ ನನ್ನನ್ನು ಸಂಪರ್ಕಿಸಲು ನಾನು ವಿನಂತಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ರೈಲಿನ ಮೇಲೆ ಸೆಲ್ಫಿ ಕ್ಲಿಕ್ ಮಾಡಲು ಹೋಗಿ 9ನೇ ತರಗತಿ ವಿದ್ಯಾರ್ಥಿ ಸಾವು
ಸರ್ಕಾರಿ ನೋಂದಾಯಿತ ಗುತ್ತಿಗೆದಾರನಾಗಿಯೂ ಕೆಲಸ ಮಾಡುತ್ತಿರುವ ಖಾನ್, ಕಾಶ್ಮೀರದಲ್ಲಿ ಎರಡು ಲಾಕ್‌ಡೌನ್‌ಗಳನ್ನು ವಿಧಿಸಿದ ನಂತರ ತೀವ್ರ ನಷ್ಟ ಅನುಭವಿಸಿದ್ದಾರೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಮೊದಲ ಲಾಕ್‌ಡೌನ್ ವಿಧಿಸಲಾಯಿತು ಮತ್ತು ಕೋವಿಡ್-19 ಸಾಂಕ್ರಾಮಿಕದ ದೃಷ್ಟಿಯಿಂದ ಎರಡನೆಯ ಲಾಕ್ ಡೌನ್ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಖಾನ್ ಎಲ್ಲವನ್ನೂ ಕಳೆದುಕೊಂಡಿದ್ದು, ಸಾಲಗಳನ್ನು ತೀರಿಸಲು ಹಣವಿಲ್ಲ ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಿದ್ದಾರೆ. ತನ್ನ ಕುಟುಂಬದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಖಾನ್ ಗೆ ಬ್ಯಾಂಕಿನಲ್ಲಿ 61 ಲಕ್ಷ ರೂ ಮತ್ತು ಜನರ ಬಳಿ 30 ಲಕ್ಷ ರೂ ಸಾಲವಿದೆ.
ತನ್ನ ಕಿಡ್ನಿ ಮಾರಾಟ ಮಾಡುವ ನಿರ್ಧಾರವನ್ನು ಕುಟುಂಬಕ್ಕೆ ತಿಳಿಸಿದ್ದೇನೆ ಎಂದು ಖಾನ್ ಹೇಳಿದ್ದಾರೆ. ಖಾನ್ ನ ಕಿರಿಯ ಸಹೋದರ ಎರಡೂ ಕುಟುಂಬಗಳ ಅವಶ್ಯಕತೆ ಪೂರೈಸಲು ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಖಾನ್ ಹೇಳಿದ್ದು, ಜಾಹೀರಾತು ಪೋಸ್ಟ್ ಮಾಡಿದ ನಂತರ ಖರೀದಿದಾರರಿಂದ ಕೆಲವು ಕರೆಗಳು ಬಂದಿವೆ ಎಂದು ಅವರು ಹೇಳಿದ್ದಾರೆ.
ಖರೀದಿದಾರರಲ್ಲಿ ಒಬ್ಬರು 20 ಲಕ್ಷ ರೂ ಮತ್ತು ಇನ್ನೊಬ್ಬ ವ್ಯಕ್ತಿ 25 ಲಕ್ಷ ರೂ. ನೀಡಲು ಮುಂದಾಗಿದ್ದಾರೆ ಎಂದು ಖಾನ್ ಹೇಳಿದ್ದಾರೆ. ಆದಾಗ್ಯೂ, ಅವರು ಈ ಪ್ರಸ್ತಾಪವನ್ನು ಒಪ್ಪುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದು, ಇನ್ನಷ್ಟು ಹೆಚ್ಚಿನ ಮೊತ್ತವನ್ನು ಪಡೆಯಲು ಚರ್ಚೆಗಳನ್ನು ನಡೆಸುತ್ತೇನೆ ಎಂದು ಖಾನ್ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಟೊಮೆಟೊ ಕೆಚಪ್ ನ ಅದ್ಭುತ ಪ್ರಯೋಜನಗಳುhttps://t.co/AhldkJyvE9
— Saaksha TV (@SaakshaTv) December 17, 2020
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ..ಅಡಿಕೆಯಿಂದ ಚಾಕಲೇಟ್ ಉತ್ಪಾದಿಸಲು ಕ್ಯಾಂಪ್ಕೋ ಚಿಂತನೆ !https://t.co/XGZmzEctYG
— Saaksha TV (@SaakshaTv) December 17, 2020