‘ದೆಹಲಿಯ ಪ್ರತಿಭಟನೆಕಾರರು ರೈತರಲ್ಲ’, ಅರ್ಬನ್ ನಕ್ಸಲರು: ಶೋಭಾ ಕರಂದ್ಲಾಜೆ
ಕೇಂದ್ರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ಉಗ್ರ ಸ್ವರೂಪದ ಪ್ರತಿಭಟನೆ ಕೈಗೊಂಡಿದ್ದಾರೆ. ಪ್ರತಿಭಟನೆಗೆ ಕಾಂಗ್ರೆಸ್ ನಾಯಕರು ಪ್ರತಿಪಪಕ್ಷದ ರಾಜಕೀಯ ಮುಖಂಡರು ಸಪೋರ್ಟ್ ಮಾಡಿದ್ದಾರೆ. ಇತ್ತ ಬಿಜೆಪಿ ನಾಯಕರು ಪ್ರತಿಭಟನೆಗೆ ಕರೆಕೊಟ್ಟವರ ವಿರುದ್ಧ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯುತ್ತಿದ್ದು, ಕೇಂದ್ರದ ಕೃಷಿ ಕಾಯ್ದೆಯನ್ನ ಸಮರ್ಥಿಸಿಕೊಳ್ತಾಯಿದ್ದಾರೆ. ಇದೀಗ ಸಂಸದೆ ಶೋಭಾ ಕರಂದ್ಲಾಜೆ ಸಹ ರೈತ ಮುಖಂಡರ ವಿರುದ್ಧ ಗುಡುಗುಗಿದ್ದಾರೆ.
ಬ್ರಿಟನ್ ನಿಂದ ಭಾರತಕ್ಕೆ ಬಂದ ಐವರಲ್ಲಿ ಕೊರೊನಾ ಹೊಸ ತಳಿ ಸೋಂಕು ಪತ್ತೆ..!
ಅಂದ್ಹಾಗೆ ಸದಾ ಒಂದಲ್ಲಾ ಒಂದು ವಿವಾದಾತ್ಮಕ ಹೇಳಿಕೆಗಳನ್ನೇ ನೀಡುತ್ತಾ ಸುದ್ದಿಯಲ್ಲಿರುವ ಶೋಭಾ ಕರಂದ್ಲಾಜೆ ಅವರು ಈ ಬಾರಿ ಮತ್ತೊಮ್ಮೆ ಅಂತಹದ್ದೇ ಹೇಳಿಕೆಯೊಂದನ್ನ ನೀಡಿದ್ದಾರೆ. ಹೌದು ಕೇಂದ್ರದ ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ ‘ತುಕುಡೇ ಗ್ಯಾಂಗ್’ ಇಂದು ಕೇಂದ್ರದ ಕೃಷಿ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದೆ. ಪ್ರತಿಭಟನೆ ನಿರತರೆಲ್ಲ ರೈತರಲ್ಲ, ಅರ್ಬನ್ ನಕ್ಸಲರು ಎಂದು ಕಿಡಿಕಾರಿದ್ದಾರೆ.
ಲಂಡನ್ ಕೊರೊನಾ ವೈರಸ್‍ಗೆ ಬೆಚ್ಚಿದ ಕರ್ನಾಟಕ: ಮತ್ತೆ ನೈಟ್ ಕಫ್ರ್ಯೂ ಸುಳಿವು ಕೊಟ್ಟ ಸುಧಾಕರ್..!
ಕಾರ್ಕಳದಲ್ಲಿ ಈ ಕುರಿತಾಗಿ ಮಾತನಾಡಿರೋ ಅವರು ಹರಿಯಾಣ ಮತ್ತು ಪಂಜಾಬಿನ ರೈತರು ದೆಹಲಿಯಲ್ಲಿ ರೈತ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಅವರೆಲ್ಲ ನಿಜವಾದ ರೈತರಲ್ಲ. ರಾಜ್ಯದಲ್ಲಿ ಕೂಡ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಅಧಿವೇಶನ ಸಂದರ್ಭ ಹೋರಾಟ ನಡೆಸಿದ್ದರು. ಕೋಡಿಹಳ್ಳಿ ನೇತೃತ್ವದ ರೈತ ಹೋರಾಟ ರಾಜಕೀಯ ಪ್ರೇರಿತ. ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ಧರಾಮಯ್ಯ ಇವರೆಲ್ಲ ಸೇರಿಕೊಂಡು ಸರಕಾರದ ವಿರುದ್ಧ ನಡೆಸಿದ ಪಿತೂರಿ ಎಂದು ವಾಗ್ದಾಳಿ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








