ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ
ಪಂಜಾಬ್ : ಮದುವೆಯೊಂದರಲ್ಲಿ ಮೆಹಂದಿ ಹಾಕಲು ಹೋಗಿದ್ದ ನವವಿವಾಹಿತೆ ಮೇಲೆ ಐವರು ಕಾಮುಕರು ಅತ್ಯಾಚಾರವೆಸಗಿ ಮಾಲ್ ವೊಂದರ ಬಳಿ ಆಕೆಯನ್ನ ಎಸೆದು ಹೋಗಿದ್ದಾರೆ. ಪಂಜಾಬ್ ನ ಲೂಧಿಯಾನದಲ್ಲಿ ಈ ಘಟನೆ ನಡೆದಿದೆ. ಕಲಾನ್ ಗ್ರಾಮದ ಬಳಿ ಅತ್ಯಾಚಾರ ಎಸಗಿರುವ ದುಷ್ಕರ್ಮಿಗಳು ಬಳಿಕ ಆಕೆಯನ್ನು ಶಾಪಿಂಗ್ ಮಾಲ್ ಒಂದರ ಬಳಿ ಎಸೆದು ಪರಾರಿಯಾಗಿದ್ದಾರೆ.
ಮೊಬೈಲ್ ರಿಪೇರಿ ಮಾಡಿಕೊಡಿ ಎಂದು ಬಂದೋಳು ಹೀಗಾ ಮಾಡೋದು!
ಸಂತ್ರಸ್ತ ಮಹಿಳೆ ಹೈಬೋವಲ್ ಗ್ರಾಮದ ನಿವಾಸಿ. ಇತ್ತೀಚೆಗಷ್ಟೇ ಆಕೆಗೆ ಮದುವೆಯಾಗಿತ್ತು. ಈಕೆ ಮಹಿಳೆ ಮೆಹಂದಿ ಹಾಕುವ ಕೆಲಸ ಮಾಡಿಕೊಂಡಿದ್ದಳು. ಅದರಂತೆ ಮದುವೆ ಕಾರ್ಯಕ್ರಮವೊಂದರಲ್ಲಿ ಮೆಹಂದಿ ಹಚ್ಚಲು ಹೋಗಿದ್ದ ವೇಳೆಯಲ್ಲಿ ಕಾಮುಕರಿಂದ ಅತ್ಯಾಚರಕ್ಕೆ ಒಳಗಾಗಿದ್ದಾಳೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇತ್ತ ಪೊಲೀಸರು ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








