7 ಕಿ.ಮೀ ಜೋಳಿಗೆಯಲ್ಲಿ ಗರ್ಭಿಣಿಯನ್ನ ಹೊತ್ತು ಸಾಗಿದ ಸ್ವಯಂ ಸೇವಕರು
ಅಮರಾವತಿ : ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಬೊಂಡಪಲ್ಲಿ ಪ್ರದೇಶದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು 7 ಕಿಲೋ ಮೀಟರ್ ವರೆಗೆ ಸ್ವಯಂ ಸೇವಕರು ಹೊತ್ತುಕೊಂಡು ಹೋಗಿ ಆಂಬ್ಯುಲೆನ್ಸ್ ಗೆ ತಲುಪಿಸಿದ್ದಾರೆ.
ನಿನ್ನೆ ಸಂಜೆ ಸುಮಾರಿಗೆ ಬುಡಕಟ್ಟು ಸಮುದಾಯ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ಕೂಡಲೇ ಗರ್ಭಿಣಿಯ ಪತಿ 108ಗೆ ಕರೆ ಮಾಡಿದ್ದಾರೆ. ಆದ್ರೆ ಗರ್ಭಿಣಿ ಇರುವ ಊರಿನ ವರೆಗೂ ಆಂಬುಲೆನ್ಸ್ ಬರಲು ಸರಿಯಾದ ಮಾರ್ಗ ಇರಲಿಲ್ಲ.
ನರೇಂದ್ರ ಮೋದಿ ಆಧುನಿಕ ಭಸ್ಮಾಸುರ : ವಿ.ಎಸ್.ಉಗ್ರಪ್ಪ
ಅಲ್ಲಿನ ಹಿರಿಯರು ದ್ವಿಚಕ್ರ ವಾಹನ ಮೂಲಕ ಗರ್ಭಿಣಿಯನ್ನು ಆಂಬುಲೆನ್ಸ್ ಬಳಿಕೆ ಸೇರಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಇದು ಸಾಧ್ಯವಾಗಲಿಲ್ಲ.
ಆ ಸಂದರ್ಭದಲ್ಲಿ ಗೊಲ್ಲಪಲೆಂ ಗ್ರಾಮದಲ್ಲಿರುವ ಸ್ವಯಂ ಸೇವಕರಾದ ಶ್ರೀ ಹರ್ಷ ಮತ್ತು ಬಾಲಾಜಿ ಜೋಳಿಗೆಯಲ್ಲಿ ಗರ್ಭಿಣಿಯನ್ನು ಹೊತ್ತಿಕೊಂಡು ಆಂಬುಲೆನ್ಸ್ ಇರುವಲ್ಲಿಗೆ ಸಾಗಿಸಿದ್ದಾರೆ. ಈ ಯುವಕ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







