ಮೊಬೈಲ್ ರಿಪೇರಿ ಮಾಡಿಕೊಡಿ ಎಂದು ಬಂದೋಳು ಹೀಗಾ ಮಾಡೋದು!
ಬೆಂಗಳೂರು: ತನ್ನ ಮೊಬೈಲ್ ಫೋನ್ ಹಾಳಾಗಿ ಹೋಗಿದೆ ರಿಪೇರಿ ಮಾಡಿಕೊಡಿ ಎಂದು ನಾಟಕವಾಡಿದ್ದ ಮಹಿಳೆಯ ನೌಟಂಕಿ ಬಲೆಗೆ ಬಿದ್ದ ಮೊಬೈಲ್ ಅಂಗಡಿಯವ ಕೊನೆಗೆ ಪಡಬಾರದ ಪಾಡು ಪಟ್ಟಿದ್ದಾನೆ. ಹೌದು ಕಲಾಸಿಪಾಳ್ಯ ಬಳಿ ಮೊಬೈಲ್ ಜಿಯಾವುಲ್ಲ ಎಂಬಾತ ಮೊಬೈಲ್ ರಿಪೇರಿ ಕೆಲಸ ಮಾಡಿಕೊಂಡಿದ್ದ. ದೌಲತ್ ಎಂಬ ಖತರ್ನಾಕ್ ಮಹಿಳೆಯೊಬ್ಬಳು ಆತನ ಬಳಿ ಹಣವಿರೋದನ್ನ ತಿಳಿದುಕೊಂಡಿದ್ದಳು. ಹೇಗಾದರೂ ಮಾಡಿ ಆತನ ಹಣ ದೋಚಿ ನಾಮ ಹಾಕಬೇಕು ಅಂತ ದೌಲತ್ ತನ್ನ ಟೀಂ ಜೊತೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಳು. ಅದರಂತೆ ಜಿಯಾವುಲ್ಲಾ ಬಳಿ ತೆರಳಿದ್ದ ದೌಲತ್ ತನ್ನ ಮೊಬೈಲ್ ಹಾಳಾಗಿದೆ. ದಯಮಾಡಿ ರಿಪೇರಿ ಮಾಡಿಕೊಡಿ ಎಂದಿದ್ದಳು. ಜಿಯಾವುಲ್ಲಾ ಆಕೆಯ ಮಾತು ನಂಬಿ ಒಪ್ಪಿದ್ದ.
10 ವರ್ಷಗಳಿಂದ ಚಿಂದಿ ಹಾಯುತ್ತಾ ಜೀವನ ಮಾಡ್ತಿದ್ದವ ಮರಳಿ ಕುಟುಂಬ ಸೇರಿದ : ಕಾರಣ ಹೇರ್ ಸ್ಟೈಲ್..!
ಇದಾದ ಬಳಿಕ ತನ್ನ ಗ್ಯಾಂಗ್ ಜೊತೆಗೆ ಜಿಯಾವುಲ್ಲನ ಮನೆಗೆ ತೆರಳಿದ ದೌಲತ್ ಅಸಲಿ ಬಣ್ಣ ಬಯಲಾಗಿದೆ. ಆಕೆ ಹಾಗೂ ಆಕೆಯ ಗ್ಯಾಂಗ್ ಸೇರಿ ಜಿಯಾವುಲ್ಲಾನನ್ನ ಬೆತ್ತಲೆಗೊಳಿಸಿ ವಿಡಿಯೋ ಸೆರೆ ಹಿಡಿದಿದ್ದಾರೆ. ಬಳಿಕ ಆತನ ಮೇಲೆ ಹಲ್ಲೆ ನಡೆಸಿ 25 ಸಾವಿರ ರೂಪಾಯಿ ಹಣ ದೋಚಿದ್ದಾರೆ. ಇಷಚ್ಟಕ್ಕೇ ಸುಮ್ಮನಾಗದೇ ಮತ್ತಷ್ಟು ಹಣಕ್ಕೆ ಟಾರ್ಚರ್ ಕೊಟ್ಟಿದ್ದಾರೆ. ದುಡ್ಡು ಕೊಡದೇ ಇದ್ದರೆ ಬೆತ್ತಲೆ ವಿಡಿಯೋ ಸೋಷಿಯಲ್ ಮೀಡಿಯಾಗೆ ಅಪ್ ಲೋಡ್ ಮಾಡೋದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಈ ಗ್ಯಾಂಗ್ ನ ಕಿರುಕುಳದಿಂದ ಬೇಸತ್ತುಹೋಗಿದ್ದ ಜಿಯಾವುಲ್ಲಾ ಕೊನೆಗೆ ಸಹಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ. ಜಿಯಾವುಲ್ಲಾ ದೂರು ಆಧರಿಸಿದ ಪೊಲೀಸರು ಆರೋಪಿ ಸಲ್ಮಾನ್ ಎಂಬಾತನನ್ನ ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಸೆರೆಗೆ ಬಲೆ ಬೀಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel