ಬೆಂಗಳೂರು: ಹಳ್ಳಿಫೈಟ್ ಎಂದೇ ಪರಿಗಣಿತವಾಗಿರುವ ಮೊದಲ ಹಂತದ ಗ್ರಾಮ ಪಂಚಾಯ್ತಿ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ 5762 ಗ್ರಾಮ ಪಂಚಾಯಿತಿಗಳಿಗೆ ಇಂದು ಮೊದಲ ಹಂತದ ಚುನಾವಣೆ ನಡೆದರೆ, ಡಿ.27ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.
ಬೀದರ್ ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳನ್ನು ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಯಲಿದೆ. ಎಲ್ಲಾ ಜಿಲ್ಲೆಗಳಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶ ಡಿ.30ರಂದು ನಡೆಯಲಿದೆ.

ಪ್ರತಿ ಜಿಲ್ಲೆಗಲ್ಲೂ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೊದಲ ಅರ್ಧದಷ್ಟು ತಾಲೂಕುಗಳಲ್ಲಿ ಮೊದಲ ಹಂತದ ಚುನಾವಣೆ, ಉಳಿದ ತಾಲೂಕುಗಳಲ್ಲಿ 2ನೇ ಹಂತದ ಮತದಾನ ನಡೆಯಲಿದೆ. ಈಗಾಗಲೇ ಹಳ್ಳಿಫೈಟ್ ಪ್ರಚಾರದ ಅಬ್ಬರ ರಾಜಕೀಯ ಪಕ್ಷಗಳ ನಾಯಕರನ್ನೂ ನಾಚಿಸುವಂತೆ ಮಾಡಿದೆ. ರಾಜಕೀಯ ಪಕ್ಷಗಳ ಚಿನ್ಹೆ ಇಲ್ಲದೆ ನಡೆಯುತ್ತಿರುವ ಈ ಚುನಾವಣೆ ಪಕ್ಷಾತೀತವಾಗಿದೆ. ಆದರೂ, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಶಾಸಕರು, ಸಚಿವರ-ಸಂಸದರ ಬೆಂಬಲಿಗರು ಕಣಕ್ಕೆ ಇಳಿದಿರುವುದರಿಂದ ಹಳ್ಳಿಫೈಟ್ ತುಂಬಾನೆ ಗಮನ ಸೆಳೆದಿದೆ.
ಮತಗಟ್ಟೆಗೆ ವಾಮಾಚಾರ, ಗ್ರಾಮಸ್ಥರಿಂದ ಆಕ್ರೋಶ
ಹಾಸನ: ಮತದಾನ ಮಾಡುವ ಜಾಗದಲ್ಲಿ ವಾಮಾಚಾರ ಮಾಡಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹುಲ್ಲಂಗಾಲ ಗ್ರಾಮದಲ್ಲಿ ನಡೆದಿದೆ. ಮತದಾನ ಮಾಡುವ ಶಾಲೆಯ ಬಳಿ ಎರಡು ಕಡೆ ವಾಮಾಚಾರ ಮಾಡುವ ಕುಡಿಕೆಗಳನ್ನು ಮಣ್ಣಿನಲ್ಲಿ ಹೂತಿಟ್ಟು ಕಿಡಿಗೇಡಿಗಳು ಪೂಜೆ ಮಾಡಿದ್ದಾರೆ. ಈ ರೀತಿ ವಾಮಾಚಾರ ಮಾಡಿದ್ರೆ ಮತದಾನ ಮಾಡೋಕೆ ಬರಲು ಭಯವಾಗುತ್ತೆ. ಎಲ್ಲೆಲ್ಲೆ ವಾಮಾಚಾರ ಮಾಡಿದ್ದಾರೆ, ಅದನ್ನೆಲ್ಲ ಪತ್ತೆಹಚ್ಚಿ ತೆಗೆದು ಹಾಕಬೇಕು,
ಇಲ್ಲದಿದ್ದರೆ ಮಂಗಳವಾರ ಮತದಾನ ಮಾಡಲು ಬರಲ್ಲ ಎಂದು ಗ್ರಾಮಸ್ಥಉ ಎಚ್ಚರಿಕೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೀತಿ ಮಾಡಿರುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಚಪ್ಪಲಿ ಹಿಡಿದು ಮಹಿಳೆಯರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಗಟ್ಟೆ ಛಾವಣಿ ಕುಸಿತ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 105ರಲ್ಲಿ ಛಾವಣಿ ಕುಸಿದಿರುವ ಘಟನೆ ನಡೆದಿದೆ. ಉರ್ದು ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 105ಯಲ್ಲಿ ವಿದ್ಯುತ್ ಸಮಸ್ಯೆ ಇತ್ತು. ಹೀಗಾಗಿ ಪಕ್ಕದ ಕೊಠಡಿಯಲ್ಲಿ ಚುನಾವಣೆ ಸಿದ್ಧತೆ ನಡೆದಿತ್ತು.

ಇದ್ದಕ್ಕಿದ್ದಂತೆ ಕೊಠಡಿ ಛಾವಣಿ ಕುಸಿದಿದ್ದು, ಅದೃಷ್ಟವಷಾತ್ ಯಾವುದೇ ಅನಾಹುತವಾಗಿಲ್ಲ. ಘಟನಾ ಸ್ಥಳಕ್ಕೆ ಹೊನ್ನಾಳಿ ತಹಸೀಲ್ದಾರ್ ತುಷಾರ್ ಬಿ. ಹೊಸೂರು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಕ್ಕದ ಕೊಠಡಿಗೆ ಮತಗಟ್ಟೆ ಶಿಫ್ಟ್ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








