ಬಳ್ಳಾರಿ: 2017ರಲ್ಲಿ ಕಾರ್ಣಿಕೋತ್ಸವ ಸಮಯದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿದ್ದ ಕಾರಣಕ್ಕೆ ದೋಷ ಪರಿಹಾರಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೈಲಾರಲಿಂಗೇಶ್ವರ ಸ್ವಾಮಿಗೆ ಬೆಳ್ಳಿಗೆ ಹೆಲಿಕಾಪ್ಟರ್ ನೀಡಿ ಹರಕೆ ಸಲ್ಲಿಸಿದ್ದಾರೆ.
ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬಳ್ಳಾರಿ ಜಿಲ್ಲೆಯ ಹೂವಿನಡಗಲಿ ತಾಲೂಕಿನ ಮೈಲಾರಪುರದ ಮೈಲಾರಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್, 2017ರ ದೋಷ ಪರಿಹಾರಕ್ಕೆ ಹೆಲಿಕಾಪ್ಟರ್ ಸೇವೆ ಸಲ್ಲಿಸಿದರು.
2017ರಲ್ಲಿ ಮೈಲಾರ ಕಾರ್ಣಿಕೋತ್ಸವ ಸಮಯದಲ್ಲಿ ಹೆಲಿಕಾಪ್ಟರ್ ಮೂಲಕ ಬಂದಿದ್ದೆ. ಆಗ ಈ ದೇವಾಲಯಕ್ಕೆ ಹೆಲಿಕಾಪ್ಟರ್ ನಲ್ಲಿ ಬರುವಂತಿಲ್ಲ, ದೋಷವಾಗಿದೆ ಎಂದು ಇಲ್ಲಿನ ಗುರುಗಳು ತಿಳಿಸಿದರು. ನಮ್ಮ ಕಾರ್ಯಕರ್ತರು ಹರಕೆ ಮಾಡಿಕೊಂಡು ಬೆಳ್ಳಿ ಹೆಲಿಕಾಪ್ಟರ್ ಮಾಡಿಸಿಕೊಂಡು ದೇವಾಲಯಕ್ಕೆ ನೀಡಿದ್ದಾರೆ. ಇಲ್ಲಿನ ಸಾವಿರಾರು ಜನ ನನಗಾಗಿ ಪೂಜೆ ಸಲ್ಲಿಸಿ ಹರಕೆ ಕಟ್ಟುಕೊಂಡಿದ್ದಾರೆ, ಹೀಗಾಗಿ ಇಲ್ಲಿಗೆ ಬಂದು ದೇವರಲ್ಲಿ ಕ್ಷಮೆಯಾಚಿಸಿ ರಾಜ್ಯದಲ್ಲಿ ನೆಮ್ಮದಿ ನೆಲೆಸಲಿ ಅಂತಾ ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
ಧರ್ಮ ವೈಯಕ್ತಿಕ ವಿಚಾರ, ಅದು ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧ. ಕೆಲವರು ಮನೆಯಲ್ಲೇ ಪೂಜೆ ಮಾಡಿದರೆ ಮತ್ತೇ ಕೆಲವರು ದೇವಾಲಯಕ್ಕೆ ಬರುತ್ತಾರೆ. ರಾಜರು, ಪಾಳೆಗಾರರು, ಋಷಿ ಮುನಿಗಳು ದೇವಾಲಯ ಕಟ್ಟಿ ಜನ ನೆಮ್ಮದಿಯಾಗಿ ಪೂಜೆ ಮಾಡಿ ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸಿದ್ದಾರೆ. ನಾವು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದರು. ಡಿಕೆ ಶಿವಕುಮಾರ್‍ಗೆ ಮಾಜಿ ಸಚಿವ ಪಿ.ಟಿ ಪರಮೇಶ್ವರ್ ನಾಯ್ಕ್ ಸಾಥ್ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel