ರೈಲಿನ ಮೇಲೆ ಸೆಲ್ಫಿ ಕ್ಲಿಕ್ ಮಾಡಲು ಹೋಗಿ 9ನೇ ತರಗತಿ ವಿದ್ಯಾರ್ಥಿ ಸಾವು student died electric wire
ಪರಲಖೇಮುಂಡಿ, ಡಿಸೆಂಬರ್17: ಒಡಿಶಾದ ಗಜಪತಿ ಜಿಲ್ಲೆಯ ಪರಲಖೇಮುಂಡಿಯಲ್ಲಿ 9 ನೇ ತರಗತಿ ವಿದ್ಯಾರ್ಥಿ ಬುಧವಾರ ಮೃತಪಟ್ಟಿದ್ದಾನೆ. ರೈಲಿನ ಮೇಲೆ ಸೆಲ್ಫಿ ಕ್ಲಿಕ್ ಮಾಡಲು ಪ್ರಯತ್ನಿಸುತ್ತಿದ್ದಾಗ ಲೈವ್ ಎಲೆಕ್ಟ್ರಿಕ್ ತಂತಿ ತಗುಲಿ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ. student died electric wire

ಮೃತ ಅಪ್ರಾಪ್ತ ಬಾಲಕನನ್ನು ಸಿ.ಎಚ್.ಸುರಿಯಾ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಅಪ್ರಾಪ್ತ ಹುಡುಗ ಪರಾಲಖೇಮುಂಡಿ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೋವಿಡ್ ವಿಶೇಷ ರೈಲಿನ ಬೋಗಿಯ ಮೇಲೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ.
ಸಹಾನುಭೂತಿ ಆಧಾರದ ಮೇಲೆ ಉದ್ಯೋಗ ಪಡೆಯಲು ವಿವಾಹಿತ ಮಗಳಿಗೂ ಅವಕಾಶ – ಕರ್ನಾಟಕ ಹೈಕೋರ್ಟ್ ನ ಮಹತ್ವದ ತೀರ್ಪು
ಲೈವ್ ಎಲೆಕ್ಟ್ರಿಕ್ ತಂತಿಯ ಸಂಪರ್ಕದಿಂದ ವಿದ್ಯುದಾಘಾತಕ್ಕೊಳಗಾದ ನಂತರ ಆತ ತೀವ್ರವಾಗಿ ಗಾಯಗೊಂಡನು. ಆತನನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರೂ ಆತ ಸಾವನ್ನಪ್ಪಿದ್ದಾನೆ.

ಘಟನೆಯಲ್ಲಿ ರೈಲಿನ ಬೋಗಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಮಾಹಿತಿ ಪಡೆದ ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1338873183366119425?s=19
https://twitter.com/SaakshaTv/status/1338873716768313345?s=19








